ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಸ್ಟರ್ ಸೆರೆ.

ರೇಖಾ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಸೆಂಥಿಲ್.ಪ್ರಮುಖ ಆರೋಪಿ ಪೀಟರ್ ಜೊತೆ ನಿಕಟ ಸಂಪರ್ಕ ಹೊಂದಿದ ಕ್ಯಾಪ್ಟನ್.

ಗಂಡನ ಜೊತೆ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್

ಗಂಡನ ಜೊತೆ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್

  • Share this:
ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ತನ್ನ ಕಿಲಾಡಿ ಬುದ್ದಿ ತೋರಿ ಎಸ್ಕೇಪ್ ಆಗಿದ್ದ ಅಸಾಮಿ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ. ರೇಖಾ ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಮಾಸ್ಟರ್ ಅಲಿಯಾಸ್ ಸೆಂಥಿಲ್ ಅಲಿಯಾಸ್ ಕ್ಯಾಪ್ಟನ್ ಅಲಿಯಾಸ್ ಸೆಲ್ವರಾಜ್ ನನ್ನ ಪೊಲೀಸರು ಬಂಧಿಸಿದ್ದಾರೆ. ರೇಖಾ ಹತ್ಯೆಯಾದ ಹತ್ತು ದಿನಗಳ ಬಳಿಕ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಪ್ರಮುಖ ರೂವಾರಿಯನ್ನ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ರೇಖಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಸೆಂಥಿಲ್ ಅಲಿಯಾಸ್ ಸೆಲ್ವರಾಜ್ ನನ್ನ ಪೊಲೀಸರು ಇಂದು ಬೆಳಗ್ಗೆ ಈಜಿಪುರದ ಸರ್ಕಾರಿ ಶಾಲೆ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಗರದ ಶ್ರೀರಾಮಪುರ ನಿವಾಸಿಯಾದ ಸೆಲ್ವರಾಜ್ ನ ಮೂಲ ಹೆಸರು ಪೂಬಾಳನ್. ಅದ್ರೆ ಈತನ ಸಹಚರರೆಲ್ಲ ಇವನನ್ನ ಮಾಸ್ಟರ್ ಅಲಿಯಾಸ್ ಕ್ಯಾಪ್ಟನ್ ಕರೆಯುತ್ತಿದ್ದರಂತೆ.

ಆರೋಪಿ ಸೆಲ್ವರಾಜ್ ಅಲಿಯಾಸ್ ಮಾಸ್ಟರ್ ರೇಖಾ ಹತ್ಯೆಯ ಪ್ರಮುಖ ಆರೋಪಿ ಪೀಟರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ರೇಖಾ ಹತ್ಯೆ ನಡೆಸಲು ಮಾರ್ಚ್ ತಿಂಗಳಲ್ಲಿ ಆರೋಪಿ ಮಾಲಾ ಮನೆ ಮೇಲೆ ನಡೆದ ಮರ್ಡರ್ ಮೀಟಿಂಗ್ ನಲ್ಲಿ  ಮಾಸ್ಟರ್ ಸಹ ಭಾಗಿಯಾಗಿದ್ದನಂತೆ. ರೇಖಾ ಹತ್ಯೆ ಆರೋಪಿಗಳ ಸಿಡಿಆರ್ ಪರಿಶೀಲನೆ ಹಾಗೂ ತನಿಖೆ ವೇಳೆ ಮಾಸ್ಟರ್ ಪಾತ್ರದ ಸುಳಿವು ಸಿಕ್ಕಿದ್ದು ಪೊಲೀಸರು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದರು.

ರೇಖಾ ಹತ್ಯೆಯ ಮೀಟಿಂಗ್ ನಲ್ಲಿ ಹತ್ಯೆಗೆ ಸಂಚು ರೂಪಿಸಿ, ಯಾರು ಯಾರು ಏನೇನು ಮಾಡಬೇಕು ಎಂದು ಪ್ಲಾನ್ ಕೊಟ್ಟಿದ್ದನಂತೆ‌. ರೇಖಾ ಹತ್ಯೆ ಬಳಿಕ ಆರೋಪಿಗಳು ಎಸ್ಕೇಪ್ ಆಗುವ ಮಾರ್ಗಗಳ ಮಾಹಿತಿ ನೀಡಿದ್ದು ಐದು ಜನ ಆರೋಪಿಗಳು ಎರಡು ತಂಡಗಳಾಗಿ ಡಿವೈಡ್ ಆಗಲು ತಿಳಿಸಿದ್ದನಂತೆ. ಹಾಗೂ ಆರೋಪಿಗಳು ಎಸ್ಕೇಪ್ ಆಗಲು ಹಣಕಾಸು ವ್ಯವಸ್ಥೆ ಸೇರಿ ಎಲ್ಲಿ ಯಾರನ್ನ ಕಾಂಟ್ಯಾಕ್ಟ್ ಮಾಡಬೇಕು ಎಂದು ಮಾಹಿತಿ ಕೊಟ್ಟಿದ್ದ ಎಂದು ಪೊಲೀಸ್ ತನಿಖೆ ವೇಳೆ ಹೊರ ಬಂದಿದೆ.

ಇದನ್ನೂ ಓದಿ: Twitter: ಟ್ವಿಟರ್​ ಸರಿಯಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ: ದೆಹಲಿ ಹೈಕೋರ್ಟಿಗೆ ತಿಳಿಸಿದ ಕೇಂದ್ರ ಸರ್ಕಾರ

ಇನ್ನೂ ಸೆಲ್ವರಾಜ್ ಮತ್ತು ಪೀಟರ್ ಈ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೆಲ್ವರಾಜ್ ಅಲಿಯಾಸ್ ಮಾಸ್ಟರ್ ಅಲಿಯಾಸ್ ಕ್ಯಾಪ್ಟನ್ ಕಾಟನ್ ಪೇಟೆ, ಶ್ರೀರಾಮಪುರ, ಈಜಿಪುರ, ಆಸ್ಟಿನ್ ಟೌನ್ ನಲ್ಲಿ ನಡೆಯುವ ಕ್ರೈಮ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುತ್ತಿದ್ದು ಅದ್ದರಿಂದ ಆತನನ್ನ ಸಹಚರರೆಲ್ಲಾ ಮಾಸ್ಟರ್ ಕ್ಯಾಪ್ಟನ್ ಅಂತ ಕರೆಯುತ್ತಿದ್ರು ಎನ್ನಲಾಗಿದೆ. ಸದ್ಯ ಕಾಟನ್ ಪೇಟೆ ಪೊಲೀಸರು ರೇಖಾ ಹತ್ಯೆ ಕೇಸಲ್ಲಿ ಮಾಸ್ಟರ್ ನನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಈವರೆಗೆ ಎಂಟು ಜನರನ್ನ ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ ಸೋಂಕಿನಿಂದ ದೂರ ಉಳಿಯಿರಿ. ಅನಗತ್ಯವಾಗಿ ಗುಂಪುಗೂಡುವುದನ್ನು ನಿಲ್ಲಿಸಿ
Published by:HR Ramesh
First published: