ರೇಖಾ ಖದಿರೇಶ್ ಕೊಲೆ ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಸೆರೆ ಹಿಡಿದ ರೋಚಕ ಕಥೆ!

ಒಂದೇ ರಾತ್ರಿ ಒಟ್ಟು 50ಕ್ಕು ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ರಾತ್ರಿ ಪೂರ್ತಿ ವಿಚಾರಣೆ ನಡೆಸಲಾಗಿತ್ತು. ಮೊದಲ ಹಂತದ ವಿಚಾರಣೆ ಬಳಿಕ 39 ಜನರನ್ನು ವಶದಲ್ಲಿ ಇಟ್ಟುಕೊಂಡು ವಿಚಾರಣೆ ಮಾಡಿದ್ದರು.

ಪೊಲೀಸರ ಕಾರ್ಯಾಚರಣೆ

ಪೊಲೀಸರ ಕಾರ್ಯಾಚರಣೆ

  • Share this:
ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್​​ ರೇಖಾ ಕದಿರೇಶ್ ಕೊಲೆ ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಪೀಟರ್​​ ಹಾಗೂ ಸೂರ್ಯನ ಕಾಲಿಗೆ ಗುಂಡಿಕ್ಕಿ ಇಬ್ಬರನ್ನೂ ಬಂಧಿಸಲಾಗಿದೆ. ಕೊಲೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯ ಇಂಚಿಂಚು ಮಾಹಿತಿ ನ್ಯೂಸ್​​18ಗೆ ಲಭ್ಯವಾಗಿದೆ. ಬರ್ಬರ ಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳು ಹೇಗೆ ಸಿಕ್ಕಿ ಬಿದ್ರು ಗೊತ್ತಾ? 6 ತಂಡಗಳ ಒಂದು ದಿನದ ಕಾರ್ಯಾಚರಣೆ ಹೇಗಿತ್ತು ಗೊತ್ತಾ..?

ರೇಖಾ ಕದಿರೇಶ್ ಕೊಲೆ ಕೇಸ್ ಪತ್ತೆಗೆ 6 ವಿಶೇಷ ತಂಡ ಗಳು ರಚನೆ

ಟೀಮ್ 1 : ಕಾಟನ್ ಪೇಟೆ ಇನ್ಸ್ ಪೆಕ್ಟರ್ ಚಿದಾನಂದ ಮೂರ್ತಿ ನೇತೃತ್ವದ ಟೀಂ

ಟೀಮ್ 2:  ಸಿಟಿ ಮಾರ್ಕೆಟ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ಟೀಂ

ಟೀಮ್ 3: ಕಾಮಾಕ್ಷಿ ಪಾಳ್ಯ ಇನ್ಸ್ಪೆಕ್ಟರ್  ಪ್ರಶಾಂತ್ ನೇತೃತ್ವದ ಟೀಂ

ಟೀಮ್ 4 : ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದಲ್ಲಿ ತಂಡಗಳ ರಚನೆ

ಟೀಮ್ 5 : ಕಾಲಾಸಿಪಾಳ್ಯ  ಇನ್ಸ್ಪೆಕ್ಟರ್ ಚಂದ್ರಕಾಂತ್

ಟೀಮ್ 6: ಚಾಮಾರಾಜಪೇಟೆ ಇನ್ಸ್ಪೆಕ್ಟರ್ ಲೋಕಾಪುರ

ಒಂದೇ ರಾತ್ರಿ ಒಟ್ಟು 50ಕ್ಕು ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ರಾತ್ರಿ ಪೂರ್ತಿ ವಿಚಾರಣೆ ನಡೆಸಲಾಗಿತ್ತು. ಮೊದಲ ಹಂತದ ವಿಚಾರಣೆ ಬಳಿಕ 39 ಜನರನ್ನು ವಶದಲ್ಲಿ ಇಟ್ಟುಕೊಂಡು ವಿಚಾರಣೆ ಮಾಡಿದ್ದರು. 39 ಜನರ ವಿಚಾರಣೆ ಬಳಿಕ ಪೀಟರ್ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ಪೀಟರ್ ಸಂಪರ್ಕದಲ್ಲಿದ್ದ ವ್ಯಕ್ತಿಯಿಂದ ಹೆಚ್ಚಿನ ಮಾಹಿತಿ ಪಡೆಯಲಾಗಿತ್ತು. ಈ ಮಾಹಿತಿ ಆಧಾರಿಸಿ ಕಾರ್ಯಚರಣೆ ನಡೆಸಿದ್ದ ಪೊಲೀಸರು‌ ರಾತ್ರಿ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ , ವರ್ತೂರು , ಹುಸ್ಕೂರು ಬಳಿಯಲ್ಲಿ ಹುಡುಕಾಟ ನಡೆಸಿದ್ದರು.

ರಾತ್ರಿ ಪೂರ್ತಿ ಅರೋಪಿಗಳು ಬೆನ್ನು ಹತ್ತಿ 30ಕ್ಕೂ ಹೆಚ್ಚು ಪೊಲೀಸರು‌‌ ಹಿಂತಿರುಗಿದ್ದರು. ಇತ್ತ ಆರೋಪಿಗಳು ಆಟೋ ಒಂದರಲ್ಲಿ ನಗರದ್ಯಾಂತ ತಿರುಗಿದ್ದರು. ಈ ರೀತಿ ಆಟೋದಲ್ಲಿ ತಿರುಗುತ್ತಿರುವ ವಿಚಾರ ಬೆಳಗಿನ ಜಾವ ಮೂರೂವರೆ ಸುಮಾರಿಗೆ ಪೊಲೀಸರಿಗೆ ಗೊತ್ತಾಗಿತ್ತು. ನಂತರ ಆಟೋಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಆಸ್ಟಿಂಗ್ ಟೌನ್ ನಲ್ಲಿ ಮೊದಲ ಬಾರಿಗೆ ಆಟೋ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು.

ಆರೋಪಿಗಳು ಆಸ್ಟಿಂಗ್ ಟೌನ್ ಬಳಿಕ ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಸಿಂಗೇನ ಅಗ್ರಹಾರ ಸುತ್ತಮುತ್ತ ತಿರುಗಾಡಿದ್ದಾರೆ. ಬಳಿಕ ಕೊಡತಿ, ಚಿಕ್ಕನಾಯಕನ ಹಳ್ಳಿ ತಿರುಗಿ ಮತ್ತೆ ನಗರಕ್ಕೆ ಬಂದಿದ್ದ ಅರೋಪಿಗಳು. ಶ್ರಿರಾಮಪುರ, ರಾಜಾಜಿನಗರ, ವಿಜಯನಗರದ ಕಡೆ ಬೆಳಗ್ಗೆ ಬಂದಿದ್ದರು. ಬೆಳಗ್ಗೆ ರಾಜಾಜಿನಗರದಿಂದ ಮೈಸೂರು ರೂಡ್ ಮೂಲಕ ಅರೋಪಿಗಳು ಪಾಸ್ ಅಗಿದ್ರು. ಈ ಮಾಹಿತಿ ಪಕ್ಕ ಮಾಡಿಕೊಂಡಿದ್ದ ಟೀಮ್. ಆದರೆ ಬೆಳಗ್ಗೆ 10 ಗಂಟೆಗೆ ಮತ್ತೆ ಪೊಲೀಸರಿಗೆ ಸುಳಿವು ಸಿಗದಂತೆ ಅಗಿತ್ತು.

ಇದನ್ನೂ ಓದಿ: Bangalore Crime: ಮಾಜಿ ಕಾರ್ಪೋರೇಟರ್ ರೇಖಾ ಕೊಲೆ ಪ್ರಕರಣ; ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

ನಂತರ ಮಾಗಡಿ ರೋಡ್ ನಲ್ಲಿ ಅರೋಪಿಗಳ ಆಟೋ ಚಲನದ ಬಗ್ಗೆ ಮಾಹಿತಿ ಸಿಕ್ಕಿತ್ತಯ. ತಕ್ಷಣ ತಂಡಗಳ ಸಹಿತ ಅರೋಪಿಗಳ ಬೆನ್ನು ಹತ್ತಿದ್ದ  ಪೊಲೀಸರಿಗೆ 12 ಗಂಟೆ ಸುಮಾರಿಗೆ ಸುಂಕದ ಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಇರೊ ಬಗ್ಗೆ ಮಾಹಿತಿ ಸಿಕ್ಕಿತ್ತು.

ತಕ್ಷಣ ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್ಪೆಕ್ಟರ್ ಚಿದಾನಂದ ಮೂರ್ತಿ ಬೆನ್ನು ಹತ್ತಿದ್ದರು. ಅರೋಪಿಗಳು ಮರದ ಕೆಳಗೆ ಕುಳಿತು ಎಣ್ಣೆ ಹೊಡೆಯುತ್ತಿದ್ದಾಗ ಪೊಲೀಸರು ರೌಂಡಪ್ ಮಾಡಿದ್ದರು. ಬಳಿಕ ಡ್ಯಾಗರ್ ನಿಂದ ಹಿಡಿಯಲು ಹೋದ ಪಿ ಎಸ್ ಐ  ಕರಿಯಣ್ಣ ಮತ್ತು ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಅರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಲಕ್ಷ್ಮೀ ಅಸ್ಪತ್ರೆಗೆ ದಾಖಲಿಸಿದ್ದರು.

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿಯಾದ ಸೂರ್ಯ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ. ಎರಡು ಕೊಲೆ ,ಎರಡು ಕೊಲೆ ಯತ್ನ ಪ್ರಕರಣ ಇದೆ. ಪೀಟರ್ ಮೇಲೆ ಒಟ್ಟು ಐದು ಪ್ರಕರಣಗಳಿವೆ. ಮೂರು ಕೊಲೆ ಕೇಸ್, ಒಂದು ಹಲ್ಲೆ, ಎರಡು ಹಲ್ಲೆ ಮತ್ತು ಡಕಾಯಿತಿ ಕೇಸ್ ದಾಖಲಾಗಿದೆ. ಸದ್ಯ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Published by:Kavya V
First published: