• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Robber lodges Complaint: ಎಲ್ರೂ ಸೇರಿ ನನ್ನ ಹೊಡೆದ್ರು: ಜನರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟ ಕಳ್ಳ

Robber lodges Complaint: ಎಲ್ರೂ ಸೇರಿ ನನ್ನ ಹೊಡೆದ್ರು: ಜನರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟ ಕಳ್ಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Robber Files Complaint Against Crowd: ಡೊಮ್ಮಲೂರಿನ  18 ವರ್ಷದ ರಿತೇಶ್ ಜಯಕುಮಾರ್ ಎನ್ನುವ ವ್ಯಕ್ತಿ  ಕಳ್ಳತನ ಮಾಡಲು ಪ್ರಯತ್ನಿಸಿ ಸೆ .2 ರಂದು ಮಧ್ಯಾಹ್ನ ಸಿಕ್ಕಿಬಿದ್ದಿದ್ದು, ಕಳ್ಳತನ ವಿಫಲವಾದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿ ಜನರ ಕೈಗೆ ಸಿಕ್ಕಿದ್ದಾನೆ.  

  • Share this:

ಸಾಮಾನ್ಯವಾಗಿ ದರೋಡೆಕೋರನ ಮೇಲೆ ನಾವು ಪ್ರಕರಣಗಳನ್ನು ದಾಖಲಿಸುವುದನ್ನ ನೋಡಿದ್ದೇವೆ, ಆದರೆ ಇಲ್ಲೊಬ್ಬ ದರೋಡೆಕೋರ ಜನರ  ಮೇಲೆ ಪ್ರಕರಣ ದಾಖಲಿಸಿರುವ ವಿಚಿತ್ರ ಪ್ರಕರಣ ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ರಿಚ್‌ಮಂಡ್ ರಸ್ತೆಯಲ್ಲಿ(Richmond Road) ಶಸ್ತ್ರಗಳನ್ನು ಹೊಂದಿದ್ದ ದರೋಡೆಕೋರನೊಬ್ಬನನ್ನ(Armed Robber) ಜನರು ಹಿಡಿದು ಸರಿಯಾಗಿ ಥಳಿಸಿದ್ದರು. ದೈಹಿಕವಾಗಿ ಹಲ್ಲೆಗೊಳಗಾಗಿದ್ದ ಈ ದರೋಡೆಕೋರ ನನ್ನ  ಮೇಲೆ ಹಲ್ಲೆ ಮಾಡಿರುವ ಜನರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾನೆ.


ಡೊಮ್ಮಲೂರಿನ  18 ವರ್ಷದ ರಿತೇಶ್ ಜಯಕುಮಾರ್ ಎನ್ನುವ ವ್ಯಕ್ತಿ  ಕಳ್ಳತನ ಮಾಡಲು ಪ್ರಯತ್ನಿಸಿ ಸೆ .2 ರಂದು ಮಧ್ಯಾಹ್ನ ಸಿಕ್ಕಿಬಿದ್ದಿದ್ದು, ಕಳ್ಳತನ ವಿಫಲವಾದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿ ಜನರ ಕೈಗೆ ಸಿಕ್ಕಿದ್ದಾನೆ.  ಚಾಕು ಹೊಂದಿದ್ದ ಆತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕ್ಯಾಬ್‌ ಬಳಿ ಬಂದು ತನ್ನ ಸೆಲ್ ಫೋನ್ ಮತ್ತು ಹಣ ನೀಡುವಂತೆ ಚಾಲಕ ಪ್ರತಾಪ ಪಾಟೀಲ್‌ಗೆ ಬೆದರಿಕೆ ಹಾಕಿದ್ದ. ಆದರೆ ಜಯಕುಮಾರ್  ಯೋಜನೆ ಕೆಲಸ ಮಾಡಲಿಲ್ಲ. ಚಾಲಕ ಪಾಟೀಲ್ ಆತನ್ನ  ಕಾರಿನಿಂದಲೇ ಹೊರಗೆ ತಳ್ಳಿ, ಜನರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಅಲ್ಲೇ ಇದ್ದ ಕೆಲವು ದಾರಿಹೋಕರು ಮತ್ತು ವಾಹನ ಸವಾರರು ಪಾಟೀಲರ ಸಹಾಯಕ್ಕೆ ಧಾವಿಸಿ ಜಯಕುಮಾರ್‌ನನ್ನು ಹಿಡಿಯಲು ಪ್ರಯತ್ನಿಸಿದರು.


ಇದನ್ನೂ ಓದಿ: ಒಬ್ಬಂಟಿ ಗಂಡಸರೇ ಇವರ ಗುರಿ; ತುಮಕೂರು ಜನರ ಸುಲಿಗೆ ಮಾಡುತ್ತಿದ್ದ ಎರಡು ಗ್ಯಾಂಗ್ ಸದಸ್ಯರ​ ಬಂಧನ


ಈ ಸಮಯದಲ್ಲಿ ಜನರಿಂದ ತಪ್ಪಿಸಿಕೊಳ್ಳಲು ಕಳ್ಳನು ತನ್ನ ಚಾಕುವಿನಿಂದ ಹತ್ತಿರದಲ್ಲಿ ಜನರಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾನೆ.  ಕಳ್ಳ ದಾಳಿ ಮಾಡಲು ಪ್ರಯತ್ನಿಸಿದ್ದ ಕಾರಣ ಕೋಪಗೊಂಡ ಜನರು , ಅವನಿಗೆ ಒಂದೆರಡು ಹೊಡೆತಗಳನ್ನು ಹೊಡೆದಿದ್ದಾರೆ. ಒಬ್ಬ ವಾಹನ ಚಾಲಕ, ಜಯಕುಮಾರ್ ಕೈಯನ್ನು ಹಿಡಿದುಕೊಂಡರೆ, ಇನ್ನೊಬ್ಬ ಹೆಲ್ಮೆಟ್​ನಿಂದ ಹೊಡೆದಿದ್ದಾರೆ. ಆದರೂ, ಹೆದ್ದಾರಿಯಲ್ಲಿ ಬೇರೆ ಜನರು ವಾಹನ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆ ಗಲಾಟೆ ಮಾಡಿದ  ಕಾರಣ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಇನ್ನು ಕಳ್ಳತನದ ಪ್ರಯತ್ನದ ಬಗ್ಗೆ ಪಾಟೀಲ್ ಪೊಲೀಸ್ ಪ್ರಕರಣ ದಾಖಲಿಸಿದ್ದು, ನಾವು ಗಾಯಗೊಂಡ ದರೋಡೆಕೋರನನ್ನು ಪತ್ತೆ ಮಾಡಿದ್ದೇವೆ ಮತ್ತು ಆತನ ಮೇಲೆ ಐಪಿಸಿ ಸೆಕ್ಷನ್ 393 (ದರೋಡೆ ಮಾಡಲು ಪ್ರಯತ್ನ) ಮತ್ತು 398 (ಮಾರಕ ಆಯುಧಗಳಿಂದ ದರೋಡೆ ಅಥವಾ ಹಲ್ಲೆಗೆ ಯತ್ನ) ಅಡಿಯಲ್ಲಿ  ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಆದರೆ  ಇದಕ್ಕೆ ಪ್ರತಿಯಾಗಿ ಪೊಲೀಸರಿಗೆ ದೂರು ನೀಡಿರುವ  ಜಯಕುಮಾರ್, ರಿಚ್ಮಂಡ್ ಟೌನ್ ನಲ್ಲಿ ತನ್ನ ವಾಹನದಲ್ಲಿ ಕುಳಿತಿದ್ದ  ಚಾಲಕನನ್ನ ಸಂಜೆ 4 ಗಂಟೆಯ ಸುಮಾರಿಗೆ ಚಾಕುವಿನಲ್ಲಿ ಬೆದರಿಸಿ ದರೋಡೆ ಮಾಡಲು ಯತ್ನಿಸಿದ್ದೇನೆ. ನಾನು ಅವನ ಮೊಬೈಲ್ ಮತ್ತು ವ್ಯಾಲೆಟ್ ಕಸಿದುಕೊಳ್ಳಲು ಬಯಸಿದ್ದೆ. ಆದರೆ ಆತ ತಪ್ಪಿಸಿಕೊಂಡು ಸಹಾಯಕ್ಕಾಗಿ ಕೂಗಿದ. ಆತನ ಕಿರುಚಾಟವನ್ನು ಕೇಳಿ 30-40 ಜನರು ನನ್ನನ್ನು ಸುತ್ತುವರಿದು ಥಳಿಸಿದರು. ನನ್ನ ತಲೆ, ತುಟಿ, ಕೈ ಮತ್ತು ಕಾಲುಗಳ ಮೇಲೆ ಗಾಯಗಳಾಗಿವೆ. ನನ್ನ ಮೇಲೆ ದಾಳಿ ಮಾಡಿದ ಮತ್ತು ಹೊಡೆದ ಅಪರಿಚಿತ ವ್ಯಕ್ತಿಗಳ ವಿರುದ್ಧ ನಾನು ಕಾನೂನು ಕ್ರಮವನ್ನು  ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾನೆ.  ಆತನ ದೂರಿನ  ನಂತರ, ಪೋಲಿಸರು ಅಲ್ಲಿದ್ದ ಜನರ ವಿರುದ್ಧ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ಹಾನಿ) ಮತ್ತು 341(ತಪ್ಪು ನಡುವಳಿಕೆ)  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ:  ಓದಿದ್ದು ಇಂಜಿನಿಯರಿಂಗ್; ಮಾಡ್ತಿರೋದು ಕಳ್ಳತನ ಕೆಲಸ


ಚಾಕು ಹೊಂದಿದ್ದ ದರೋಡೆಕೋರನನ್ನು ಹಿಡಿಯಲು ತಮ್ಮ ಜೀವವನ್ನು ಪಣಕ್ಕಿಟ್ಟವರ ವಿರುದ್ಧ ಪೊಲೀಸರು ಹೇಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದಾಗ, ದೂರು ದಾಖಲಾದಾಗ ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ದುಷ್ಕರ್ಮಿಗಳನ್ನು ಹಿಡಿಯುವಲ್ಲಿ ನಾವು ಸಾರ್ವಜನಿಕ ಸಹಕಾರವನ್ನು ಬಯಸುತ್ತೇವೆ, ಆದರೆ ಶಂಕಿತರನ್ನು ಹೊಡೆದುರುಳಿಸಿ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ನಾವು ಜನರನ್ನು ವಿನಂತಿ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Published by:Sandhya M
First published: