Student Fight: ಬೆಂಗಳೂರಲ್ಲಿ ಶಾಲಾ ಬಾಲಕಿಯರ ಬಿಗ್ ಫೈಟ್; ಗ್ಯಾಂಗ್ ವಾರ್ ವಿಡಿಯೋ ವೈರಲ್

ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೊಡೆಯಲು ಹಾಕಿ ಸ್ಟಿಕ್ ಹಾಗೂ ರಾಡ್​​ ಬಳಸಿದ್ದಾರೆ. ವಿದ್ಯಾರ್ಥಿಯು ಯುವತಿಯೊಬ್ಬಳನ್ನು ಹಿಂಸಾತ್ಮಕವಾಗಿ ಕೂದಲಿನಿಂದ ಮೆಟ್ಟಿಲುಗಳ ಕೆಳಗೆ ಎಳೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ

ಬಾಲಕಿಯರ ಹೊಡೆದಾಟ

ಬಾಲಕಿಯರ ಹೊಡೆದಾಟ

  • Share this:
ಬೆಂಗಳೂರು (ಮೇ 18) : ನಗರದ ಪ್ರತಿಷ್ಠಿತ ಶಾಲೆಯೊಂದರ (School) ವಿದ್ಯಾರ್ಥಿಗಳು (Student) ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳ ಎರಡು ಗುಂಪು ಶಾಲೆಯ ಆವರಣದಲ್ಲಿ ಪರಸ್ಪರ ಹಿಂಸಾತ್ಮಕವಾಗಿ ಹಲ್ಲೆ ಹಾಗೂ ನಿಂದನೆ ಮಾಡಿಕೊಂಡಿರುವುದು ಕಂಡು ಬಂದಿದೆ.  ಶಾಲೆಯ ಹಲವಾರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳಾಡಿಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ಕ್ಯಾಮರಾದಲ್ಲಿ (Camera) ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ವಿದ್ಯಾರ್ಥಿಗಳು ಹೊಡೆದಾಟಲು ಹಾಕಿ ಸ್ಟಿಕ್ ಬಳಕೆ

ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೊಡೆಯಲು ಹಾಕಿ ಸ್ಟಿಕ್ ಹಾಗೂ ರಾಡ್​​ ಬಳಸಿದ್ದಾರೆ. ವಿದ್ಯಾರ್ಥಿಯು ಯುವತಿಯೊಬ್ಬಳನ್ನು ಹಿಂಸಾತ್ಮಕವಾಗಿ ಕೂದಲಿನಿಂದ ಮೆಟ್ಟಿಲುಗಳ ಕೆಳಗೆ ಎಳೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಹೊಡೆದಾಟಕ್ಕೆ ನಿಖರ ಕಾರಣಗಳು ಕಂಡು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಬಾಯ್ ಫ್ರಂಡ್ಸ್ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ.ವಿದ್ಯಾರ್ಥಿಗಳ ಜಟಾಪಟಿ- ಹಲವರಿಗೆ ಗಾಯ 

ಜಟಾಪಟಿಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರ ಮೂಗಿನಲ್ಲಿ ರಕ್ತಸ್ರಾವಾಗಿದೆ ಎಂದು ಹೇಳಲಾಗುತ್ತಿದೆ. ಆಘಾತಕಾರಿ ಘಟನೆಯ ವಿಡಿಯೋದಲ್ಲಿ ಹಿಂಸಾತ್ಮಕ ಘರ್ಷಣೆಗೆ ಪೋಷಕರು ಸೇರುವುದನ್ನು ತೋರಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಹಿಂಸಾತ್ಮಕ ಘರ್ಷಣೆಯು ಅನೇಕ ಮೂಗೇಟುಗಳನ್ನು ಉಂಟುಮಾಡಿದೆ. ಇದರ ಹಿಂದಿನ ಕಾರಣ ತಿಳಿದುಬಂದಿಲ್ಲ ಮತ್ತು ಶಾಲೆಯು ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: IPL Betting: ಅವಳಿ ನಗರದಲ್ಲಿ ಜೋರಾದ ಬೆಟ್ಟಿಂಗ್ ದಂಧೆ! 58 ಪ್ರಕರಣ ದಾಖಲು, 4.23 ಲಕ್ಷ ರೂಪಾಯಿ ಜಪ್ತಿ

ಹಲ್ಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿ

ಗಾಯಗೊಂಡ ಬಾಲಕಿಯರ ಪೋಷಕರು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ರು. ಗಲಾಟೆಯಲ್ಲಿ ನಮ್ಮ ಮಕ್ಕಳು ಗಾಯಗೊಂಡಿದ್ದಾರೆ. ಹಲ್ಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪೋಷಕರು ವಾಗ್ದಾಳಿ ನಡೆಸಿದ್ದಾರೆ.

ಶಾಲಾ ಆಡಳಿತ ಮಂಡಳಿಯಿಂದ ಸಂಧಾನ

ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿಗೆ ಅವಹೇಳನ ಪೋಸ್ಟ್ ಹಿನ್ನೆಲೆ, ರಸ್ತೆಯಲ್ಲಿಯೇ ವಿದ್ಯಾರ್ಥಿನಿಯರ ಮಾರಾಮಾರಿ, ಮಾತುಕತೆ ಕರೆದ ವೇಳೆ ವಾಗ್ವಾದ, ಬಡಿದಾಟ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯಲ್ಲಿ ಪೋಷಕರ ಜೊತೆ ಸಭೆ ನಡೆಸಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಯರು, ಪೋಷಕರು ಸಭೆಯಲ್ಲಿ ಭಾಗಿಯಾಗಿದ್ರು. ಶಾಲಾ ಆಡಳಿತ ಮಂಡಳಿಯಿಂದ ಸಂಧಾನ ಸಭೆ ಆಯೋಜಿಸಲಾಗಿದ್ದು, ಆಡಳಿತ ಮಂಡಳಿ ಅವರು ಪೋಷಕರ ಮನವೊಲಿಕೆ ಮಾಡ್ತಿದ್ದಾರೆ.

ಸಿಎಂ ಬೊಮ್ಮಾಯಿ ನಗರ ಪ್ರದಕ್ಷಿಣೆ

ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆ ಅಬ್ಬರ ಮತ್ತೆ ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದಲೇ ಬಿಟ್ಟೂ ಬಿಡದೇ ಸುರಿದ ಭಾರೀ ಮಳೆಗೆ ಅನಾಹುತವೇ ಸೃಷ್ಟಿಯಾಗಿದೆ. ಉಲ್ಲಾಳ ಉಪನಗರ ವ್ಯಾಪ್ತಿಯಲ್ಲಿ ಕಾಮಗಾರಿ ವೇಳೆ ನೀರು ನುಗ್ಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಇತ್ತ ರಾಜರಾಜೇಶ್ವರಿ ನಗರ, ಯಲಹಂಕ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ.

ಇದನ್ನೂ ಓದಿ: Murder: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ಕೊಂದ ಅಕ್ಕ! ಪೊಲೀಸರನ್ನು ಯಾಮಾರಿಸೋಕೆ ಹೋಗಿ ಖೆಡ್ಡಕ್ಕೆ ಬಿದ್ದ ಕಿಲಾಡಿ ಜೋಡಿ

 ಸಿಎಂ ಬೊಮ್ಮಾಯಿ ನಗರ ಪ್ರದಕ್ಷಿಣೆ

ಬೆಂಗಳೂರಿನಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆಯೇ ಸಿಟಿ ರೌಂಡ್ಸ್ ಹೊಡೆದರು. ಭಾರೀ ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಆರ್‌.ಆರ್. ನಗರ ಸಹಿತ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಹಲವರು ಈ ವೇಳೆ ಸಿಎಂಗೆ ಸಾಥ್ ನೀಡಿದ್ದರು.
Published by:Pavana HS
First published: