Bengaluru: ಕೋಟಿ ಕೋಟಿ ಹಣ ಕದ್ದು ಮಾದೇಶ್ವರನ ಸನ್ನಿಧಿಯಲ್ಲಿ ಬಚ್ಚಿಟ್ಟುಕೊಂಡ ಕಳ್ಳರು! "ಉಧೋ" ಎಂದರೂ ಬಿಡಲಿಲ್ಲ ಪೊಲೀಸರು!

ಬರೋಬ್ಬರಿ 1.76 ಕೋಟಿ ಹಣ ದರೋಡೆ ಮಾಡಿದ ಖದೀಮರು, ನಾವು ಬಚಾವಾದ್ವಿ ಅಂದುಕೊಂಡಿದ್ದರು. ಮಲೆ ಮಹದೇಶ್ವರ ಸ್ವಾಮಿ ದೇಗುಲಕ್ಕೆ ಹೋಗಿ, ಮಾದಪ್ಪನಿಗೆ “ಉಧೋ” ಎಂದಿದ್ದರು. ಆದರೆ ಪೊಲೀಸರು ಅವರಿಬ್ಬರಿಗೆ ಈಗ ಹೆಡೆಮುರಿ ಕಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಕಳ್ಳರು (Thief) ಚಾಪೆ ಕೆಳಗೆ ತೂರಿದ್ರೆ, ಪೊಲೀಸರು (Police) ರಂಗೋಲಿ ಕೆಳಕ್ಕೆ ತೂರುತ್ತಾರೆ. ಎಲ್ಲಾ ಸಾಕ್ಷ್ಯ (Witness) ನಾಶ ಮಾಡಿ ನಾನು ತಪ್ಪಿಸಿಕೊಂಡೆ ಅಂತ ಕಳ್ಳರು ಖುಷಿ ಪಡ್ತಾರೆ. ಆದ್ರೆ ಯಾವುದಾದರೂ ಒಂದು ಕ್ಲ್ಯೂ (Clue) ಹುಡುಕಿ, ಪೊಲೀಸರು ಅವರಿಗೆ ಹೆಡಮುರಿ ಕಟ್ಟುತ್ತಾರೆ. ಇಲ್ಲೂ ಅದೇ ಆಗಿದೆ. ಬರೋಬ್ಬರಿ 1.76 ಕೋಟಿ ಹಣ (1.76 Crore Money) ದರೋಡೆ ಮಾಡಿದ ಖದೀಮರು, ನಾವು ಬಚಾವಾದ್ವಿ ಅಂದುಕೊಂಡಿದ್ದರು. ಮಲೆ ಮಹದೇಶ್ವರ ಸ್ವಾಮಿ ದೇಗುಲಕ್ಕೆ (Mala Mahadeshwara Swamy Temple) ಹೋಗಿ, ಮಾದಪ್ಪನಿಗೆ “ಉಧೋ” ಎಂದಿದ್ದರು. ಆದರೆ ಪೊಲೀಸರು ಅಲ್ಲೂ ಅವರನ್ನು ಹುಡುಕಿಕೊಂಡು ಬಂದು, ಅರೆಸ್ಟ್ (Arrest) ಮಾಡಿದ್ದಾರೆ. ವಿಚಾರಣೆ ವೇಳೆ ಕಳ್ಳರು ಮಾಡಿದ್ದ ಪ್ಲಾನ್, ಅವರು ಕದ್ದಿದ್ದ ಹಣ, ಆಭರಣ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

1.76 ಕೋಟಿ ದರೋಡೆ ಮಾಡಿದ್ದ ಖದೀಮರು

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಡ್ಯ ಮೂಲದ ಸುನಿಲ್ ಅಳಿಯಾಸ್ ತೊರೆ ಹಾಗೂ ಮಾಗಡಿಯ ಸೀಗೇಹಳ್ಳಿ ಮೂಲದ ದಿಲೀಪ್ ಅಂತ ಗುರುತಿಸಲಾಗಿದೆ. ಬಂಧಿತರಿಂದ 1.76ಕೋಟಿ ಹಣ, 188 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಮಲೆ ಮಹದೇಶ್ವರನ ಬೆಟ್ಟದಲ್ಲಿ ಅವಿತಿದ್ದ ಖದೀಮರು

ಆರೋಪಿಗಳು ಸುಮಾರು 2 ಕೋಟಿಗೂ ಅಧಿಕ ಹಣ, ಚಿನ್ನಾಭರಣ ಕದ್ದಿದ್ದರು ಎನ್ನಲಾಗಿದೆ. ಚೀಲದಲ್ಲಿ ಹಣ ತುಂಬಿ ಮನೆಯಲ್ಲೆ ಇಟ್ಟಿದ್ದ ಆರೋಪಿಗಳು, ಎಷ್ಟಿದೆ ಅಂತ ಲೆಕ್ಕವನ್ನೂ ಮಾಡದೆ ಗುಡ್ಡೆ ಮಾಂಸದ ರೀತಿ ಹಣ ಹಂಚಿಕೊಂಡಿದ್ರು. ಇದೀಗ ಫಿಂಗರ್ ಪ್ರಿಂಟ್ ಮೂಲಕ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: Crime News: ಮಾವನ ಮಗಳ ಹೃದಯ ಕದ್ದವ, ಪಕ್ಕದ ಮನೆ ಚಿನ್ನವನ್ನೂ ಕದ್ದಿದ್ದ! ಅರೆಸ್ಟ್ ಆಗಿದ್ದು ಹೇಗೆ 'ಚೋರ' ಚಿತ್ತ ಚೋರ?

 ಜೈಲಿನಲ್ಲೇ ಸ್ನೇಹಿತರಾಗಿದ್ದ ಖದೀಮರು

ಈ ಸುನೀಲ್ ಈ ಹಿಂದೆ ಕೂಡ ಕಳ್ಳತನ ಮಾಡಿ ಅರೆಸ್ಟ್ ಆಗಿದ್ದ. ಇತ್ತ ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿ ದಿಲೀಪ ಜೈಲು ಸೇರಿದ್ದ.  ಈ ವೇಳೆ ಸುನಿಲ್ ಹಾಗೂ  ದಿಲೀಪ್ ಇಬ್ಬರೂ ಜೈಲಿನಲ್ಲಿ ಪ್ರೆಂಡ್ಸ್ ಆಗಿದ್ದರು. ನಿನ್ನ ಜೀವನ ಬದಲಾಯಿಸ್ತಿನಿ ಬಾ ಎಂದು ಪುಸಲಾಯಿಸಿದ್ದ ಸುನಿಲ್, ಜೈಲಿಂದ ಹೊರ ಬಂದ ಮೇಲೆ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಆಗ ಅವರ ಕಣ್ಣಿಗೆ ಬಿದ್ದವರೇ ವೃದ್ಧ ಸಂದೀಪ್ ಲಾಲ್.

ವೃದ್ಧ ಶ್ರೀಮಂತನ ಮನೆಯಲ್ಲಿ ದರೋಡೆ

15 ದಿನ ಸಂದೀಪ್ ಲಾಲ್ ರನ್ನು ಫಾಲೊ ಮಾಡಿದ್ದ ಆರೋಪಿಗಳು, ಅವರ ಮನೆ ಮುಂದೆ ನಿಂತಿದ್ದ ಐಶಾರಾಮಿ ಬೈಕ್ ಗಳನ್ನ ನೋಡಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದರು. ಮನೆಯಲ್ಲಿ ಏಕಾಂಗಿಯಾಗಿ ಇದ್ದ ಸಂದೀಪ್ ಲಾಲ್, ಮನೆಯಿಂದ ಹೊರಕ್ಕೆ ಹೋಗಿದ್ದಾಗ ಕಳ್ಳತನ ಮಾಡಿದ್ದರು. ಸುಮಾರು 2 ಕೋಟಿಗೂ ಹೆಚ್ಚು ಹಣ,ಚಿನ್ನ ಕದ್ದು ಎಸ್ಕೇಪ್ ಆಗಿದ್ರು.

ಸಂದೀಪ್‌ ಲಾಲ್‌ಗೆ ಕೋಟಿ ಕೋಟಿ ಹಣ ಎಲ್ಲಿಂದ ಬಂತು?

ಈ ಸಂದೀಪ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ಮನೆಯನ್ನು  ಲ್ಲೀಸ್ ಗೆ ಪಡೆದಿದ್ದರು. ಮನೆಯ ಮಾಲೀಕರು ನೀಡಿರುವ ದುಡ್ಡು ಸಹಾ ಮನೆಯಲ್ಲಿ ಇಟ್ಟಿದ್ದು, ಕೆಲವು ರಿಯಲ್ ಎಸ್ಟೇಟ್ ನಿಂದ ಬಂದಂತ ಹಣ ಮನೆಯಲ್ಲೇ ಇಟ್ಟಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡೋದಾಗಿ ವಂಚನೆ

ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ವೃದ್ಧರನ್ನು ವಂಚಿಸುತ್ತಿದ್ದ ಹರೀಶ್ ನಾಯ್ಕ್ ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ  ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರು ವಯೋವೃದ್ಧರಿಗೆ ಹಣ ಡ್ರಾ ಮಾಡಿಕೊಡ್ತಿನಿ ಎಂದು  ಎಟಿಎಂ ಕಾರ್ಡ್ ಮತ್ತು ಪಿನ್ ಪಡೆಯುತ್ತಿದ್ದ ಆರೋಪಿ, ನಂತರ ಹಣ ಬರ್ತಿಲ್ಲ ಎಂದು ಅದೇ ಬ್ಯಾಂಕ್ ನ ಬೇರೆ ಎಟಿಎಂ ಕಾರ್ಡ್ ಕೊಡ್ತಿದ್ದ. ಇನ್ನೊಬ್ಬನೊಂದಿಗೆ ಸೇರಿಕೊಂಡು ಈ ಹರೀಶ್ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: Viral Video: ಒಬ್ಬ ಪ್ರೇಮಿಗಾಗಿ ಇಬ್ಬರು ಕಾಲೇಜ್ ಹುಡುಗಿಯರ ಫೈಟ್! ನಡು ರಸ್ತೆಯಲ್ಲೇ ನಡೀತು ಜಡೆ ಜಗಳ!

 ವೃದ್ಧನಿಗೆ 1.50 ಲಕ್ಷ ಹಣ ವಂಚನೆ

ಶ್ರೀನಿವಾಸುಲು ಎಂಬ ವೃದ್ಧನ ಎಟಿಎಂ ಕಾರ್ಡ್ ಪಡೆದು ಇವರು ವಂಚಿಸಿದ್ದಾರೆ. ಆತನ ಎಟಿಎಂ ಪಡೆದು, ನಂತರ ಬೇರೆ ಎಟಿಎಂ ಕಾರ್ಡ್ ನೀಡಿ ಪರಾರಿಯಾಗಿದ್ದರು, ನಂತರ ಶ್ರೀನಿವಾಸುಲು ಅವರ ಅಕೌಂಟ್ ನಲ್ಲಿದ್ದ 1 ಲಕ್ಷ 50 ಸಾವಿರ ಹಣವನ್ನು ಆರೋಪಿಗಳು ಲಪಟಾಯಿಸಿದ್ರು. ಈ ಬಗ್ಗೆ ದೂರು ಪಡೆದ ಪೊಲೀಸರು  ಆರೋಪಿಯನ್ನ  ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1 ಲಕ್ಷ 70 ಸಾವಿರ ನಗದು, ಬೇರೆ ಬೇರೆ ಬ್ಯಾಂಕ್ ನ 8 ಎಟಿಎಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Published by:Annappa Achari
First published: