Russia Ukraine War: ಸಾಕು ನಾಯಿಗಾಗಿ ವಿದ್ಯಾರ್ಥಿ ಮನವಿ, ‘ಮಲಿಬು‘ ರಕ್ಷಣೆಗೆ ನಿಂತ್ರು ಬೆಂಗಳೂರು ಬಾಯ್ಸ್​

ಉತ್ತರಾಖಂಡದ ವಿದ್ಯಾರ್ಥಿಯೊಬ್ಬ ತನ್ನ ಸಾಕು ನಾಯಿ ಯನ್ನು ರಕ್ಷಿಸುವಂತೆ ಅಳಲು ತೋಡಿಕೊಂಡಿದ್ದ. ಸಾಕುನಾಯಿ ‘ಮಲಿಬು’ ಬಿಟ್ಟು ನಾನು ಭಾರತಕ್ಕೆ ಬರುವುದಿಲ್ಲವೆಂದು ಆತ ವಿಡಿಯೋ ಮಾಡಿದ್ದ ಸೋಶಿಯನ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದ

ಸಾಕು ನಾಯಿ ಜೊತೆ ರಿಷಭ್​

ಸಾಕು ನಾಯಿ ಜೊತೆ ರಿಷಭ್​

  • Share this:
ಬೆಂಗಳೂರು (ಮಾ.3): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia Ukraine War) ಮುಂದುವರೆದಿದ್ದು, ವಿದ್ಯಾರ್ಥಿಗಳು (Student) ಸೇರಿದಂತೆ ನೂರಾರು ಭಾರತೀಯರು ಯುದ್ಧಭೂಮಿಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ವಿರುದ್ಧ ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ.  ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಉಕ್ರೇನ್ ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.  ಭಾರತೀಯ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲೇ ಸಹಾಯಕ್ಕಾಗಿ ಕಾದು ಕುಳಿತಿದ್ದಾರೆ.  ಈ ನಡುವೆ ಉತ್ತಾರಖಂಡ (Uttarakhand) ಮೂಲದ‌ ವಿದ್ಯಾರ್ಥಿಯೊಬ್ಬ ತನ್ನ ಸಾಕು ನಾಯಿಯನ್ನು ಬಿಟ್ಟು ಬರಲ್ಲ. ನನ್ನ ಸಾಕುನಾಯಿಯನ್ನೂ (Pet dog) ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹುಡುಗನ ಮನವಿಗೆ ನಮ್ಮ ಬೆಂಗಳೂರು ಮೂಲದ ಹುಡುಗರು ಸ್ಪಂದಿಸಿದ್ದಾರೆ.

‘ಸಾಕುನಾಯಿ ಬಿಟ್ಟು ಭಾರತಕ್ಕೆ ಬರಲ್ಲ’

ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಸಮಯ ಕಳೆದಂತೆ ಮತ್ತಷ್ಟು ಭೀಕರಗೊಳ್ಳುತ್ತಿದೆ. ರಷ್ಯಾದ ಅಟ್ಟಹಾಸಕ್ಕೆ ಉಕ್ರೇನ್ ನಲುಗಿ ಬೆಂಡಾಗಿ ಹೋಗಿದೆ. ಇಡೀ ಜಗತ್ತೇ ಆತಂಕದಲ್ಲಿ ಈ ಸಂಘರ್ಷವನ್ನು ನೋಡುವಂತಾಗಿದೆ. ಈತನ್ಮಧ್ಯೆ ದೇಶದ ವಿದ್ಯಾರ್ಥಿಗಳನ್ನೂ ಸುರಕ್ಷಿತವಾಗಿ ಕರೆತರುವ ಕೆಲಸವೂ ಸಾಗಿದೆ. ಈ ನಡುವೆ ಉತ್ತರಾಖಂಡ್ ಮೂಲದ ವಿದ್ಯಾರ್ಥಿ ರಿಷಭ್​ ಎಂಬಾತ ಒಂದು ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೀಡಿಯೋದಲ್ಲಿ ತನ್ನ ಪ್ರೀತಿಯ ಸಾಕುನಾಯಿ ಮಲಿಬುನನ್ನೂ ರಕ್ಷಿಸಿಕೊಡುವಂತೆ ಕೇಳಿಕೊಂಡಿದ್ದಾನೆ. ಸಾಕುನಾಯಿ ‘ಮಲಿಬು’ ಬಿಟ್ಟು ನಾನು ಭಾರತಕ್ಕೆ ಬರುವುದಿಲ್ಲವೆಂದು ಆತ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ.

ಯುವಕನ ಮನವಿಗೆ ಸ್ಪಂದಿಸಿದ ಬೆಂಗಳೂರು ಹುಡುಗರು

ಹೌದು, ಉತ್ತಾರಖಂಡ್ ಮೂಲದ ವಿದ್ಯಾರ್ಥಿ ರಿಷಭ್​​ ಯುದ್ಧ ಪೀಡಿತ ಜಾಗದಿಂದ ಬೇರೆಡೆ ಹೊರಡುವಾಗ ತನ್ನ ಸಾಕುನಾಯಿ ಮಲಿಬುನನ್ನೂ ಹೊತ್ತು ಬಂದಿದ್ದರೂ. ಹಲವು ವರ್ಷಗಳ ನಂಟು ಮಲಿಬು ಜೊತೆಗಿದ್ದು ಈಗ ಬಿಟ್ಟು ಬರಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಬೆಂಗಳೂರು ಮೂಲದ ಹುಡುಗರ ತಂಡವೊಂದು ಸ್ಪಂದಿಸಿದ್ದು, ಮಲಿಬುನನ್ನೂ ಕರೆತರಲು ಬೇಕಾದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ; MLA Arvind Bellad: ನೊಂದ ಕುಟುಂಬಕ್ಕೆ ಇದೇನಾ ಸಾಂತ್ವನ: ಹೆಣ ತರೋ ಜಾಗದಲ್ಲಿ 6 ಜನರನ್ನ ಕರೆದುಕೊಂಡು ಬರಬಹುದು- ಬೆಲ್ಲದ್

ಬೆಂಗಳೂರಿನ ಫೆಲ್ಕಾನ್ ಪೆಟ್ ರಿಲೊಕೇಟ್ ಎಂಬ ಸಂಸ್ಥೆಯಿಂದ ರಿಷಬ್​ ಸಾಕುನಾಯಿ ಕರೆತರಲು ಸಿದ್ಧತೆ ಮಾಡಿದ್ದಾರೆ. ಅನಿಮಲ್ ಕ್ವಾರಂಟೀನ್ (AQCS) ಎಂಬ ಸರ್ಕಾರಿ ಸಂಸ್ಥೆ ಜೊತೆ ಸಂಪರ್ಕ ಮಾಡಿ ರಿಷಬ್​ ಸಾಕು ನಾಯಿ ಕರೆತರಲು ಬೇಕಾದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಶಿಕ್ಷಣ ಸರಿಯಾಗಿದ್ದಿದ್ದರೆ ವಿದೇಶಕ್ಕೆ ಹೋಗ್ತಿರಲಿಲ್ಲ.. PM Modi ಎದುರು ವಿದ್ಯಾರ್ಥಿಗಳ ಸಿಟ್ಟು..!

ರಿಷಭ್​ ಜೊತೆ ಮಲಿಬುನನ್ನೂ ಕರೆತರಲು ವ್ಯವಸ್ಥೆ

ಈಗಾಗಲೇ ರಿಷಭ್​​ ಅನ್ನು ಕರೆತರಲು ಕೇಂದ್ರ ಸರ್ಕಾರದಿಂದ ಸಿದ್ಧತೆ ಮಾಡಲಾಗಿದೆ. ಉಕ್ರೇನ್ ನ ಗಡಿಭಾಗಕ್ಕೆ ಕರೆತಂದು ಈವಾಕ್ವೇಟ್ ಮಾಡಲು ಬೇಕಾದ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ ಆತನ ಸಾಕು ನಾಯಿ ಕರೆತರಲು ಅನುಮತಿ‌ ನೀಡಿರಲಿಲ್ಲ.

ಇಷ್ಟೂ ದಿನ ಜೊತೆಗೇ ಇದ್ದ ಮಲಿಬುನನ್ನೂ ಬಿಟ್ಟು ತನ್ನ ಜೀವ ಕಾಪಾಡಿಕೊಳ್ಳುವುದು ಬೇಡ ಎಂದಿದ್ದ ರಿಷಬ್​.  ತನ್ನ ಸಾಕುನಾಯಿ ಬಿಟ್ಟು ನಾನು ಭಾರತಕ್ಕೆ ಬರೋದಿಲ್ಲ ಅಂತ ನೊಂದುಕೊಂಡಿದ್ದ ರಿಷಬ್​ ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟದ್ದ. ಇದಕ್ಕೆ ಸ್ಪಂದಿಸಿದ ಬೆಂಗಳೂರು ಮೂಲದ ತಂಡ ಆನಿಮಲ್ ಕ್ವಾರಂಟೈನ್ ಸಂಸ್ಥೆ ಜೊತೆ ಮಾತುಕತೆ ನಡೆಸಿ ರಿಷಭ್ ಜೊತೆ ಮಲಿಬುನನ್ನೂ ಕರೆತರಲು ವ್ಯವಸ್ಥೆ ಮಾಡಿದೆ. ಒಟ್ಟಾರೆ ರಿಷಭ್​ ಜೊತೆಗೆ ಆತನ ಮಲಿಬು ಕೂಡ ಸುರಕ್ಷಿತವಾಗಿ ತವರಿಗೆ  ಬರಲಿ ಎಂಬುವುದೇ ನಮ್ಮ‌ ಆಶಯ.
Published by:Pavana HS
First published: