• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು HDK ಯತ್ನಿಸಿದ್ದರು : ರಾಕ್​​ಲೈನ್​​ ಗಂಭೀರ ಆರೋಪ!

ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು HDK ಯತ್ನಿಸಿದ್ದರು : ರಾಕ್​​ಲೈನ್​​ ಗಂಭೀರ ಆರೋಪ!

ಸುಮಲತಾ, ರಾಕ್​ಲೈನ್​ ವೆಂಕಟೇಶ್​

ಸುಮಲತಾ, ರಾಕ್​ಲೈನ್​ ವೆಂಕಟೇಶ್​

'ನಾನು ಸುಮಲತಾ ಅವರ ಹೆಗಲ ಮೇಲೆ ಕೈ ಹಾಕಿರುವಂತೆ ವಿಡಿಯೋವನ್ನು ತಿರುಚಿದ್ದರಂತೆ. ಇಬ್ಬರೂ ಒಂದೇ ಕೊಠಡಿಗೆ ಹೋಗುತ್ತಿರುವ ಹಾಗೇ ವಿಡಿಯೋವನ್ನು ಸೃಷ್ಟಿಸಲು ಯತ್ನಿಸಿದ್ದರು' ಎಂದು ರಾಕ್​​ಲೈನ್​ ಆರೋಪಿಸಿದ್ದಾರೆ.

  • Share this:

ಬೆಂಗಳೂರು: ಕಳೆದ ಕೆಲ ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಕ್ಸಮರ ವೈಯಕ್ತಿಕ ದಾಳಿಗೆ ಇಳಿದಿದೆ. ಸುಮಲತಾ ಬಗೆಗಿನ ಕುಮಾರಸ್ವಾಮಿ ಹೇಳಿಕೆಗಳ ವಿರುದ್ಧ ಇಂದು ದಿವಂಗತ ಅಂಬರೀಶ್​ ಅವರ ಆಪ್ತ ಬಳಗ ಸಿಡಿದೆದ್ದಿದೆ. ಅಂಬಿ ಕುಟುಂಬದ ಆಪ್ತ ವಲಯದಲ್ಲಿರುವ ಚಿತ್ರ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​ ಅವರು ಎಚ್​ಡಿಕೆ ವಿರುದ್ಧ ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ರಾಕ್​ಲೈನ್​ ಆರೋಪಿಸಿದರು.


'ನನ್ನ ಮತ್ತು ಸುಮಲತಾರ ಮೇಲೆ ವೈಯಕ್ತಿಕ ದಾಳಿಗೆ ಕುಮಾರಸ್ವಾಮಿ ಇಳಿದಿದ್ದರು. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಮಲತಾರ ತೇಜೋವಧೆ ಮಾಡುವ ಕುತಂತ್ರ ಮಾಡಿದ್ದರು. ಮಂಡ್ಯ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕಾಗಿ ನಾವೆಲ್ಲ ಒಂದೇ ಹೋಟೆಲ್​ನಲ್ಲಿ ತಂಗಿದ್ದೆವು. ಹೋಟೆಲ್​ನಲ್ಲಿ ನಾನು, ಸುಮಲತಾ ಓಡಾಡಿರುವ ಸಿಸಿಟಿವಿ ದೃಶ್ಯವನ್ನು ಹೋಟೆಲ್​ ಸಿಬ್ಬಂದಿಯಿಂದ ಪಡೆದುಕೊಂಡಿದ್ದಾರೆ. ನಾನು ಸುಮಲತಾ ಅವರ ಹೆಗಲ ಮೇಲೆ ಕೈ ಹಾಕಿರುವಂತೆ ವಿಡಿಯೋವನ್ನು ತಿರುಚಿದ್ದರಂತೆ. ಇಬ್ಬರೂ ಒಂದೇ ಕೊಠಡಿಗೆ ಹೋಗುತ್ತಿರುವ ಹಾಗೇ ವಿಡಿಯೋವನ್ನು ಸೃಷ್ಟಿಸಿದ್ದರು' ಎಂದು ರಾಕ್​​ಲೈನ್​ ಆರೋಪಿಸಿದ್ದಾರೆ.


'ವಿಡಿಯೋ ತಿರುಚುವಿಕೆ ಬಗ್ಗೆ ಕುಮಾರಸ್ವಾಮಿ ಅವರ ವಾಹಿನಿಯ ಸಿಬ್ಬಂದಿಯೇ ನನಗೆ ಮಾಹಿತಿ ನೀಡಿದರು. ಅಂಬಿ ಅಭಿಮಾನಿಯಾದ ಆತ ಕುಮಾರಸ್ವಾಮಿ ಮಾಡುವ ಅನ್ಯಾಯವನ್ನು ಸಹಿಸದೇ ನನಗೆ ಬಂದು ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೀಳುಮಟ್ಟದ ವೈಯಕ್ತಿಕ ದಾಳಿಗೆ ಇಳಿದಿದ್ದರು' ಎಂದು ರಾಕ್​​ಲೈನ್​​ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಸಿಡಿದೆದ್ದ ಅಂಬಿ ಬಳಗ: ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ, HDK ವಿರುದ್ಧ ರಾಕ್​​ಲೈನ್​ ಕೆಂಡ!


ನಾನು ಅಂಬರೀಶ್​ ಅವರು ಕುಟುಂಬಕ್ಕೆ ಹಿಂದಿನಿಂದಲೂ ಆಪ್ತ. ಅವರು ಇದ್ದಾಗ ಮಾತ್ರವಲ್ಲ, ಅಂಬಿ ಅವರು ಇಲ್ಲದಾಗಲೂ ನಾನು ಅವರ ಕುಟುಂಬಕ್ಕೆ ಆಪ್ತನಾಗಿದ್ದೇನೆ. ಸುಮಲತಾ ಅವರು ಚುನಾವಣೆಗೆ ನಿಂತಾಗ ನಾನು, ದೊಡ್ಡಣ್ಣ, ದರ್ಶನ್​, ಯಶ್​ ಸೇರಿದಂತೆ ಹಲವರು ಬೆಂಬಲಿಸಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ಸುಮಲತಾ, ಅಂಬಿ ಪುತ್ರ ಅಭಿಷೇಕ್​ಗೆ ಆಪ್ತವಾಗಿರೋದನ್ನೇ ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.


ಇದನ್ನೂ ಓದಿ: ನನ್ನ ಪ್ರೀತಿಯ ಅಂಬಿಗೆ ಅಂದು ಕುಮಾರಸ್ವಾಮಿ ಮಾಡಿದ ಅವಮಾನವನ್ನು ಎಂದಿಗೂ ಮರೆಯಲ್ಲ : ನಟ ದೊಡ್ಡಣ್ಣ


ಕುಮಾರಸ್ವಾಮಿ ಆಡಿಯೋ ಬಿಡುತ್ತೇನೆ, ವಿಡಿಯೋ ರಿಲೀಸ್​ ಮಾಡುತ್ತೇನೆ ಎನ್ನುವುದು ಇದೇ ಮೊದಲಲ್ಲ. ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಆಡಿಯೋ, ವಿಡಿಯೋಗೆ ನಾನಾಗಲಿ, ಸುಮಲತಾ ಅವರಾಗಲಿ ಹೆದರುವುದಿಲ್ಲ. ಸುಮಲತಾರನ್ನು ಕಾಯಲು ಅಂಬಿ ಅಭಿಮಾನಿಗಳಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ರಾಕ್​​ಲೈನ್​ ಸವಾಲೆಸೆದರು. ಇನ್ನು ಇಂದು ಮಾಜಿ ಸಿಎಂ ಎಚ್​ಡಿಕೆ ವಿರುದ್ಧ ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್​ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು