Sweater Scam: ಭ್ರಷ್ಟ ಅಧಿಕಾರಿಗಳಿಂದ ಸಂಕಷ್ಟ ಎದುರಿಸುತ್ತಿದ್ದ ಕೋಮಲ್​ ಬಗ್ಗೆ 4 ತಿಂಗಳ ಹಿಂದೆ ಬರೆದುಕೊಂಡಿದ್ದ ನಟ ಜಗ್ಗೇಶ್!

Jaggesh Tweet: ಕಳೆದ ಏಪ್ರಿಲ್​ 27ರಂದು ಸೋದರ ಕೋಮಲ್​ ಬಗ್ಗೆ ಜಗ್ಗೇಶ್ ಬರೆದುಕೊಂಡಿದ್ದರು. ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕು ಸಾಧಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು.

 ಕೋಮಲ್​-  ಜಗ್ಗೇಶ್​

ಕೋಮಲ್​- ಜಗ್ಗೇಶ್​

  • Share this:
    ಸ್ಯಾಂಡಲ್​ವುಡ್ ನಟ ಕೋಮಲ್​​ ಶಾಲಾ ಮಕ್ಕಳ ಸ್ವೆಟರ್​ ಹಂಚಿಕೆ ವಿಚಾರವಾಗಿ ಭ್ರಷ್ಟಾಚಾರ ನಡೆಸಿದ್ದಾರೆಂಬ ಕೇಳಿ ಬಂದಿದೆ. ಆದರೆ ಈ ವಿಚಾರವಾಗಿ  ಕೋಮಲ್​ ಪ್ರತಿಕ್ರಿಯಿಸಿದ್ದು, ನನಗೂ ಅದಕ್ಕೂ ಸಂಬಂಧವಿಲ್ಲ. ಈ ಆರೋಪ ಕೇಳಿ ಬಂದ ಬಳಿಕ ನಾನು ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮೇಲೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಂದು ಹೇಳಿದ್ದಾರೆ.

    ಕೋಮಲ್​ ಅವರು ಸ್ಯಾಂಡಲ್​ವುಡ್​  ಹಾಸ್ಯ ನಟ ಜಗ್ಗೇಶ್​ ಅವರ ತಮ್ಮ. ಅಣ್ಣನಂತೆಯೇ ಕೋಮಲ್​ ಕೂಡ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಾರಂಭದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡ ಅವರು ನಾಯಕ ನಟನಾಗಿ ಬಣ್ಣ ಹಾಕಿದ್ದಾರೆ. ಆದರೀಗ ಬದುಕು ನಿರ್ವಹಿಸಲು ಸಿನಿಮಾದ ಜೊತೆಗೆ ಶಾಲಾ ಮಕ್ಕಳ ಸ್ವೆಟರ್​ ಹಂಚಿಕೆ ಕೆಲಸವನ್ನು ಮಾಡುತ್ತಿದ್ದರು.

    ಸ್ವಾಭಿಮಾನದ ಬದುಕು ಸಾಗಿಸುತ್ತುರುವ ತಮ್ಮನ ಬಗ್ಗೆ ಜಗ್ಗೇಶ್​ ಟ್ವೀಟ್​ ವೈರಲ್!

    ಕಳೆದ ಏಪ್ರಿಲ್​ 27ರಂದು ಸೋದರ ಕೋಮಲ್​ ಬಗ್ಗೆ ಜಗ್ಗೇಶ್ ಬರೆದುಕೊಂಡಿದ್ದರು. ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕು ಸಾಧಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು.

    ಕೋಮಲ್​ ಬಿಬಿಎಂಪಿಯಲ್ಲಿ ಸ್ವಂತ ವ್ಯವಹಾರ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್ ಗೆ ಅಲ್ಲಿನ ಕೆಲವು ಲಂಚಬಾಕ  ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಹಣ ಪಡೆಯಲು ಓಡಾಡುತ್ತಿದ್ದ ತಮ್ಮನಿಗೆ ಕೊರೊ‌ನಾ ಪಾಸಿಟಿವ್ ಆಗಿ ಸೀರಿಯಸ್‌ ಆಗಿಬಿಟ್ಟ ಎಂದು ಜಗ್ಗೇಶ್​​ ನೋವು ಹಂಚಿಕೊಂಡಿದ್ದರು.

    Sweater Scam: ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ; ಮಾನನಷ್ಟ ಮೊಕದ್ಧಮೆ ಹೂಡುತ್ತೇನೆ ಎಂದ ನಟ ಕೋಮಲ್​​



    ಏನಿದು ಪ್ರಕರಣ? (BBMP Sweater Scam)

    ಬಿಬಿಎಂಪಿ ಪ್ರತಿವರ್ಷ ತನ್ನ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್​ನ್ನು ವಿತರಿಸುತ್ತದೆ. ಈ ಸ್ವೆಟರ್​ ವಿತರಣೆಗೆ ಟೆಂಡರ್​ ಕರೆಯಲಾಗುತ್ತದೆ. ಈ ಟೆಂಡರ್​ ಅನ್ನು ನಟ ಕೋಮಲ್​ ಪಡೆದಿದ್ದಾರೆ. ಕಳೆದ ವರ್ಷ ಈ ಸ್ವೇಟರ್​ ಟೆಂಡರ್​ ಅನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಹಣವನ್ನು ಕೂಡ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ಕಳೆದ ವರ್ಷ ಶಾಲೆಗಳೆ ನಡೆದಿಲ್ಲ. ಆದರೂ ಕೂಡ ಸ್ವೇಟರ್​ ವಿತರಣೆ ಮಾಡಿದ್ದೇವೆ ಎಂದು ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

    ಈ ಸಂಬಂಧ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ವೇಟರ್ ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಕಮಿಷನರ್ ಕಚೇರಿ ಮುಂಭಾಗ ನೂರಾರು ಸ್ವೆಟರ್ ಗಳನ್ನು ಸುರಿದು ಒಂದು ಸ್ವೆಟರ್ 50 ಬೆಲೆ ನಿಗದಿ ಮಾಡಿ ಹರಾಜು ಮಾಡಿ ಪ್ರತಿಭಟನೆ ನಡೆಸಿದರು.

    ಆದರೀಗ ಕೋಮಲ್​ ಕುರಿತಾಗಿ ಭ್ರಷ್ಠಾಚಾರ ಆರೋಪ ಕೇಳಿಬಂದಿದೆ. ಕೋಮಲ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ ಎಂದಿದ್ದಾರೆ. 
    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Harshith AS
    First published: