ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ 'Robo Teacher'! ಹೊಸ 'ಶಿಕ್ಷಕ'ರ ಬಗ್ಗೆ ವಿದ್ಯಾರ್ಥಿಗಳು ಹೇಳಿದ್ದೇನು?

ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋದ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಅವರು `ರೋಬೊ'ಗೆ ಹಲವು ಪ್ರಶ್ನೆಗಳನ್ನು ಕೇಳಿದರು, ಹಾಗೆಯೇ, ಅದು ನೀಡಿದ ಉತ್ತರ ಮತ್ತು ನೆರವನ್ನು ಕಂಡು ಬೆರಗಾದರು.

Robo Teacher ಜೊತೆ ಸಚಿವರು ಹಾಗೂ ವಿದ್ಯಾರ್ಥಿನಿಯರು

Robo Teacher ಜೊತೆ ಸಚಿವರು ಹಾಗೂ ವಿದ್ಯಾರ್ಥಿನಿಯರು

  • Share this:
ಬೆಂಗಳೂರು: ಪಾಠ-ಪ್ರವಚನಗಳಲ್ಲಿ ಬೋಧಕರಿಗೂ (Teachers) ವಿದ್ಯಾರ್ಥಿಗಳಿಗೂ (Students) ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ (Eagle Robo) ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleshwaram)13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ (Higher Education Minister) ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋದ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಅವರು `ರೋಬೊಗೆ ಹಲವು ಪ್ರಶ್ನೆಗಳನ್ನು ಕೇಳಿದರು, ಹಾಗೆಯೇ, ಅದು ನೀಡಿದ ಉತ್ತರ ಮತ್ತು ನೆರವನ್ನು ಕಂಡು ಬೆರಗಾದರು.


ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, `ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮರ್ಥ್ಯವನ್ನು ವೀಕ್ಷಿಸಲಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋ ಗಳು ಇದ್ದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

“ರೋಬೋ ಶಿಕ್ಷಕರಿಗೆ ಪರ್ಯಾಯ ಆಗುವುದಿಲ್ಲ”

ರೋಬೊ‌ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು. 21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರಕಾರಿ ಶಾಲಾಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ನುಡಿದರು.

ಇದನ್ನೂ ಓದಿ: Explained: ಶಿಕ್ಷಣದಲ್ಲೂ ಪಾಲಿಸಬೇಕೇ ಶ್ರೀಕೃಷ್ಣನ ಉಪದೇಶ? ಶಾಲೆಯಲ್ಲಿ ಬೇಕೇ ಭಗವದ್ಗೀತೆ?

ಯೋಜನೆಗೆ ಚಾಲನೆ ನೀಡಲಿರುವು ಸಿಎಂ

ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ‌ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು.

ಇಂಡಸ್ ಟ್ರಸ್ಟ್ ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.

ಭವಿಷ್ಯದಲ್ಲಿ ಜೈವಿಕ ತಂತ್ರಜ್ಞಾನದ್ದು ನಿರ್ಣಾಯಕ ಪಾತ್ರ

ಕೃಷಿ, ಪಶುಸಂಗೋಪನೆ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಂಧನ ಕ್ಷೇತ್ರದಲ್ಲಿ ಈಗಿರುವ ಆಮದಿನ ಹೊರೆಯನ್ನು ತಗ್ಗಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ರಾಜ್ಯವು ಈ ಕ್ಷೇತ್ರದಲ್ಲಿ 50 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಮುಟ್ಟಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಜೈವಿಕ ಆರ್ಥಿಕತೆಯಲ್ಲಿ 24.4 ಶತಕೋಟಿ ವಹಿವಾಟು

ಜೈವಿಕ ಆರ್ಥಿಕತೆಯ ಕ್ಷೇತ್ರದಲ್ಲಿ ರಾಜ್ಯದ ವಹಿವಾಟು ಸದ್ಯಕ್ಕೆ 24.4 ಶತಕೋಟಿ ಡಾಲರುಗಳಷ್ಟಿದ್ದು, ಇದು ದೇಶದ ವಹಿವಾಟಿನ ಶೇ.33ರಷ್ಟಾಗಿದೆ. ಮುಂದಿನ ದಿನಗಳಲ್ಲಿ ಜೈವಿಕ ಮರುಬಳಕೆ, ಜೈವಿಕ ಇಂಧನ, ಜೈವಿಕ ವಿದ್ಯುತ್ ಮತ್ತು ಪರಿಸರಸ್ನೇಹಿ ರಾಸಾಯನಿಕಗಳು ಬಹುದೊಡ್ಡ ಉದ್ಯಮ ವಲಯಗಳಾಗಲಿವೆ ಎಂದು ಅವರು ಹೇಳಿದರು.

ಜೈವಿಕ ಹಾಗೂ ಪಶು ಸಂಗೋಪನಾ ಕ್ಷೇತ್ರದಲ್ಲಿ ಹೂಡಿಕೆ

ರಾಜ್ಯದಲ್ಲಿ ಜೈವಿಕ ಆರ್ಥಿಕತೆಯ ಪಾಲನ್ನು ಹೆಚ್ಚಿಸಲು ಜೈವಿಕ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸರಕಾರವು ಚಿಂತಿಸುತ್ತಿದೆ. ಇದರ ಜತೆಗೆ ಸಮುದ್ರಾಧಾರಿತ ಜೈವಿಕ ತಂತ್ರಜ್ಞಾನ, ಬಯೋ-ಐಟಿ ಮತ್ತು ಇನ್ಫಾರ್ಮ್ಯಾಟಿಕ್ಸ್ ವಲಯಗಳತ್ತಲೂ ಗಮನ ಹರಿಸಲಾಗುವುದು ಎಂದು ಅವರು ನುಡಿದರು.

ಇದನ್ನೂ ಓದಿ: SSLC Exam: ಇಲ್ಲಿನ ಶಾಲೆಗಳಲ್ಲಿ ರಾತ್ರಿಯೂ ಪಾಠ, ಭಾನುವಾರವೂ ಕ್ಲಾಸ್! ಎಸ್ಎಸ್‌ಎಲ್‌ಸಿ ಎಕ್ಸಾಂಗೆ ಭರ್ಜರಿ ತಯಾರಿ

ವಾಹನ ಕ್ಷೇತ್ರದಲ್ಲಿ ಇನ್ನುಮುಂದೆ ಫ್ಲೆಕ್ಸಿ ಎಂಜಿನ್ನುಗಳು ಬರಲಿವೆ. ಈಗಾಗಲೇ ರಾಜ್ಯದ ಸಾರಿಗೆ ನಿಗಮದ ಬಸ್ಸುಗಳಿಗೆ ಶೇ.9ರಷ್ಟು ಎಥೆನಾಲ್ ಇಂಧನವನ್ನು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಶೇ.100ಕ್ಕೆ ಕೊಂಡೊಯ್ಯಲಾಗುವುದು. ಇದಕ್ಕೆ ತಕ್ಕಂತೆ ಸಂಶೋಧನೆಗೆ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದರು.
Published by:Annappa Achari
First published: