• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Robbery: ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿ ಒಂದು ರೂಪಾಯಿ ಹಾಕಿ ತೆರಳಿದ ಚಾಲಾಕಿ ಖದೀಮರು!

Robbery: ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿ ಒಂದು ರೂಪಾಯಿ ಹಾಕಿ ತೆರಳಿದ ಚಾಲಾಕಿ ಖದೀಮರು!

ಕಳ್ಳರು ಕದ್ದೊಯ್ದ ದೇವರ ಸಾಮಗ್ರಿಗಳು.

ಕಳ್ಳರು ಕದ್ದೊಯ್ದ ದೇವರ ಸಾಮಗ್ರಿಗಳು.

ಕಳೆದ ಎರಡು ವರ್ಷಗಳಿಂದಲೂ ರಾಜಾಜಿನಗರದ ಕೋದಂಡಸ್ವಾಮಿ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಹುಂಡಿಯಲ್ಲಿನ ಲಕ್ಷಾಂತರ ರೂ ಹಣ, ದೇವರ ಬೆಳ್ಳಿ ವಿಗ್ರಹ ಕದ್ದೊಯ್ದಿದ್ದಾರೆ.

  • Share this:

    ಬೆಂಗಳೂರು: ಸಾಮಾನ್ಯವಾಗಿ ನಾವು ಕರೆಂಟ್ ಹೋದ್ರೆ  KEBಯವರಿಗೆ ಶಾಪ ಹಾಕುತ್ತೇವೆ. ಕರೆಂಟ್ ಯಾವಾಗ ಬರುತ್ತೋ, ಯಾವಾಗ ಕೆಲಸ ಮುಗಿಯತ್ತೋ ಅಂತಾ ಕಾಯ್ತಾ ಇರುತ್ತೇವೆ. ಆದರೆ ಆ ಖದೀಮರು ಕರೆಂಟ್ ಹೋಗುವುದನ್ನೇ ಕಾಯುತ್ತಿರುತ್ತಾರೆ. ಏಕೆಂದರೆ ತಾವು ಮಾಡುವ ಕೆಲಸಕ್ಕೆ ಕರೆಂಟ್ ವಿಘ್ನ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹೌದು, ಬೆಂಗಳೂರಿನ ರಾಜಾಜಿನಗರದ ಜನರು ಕರೆಂಟ್ ಹೋದ್ರೆ ಸಾಕು ಫುಲ್ ಟೆನ್ಷನ್​ನಲ್ಲಿ ಇರುತ್ತಾರೆ. ಏಕೆಂದರೆ ಆ ಖತರ್ನಾಕ್ ಕಳ್ಳರು ತಮ್ಮ ಕೈ ಚಳಕಕ್ಕೂ ಮುನ್ನಾ ಏರಿಯಾದಲ್ಲಿ ಕರೆಂಟ್ ತೆಗೆಯುತ್ತಾರೆ. ಆ ಬಳಿಕ ತಮ್ಮ ಕೆಲಸವನ್ನು ನಿರ್ವಿಘ್ನವಾಗಿ ಮುಗಿಸುತ್ತಾರೆ. 


    ಸದ್ಯ ಏರಿಯಾದಲ್ಲಿ ಕರೆಂಟ್ ಹೋದ್ರೆ ಎಲ್ಲಿ ಏನ್ ಕಳವು ಆಗುತ್ತೋ ಅನ್ನೊ ಭಯದಲ್ಲಿ ಆ ಏರಿಯಾ ಜನರಿದ್ದಾರೆ. ದೇವರ ಹುಂಡಿಗಳನ್ನೆ ಟಾರ್ಗೆಟ್ ಮಾಡ್ತಿರೋ ಈ ಐನಾತಿ ಕಳ್ಳರ ಗ್ಯಾಂಗ್ ಸದ್ಯ ಪೊಲೀಸರ ನಿದ್ರೆ ಕೆಡಿಸಿದೆ. ಇವರ ಕೈ ಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳರು ಯಾವ ದೇವಸ್ಥಾನಕ್ಕೆ ಕನ್ನ ಹಾಕಬೇಕು ಅಂತಾ ಡಿಸೈಡ್ ಮಾಡಿದ ಮೇಲೆ ಸಂಪೂರ್ಣ ಸ್ಕೆಚ್ ರೆಡಿ ಮಾಡ್ತಾರೆ. ಯಾವ ಏರಿಯಾ ಯಾವ ದೇವಸ್ಥಾನ, ಅಲ್ಲಿಗೆ ಹೇಗೆ ಹೋಗೋದು? ಕದಿಯುವುದು ಹೇಗೆ? ಯಾವ ಸಮಯದಲ್ಲಿ ಕದಿಯಬೇಕು ಹೀಗೆ ಎಲ್ಲಾ ಪ್ಲಾನ್  ರೆಡಿ ಮಾಡಿದ ಮೇಲೆ ಫೀಲ್ಡ್ ಗೆ ರೆಡಿಯಾಗ್ತಾರೆ. ಅಂದ ಹಾಗೆ ಈ ರಾಜಾಜಿನಗರ ಕೋದಂಡರಾಮ ಸ್ವಾಮಿ ದೇವಸ್ಥಾನಕ್ಕೆ ಕನ್ನ ಹಾಕೋಕೆ ಬಂದವ ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನೆಲ್ಲಾ ಸುತ್ತಾಡಿದ್ದಾನೆ. ಅದೂ ಬಿಬಿಎಂಪಿ ಪೌರ ಕಾರ್ಮಿಕನ ವೇಷದಲ್ಲಿ. ನಂತರ ಅಲ್ಲೆ ಇದ್ದ ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸೋ ತಳ್ಳುಗಾಡಿಯಲ್ಲಿ ದೇವಾಲಯದ ಹುಂಡಿಯನ್ನ ತಂದಿಡ್ತಾನೆ. ನಂತರ ಯಾರಿಗೂ ಗೊತ್ತಾಗಬಾರದು ಅಂತ ಅದರ ಮೇಲೆ ಟಾರ್ಪೆಲ್ ಹೊದಿಸ್ತಾನೆ. ನಂತರ ಥೇಟ್ ಪೌರಕಾರ್ಮಿಕನಂತೆ ಸಲೀಸಾಗಿ ದೇವರ ಹುಂಡಿ ಹೊತ್ತೊಯ್ದಿದ್ದಾನೆ.


    ಕಳೆದ ನಾಲ್ಕು ದಿನದಲ್ಲಿ ರಾಜಾಜಿನಗರದ ಕೋದಂಡಸ್ವಾಮಿ ದೇವಾಲಯ, ಮುನೇಶ್ವರ ದೇವಾಲಯ ಸೇರಿ ಮೂರು ಕಡೆಗಳಲ್ಲಿ ಕಳ್ಳತನವಾಗಿದೆ. ದೇಗುಲದ ಮೈನ್ ಡೋರ್ ಒಡೆದು ಎಂಟ್ರಿ ಕೊಡುವ ಮುನ್ನಾ ಆರೋಪಿಗಳು ಏರಿಯಾದ ಕರೆಂಟ್ ಆಫ್ ಮಾಡ್ತಿದ್ದಾರೆ. ಮಳೆ ಬರೋ ಟೈಂ ಇವರಿಗೆ ಪ್ಲಸ್ ಪಾಯಿಂಟ್. ಮಳೆ ಬರುವ ಟೈಂ ನಲ್ಲೆ ಹೆಚ್ಚು ಕೃತ್ಯ ಎಸಗುತ್ತಿದ್ದಾರೆ. ಓರ್ವ ಕಳ್ಳ ದೇಗುಲಕ್ಕೆ ಎಂಟ್ರಿ ಕೊಟ್ರಿ, ಹೊರಗಿರೋ ಮತ್ತಿಬ್ಬರು ಕಳ್ಳರು ಯಾರಿಗೂ ಅನುಮಾನ ಬಾರದಂತೆ ಹೊರಗಿನಿಂದ ಡೋರ್ ಲಾಕ್ ಮಾಡ್ತಾರೆ. ಕೃತ್ಯದ ನಂತರ ದೇಗುಲದ ಹುಂಡಿಯಲ್ಲಿನ ಹಣ ಒಡವೆ ಎಗರಿಸಿ ಹುಂಡಿಯನ್ನ ಅಲ್ಲೆ ಬಿಸಾಡಿ ತೆರಳ್ತಿದ್ದಾರೆ.


    ಕಳೆದ ಎರಡು ವರ್ಷಗಳಿಂದಲೂ ರಾಜಾಜಿನಗರದ ಕೋದಂಡಸ್ವಾಮಿ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಹುಂಡಿಯಲ್ಲಿನ ಲಕ್ಷಾಂತರ ರೂ ಹಣ, ದೇವರ ಬೆಳ್ಳಿ ವಿಗ್ರಹ ಕದ್ದೊಯ್ದಿದ್ದಾರೆ. ಇನ್ನು ಕಳ್ಳತನ ಮಾಡಿ ದೇವರ ಮೇಲಿನ‌ ಭಕ್ತಿನೋ, ಅಥವಾ ಮುನಿದ್ರೆ ಅನ್ನೋ ಭಯನೋ  ತಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ವಾಪಸ್ ತೆರಳೋ ವೇಳೆ ಹುಂಡಿಗೆ ಒಂದು ರೂಪಾಯಿ ಹಾಕಿ ತೆರಳಿದ್ದಾರೆ.


    ಇದನ್ನು ಓದಿ: Delhi Post: ಎಂಬಿ ಪಾಟೀಲ್ ಜಾಣ ನಡೆ, ಬೊಮ್ಮಾಯಿ ಸಿಎಂ ಅಭ್ಯರ್ಥಿಯಾದರೆ ಯಡಿಯೂರಪ್ಪ ಕತೆ ಏನು?


    ಸದ್ಯ ಪ್ರಕರಣ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕಳ್ಳರು ರಾತ್ರಿ ವೇಳೆ ಇಷ್ಟೆಲ್ಲ ಕುಕೃತ್ಯ ಮೆರೆಯುತ್ತಿದ್ರು ಪೊಲೀಸರು ಗಸ್ತು ಹೆಚ್ಚಿಸ್ತಿಲ್ಲ. ಅಲ್ಲದೇ ಏರಿಯಾದಲ್ಲಿ ಗಾಂಜಾ ಸೇವನೆ ಮಾಡುವ ಯುವಕರ ಗುಂಪು ಹೆಚ್ಚಾಗಿದೆ ಪೊಲೀಸರು ಆದಷ್ಟು ಬೇಗ ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ.

    Published by:HR Ramesh
    First published: