ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ: ರಾಜ್ಯದಲ್ಲಿ ಮತ್ತೆ ಶಾಲಾ-ಕಾಲೇಜು ಬಂದ್ ಆಗುತ್ತಾ? ಸಚಿವ B.C.Nagesh ಸ್ಪಷ್ಟನೆ

ಶಾಲಾ ಕಾಲೇಜು ಬಂದ್ ಬಗ್ಗೆ ಯಾವುದೇ ಗೊಂದಲ ಬೇಡ.  ಧೈರ್ಯವಾಗಿ ಶಾಲಾ ಕಾಲೇಜು ಗಳಿಗೆ ಮಕ್ಕಳನ್ನ ಕಳುಹಿಸಿ. ನಿಮ್ಮ ಪರವಾಗಿ ಸರ್ಕಾರ ಹಾಗು ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ ಎಂದು ಪೋಷಕರಿಗೆ ಧೈರ್ಯ ಹೇಳಿದರು.

ಸಚಿವ ಬಿ.ಸಿ.ನಾಗೇಶ್

ಸಚಿವ ಬಿ.ಸಿ.ನಾಗೇಶ್

  • Share this:
ಓಮೈಕ್ರಾನ್ ರೂಪಾಂತರಿ ವೈರಸ್ (Omicron Variant) ಆತಂಕದ ಹಿನ್ನೆಲೆ ರಾಜ್ಯದಲ್ಲಿ ಶಾಲಾ-ಕಾಲೇಜು (School And College) ಬಂದ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ (Education Minister B C Nagesh) ಸಷ್ಟನೆ ನೀಡಿದ್ದಾರೆ, ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಸಚಿವರು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ಬಂದ್ ಇಲ್ಲ. ಎಂದಿನಂತೆ ಶಾಲಾ ಕಾಲೇಜು ತರಗತಿಗಳು ಮುಂದುವರಿಯುತ್ತವೆ. ವಿಧ್ಯಾರ್ಥಿಗಳಲ್ಲಿ (Students) ಹಾಗೂ ಪೋಷಕ(Parents)ರಲ್ಲಿ ಯಾವುದೇ ಗೊಂದಲ ಬೇಡ ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ ತಜ್ಞರೇ ಹೇಳುವಂತೆ ಫೆಬ್ರವರಿ ಅಂತ್ಯದಲ್ಲಿ ಮೂರನೇ ಅಲೆ ಎಂದಿದ್ದಾರೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ವಿಶೇಷವಾದ SOP ಜಾರಿ ಮಾಡಲಾಗಿದೆ. ಸ್ವಚ್ಚತೆ, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲದಿದ್ರೆ ತರಗತಿಗಳಿಗೆ ಬರಲು ಅವಕಾಶ ಇಲ್ಲ. ಎಲ್ಲ ಪೋಷಕರು ಸಹ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಪೋಷಕರಿಗೆ ಮನವಿ ಮಾಡಿ ಎರಡು ಡೋಸ್ ತೆಗೆದುಕೊಳ್ಳುವಂತೆ ತಿಳಿ ಹೇಳಲಾಗ್ತಿದೆ ಎಂದರು.

ಶಾಲಾ ಕಾಲೇಜು ಬಂದ್ ಬಗ್ಗೆ ಯಾವುದೇ ಗೊಂದಲ ಬೇಡ.  ಧೈರ್ಯವಾಗಿ ಶಾಲಾ ಕಾಲೇಜು ಗಳಿಗೆ ಮಕ್ಕಳನ್ನ ಕಳುಹಿಸಿ. ನಿಮ್ಮ ಪರವಾಗಿ ಸರ್ಕಾರ ಹಾಗು ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ ಎಂದು ಪೋಷಕರಿಗೆ ಧೈರ್ಯ ಹೇಳಿದರು.

ಇದನ್ನೂ ಓದಿ:  ಓಮೈಕ್ರಾನ್ ಅಪಾಯ ಅಲ್ಲ ಅಂತ ಭಾವಿಸೀರಿ ಜೋಕೆ; ಮಕ್ಕಳು ಹುಷಾರ್ ಎಂದ WHO

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಚಿಕ್ಕಮಗಳೂರು, ಕೊಡಗು ಚಾಮರಾಜನಗರ ಜಿಲ್ಲೆಯಲ್ಲೇ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಚಿಕ್ಕಮಗಳೂರು 92,  ಕೇಸ್, ಕೊಡಗು 11, ಚಾಮರಾಜನಗರ 7, ಬೆಂಗಳೂರು ಉತ್ತರ  2, ಚಿತ್ರದುರ್ಗ  2, ಧಾರವಾಡ 2, ಗದಗ  1, ಹಾಸನ 4, ಮಧುಗಿರಿ 5, ಮೈಸೂರು 2, ಶಿವಮೊಗ್ಗ ಮತ್ತು ಶಿರಸಿಯಲ್ಲಿ ತಲಾ ಓರ್ವ ವಿದ್ಯಾರ್ಥಿಗೆ ಸೋಂಕು ತಗುಲಿದೆ.ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು

ರಾಜ್ಯದ ಕೆಲವೆಡೆ ಕೋವಿಡ್-19 ಕ್ಲಸ್ಟರ್‌ಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಕಟ್ಟು ನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ‌. ಈವರೆಗಿನ ಮಾಹಿತಿ ಪ್ರಕಾರ ಆತಂಕಪಡುವ ಅಗತ್ಯ ಇಲ್ಲ. ಎಲ್ಲರೂ ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.

ತರಗತಿಗಳು ಹಾಗೂ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ಮುಂದುವರೆಯುತ್ತವೆ. ಕೋವಿಡ್-19 ಪ್ರಕರಣಗಳ ಕುರಿತು ನಿರಂತರವಾಗಿ ಅವಲೋಕನ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕೋವಿಡ್-19 ತಜ್ಞರ ಸಮಿತಿ ವರದಿ ಪಡೆದು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಿನ್ನೆ ಸಚಿವರು ಹೇಳಿದ್ದರು.

ಇದನ್ನೂ ಓದಿ:  Omicron ಸೋಂಕಿಗೆ ಹೆದರಿ ಹೆಂಡತಿ, ಮಕ್ಕಳನ್ನು ಕೊಲೆಗೈದ ಉತ್ತರಪ್ರದೇಶದ ವೈದ್ಯ

ನೋಡೆಲ್ ಅಧಿಕಾರಿಗಳ ನೇಮಕ

ಓಮೈಕ್ರಾನ್ ಮತ್ತು ಕೊರೊನಾ ಪಸರಿಸುವ ಹೆಚ್ಚಾದ ಹಿನ್ನೆಲೆ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ನೋಡೆಲ್ ಅಧಿಕಾರಿಗಳ ನೇಮಕ ಮಾಡಿದೆ. ಕಡಿಮೆ ಸಂಖ್ಯೆಯಲ್ಲಿ ಓಮೈಕ್ರಾನ್ ಪತ್ತೆಯಾಗುತ್ತಿರುವಾಗಲೇ ರಾಜ್ಯ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. 7 ಐಎಎಸ್‌ ಅಧಿಕಾರಿಗಳ ತಂಡ ರಚಿಸಿ ವಿವಿಧ ವಿಭಾಗಗಳಿಗೆ ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

1. ಮುನೀಶ್ ಮೌದ್ಗಿಲ್ : ರಾಜ್ಯ ವಾರ್ ರೂಂ & ಲಿಕ್ವಿಡ್ ಆಕ್ಸಿಜನ್ ಪೂರೈಕೆ ವಿಭಾಗದ ನೋಡೆಲ್ ಅಧಿಕಾರಿ

2. ಪಂಕಜ್ ಕುಮಾರ್ ಪಾಂಡೆ : ಹೋಮ್ ಐಸೋಲೇಷನ್ ನಿರೀಕ್ಷಣಾ ನೋಡೆಲ್ ಅಧಿಕಾರಿ

3. ಎಂ. ಶೀಖಾ : ವಿದೇಶದಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ & ಸ್ಕ್ರೀನಿಂಗ್ ನೋಡೆಲ್ ಅಧಿಕಾರಿ

4 ಪ್ರತಾಪ್ ರೆಡ್ಡಿ & ಗುಂಜನ್ ಕೃಷ್ಣ : ಆಕ್ಸಿಜನ್ ಸರಬರಾಜು

5. ಶಿಲ್ಪಾನಾಗ್ : ನೋಡೆಲ್ ಅಧಿಕಾರಿಗಳ ನಿರೀಕ್ಷಕರು, ರಾಜ್ಯ ನಿರೀಕ್ಷಕರ ಘಟಕ

6. ಕುಮಾರ್ ಪುಷ್ಕರ್ : ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡೆಲ್ ಅಧಿಕಾರಿ

7. ಎಂ ಟಿ ರೇಜು : ಮೆಡಿಸನ್ ನೋಡೆಲ್ ಅಧಿಕಾರಿ
Published by:Mahmadrafik K
First published: