Siddaramaiah: ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ಸಿದ್ದರಾಮಯ್ಯ ತೆರಳಲು ಇದು ಕೂಡ ಕಾರಣವಂತೆ!

ಲಾಕ್ ಡೌನ್ ಕಾರಣದಿಂದ ಪ್ರಕೃತಿ ಚಿಕಿತ್ಸೆಗೆ ತೆರಳಲು ಸಿದ್ದರಾಮಯ್ಯಗೆ ಸಾಧ್ಯವಾಗಿರಲಿಲ್ಲ. ಮೂರು ಬಾರಿ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಆ. 21): ರಾಜ್ಯಾದ್ಯಂತ ಪಕ್ಷದ ಚಟುವಟಿಕೆ ಗಳಲ್ಲಿ ಬ್ಯುಸಿಯಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಕೊಂಚ ಅನಾರೋಗ್ಯದಿಂದ ಬಳಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಗ ವಿಶ್ರಾಂತಿಗೆ ತೆರೆಳಿದ್ದಾರೆ. ವಯೋಸಹಜ ಬಳಲಿಕೆ ಹಾಗೂ ಆರೋಗ್ಯ ಚೇತರಿಕೆ ಸಲುವಾಗಿ ಹಾಗೂ ಮಾನಸಿಕ ನೆಮ್ಮದಿಯ ಉದ್ದೇಶದಿಂದ ಸಿದ್ದರಾಮಯ್ಯ ಸತತ ಹತ್ತು ದಿನಗಳ ಕಾಲ‌ ವಿಶ್ರಾಂತಿಗೆ ತೆರಳಲಿದ್ದಾರೆ. ತಮ್ಮ ಆರೋಗ್ಯವೃದ್ಧಿಗೆ ಪ್ರಕೃತಿ ಚಿಕಿತ್ಸೆಗೆ ಮೊರೆ ಹೋಗಿರುವ ಸಿದ್ದರಾಮಯ್ಯ ಜಿಂದಾಲ್ ಸಂಸ್ಥೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಇಂದು ತೆರಳಿ ದಾಖಲಾಗಲಿದ್ದಾರೆ.

ಈ ಹಿಂದೆಯೂ ಎರಡು ಭಾರಿ ಪ್ರಕೃತಿ ಚಿಕಿತ್ಸೆಯನ್ನು ಪಡೆದಿದ್ದ ಸಿದ್ದರಾಮಯ್ಯ ಈ ವಿಧಾನದಿಂದ ತಮಗೆ ಸಾಕಷ್ಟು ಉಲ್ಲಾಸ ಜೀವನೋತ್ಸಾಹ ಹೆಚ್ಚಿದೆ ಎಂದು ಹೇಳಿಕೊಂಡಿದ್ದರು. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಪ್ರಕೃತಿ ಚಿಕಿತ್ಸೆ ಪಡೆದಿರಲಿಲ್ಲ. ಕಳೆದ ತಿಂಗಳು ಇವರು ಜಿಂದಾಲ್ ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪಕ್ಷದ ವಿವಿಧ ಬೆಳವಣಿಗೆಗಳು ದಿಲ್ಲಿ ಪ್ರವಾಸ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜೊತೆ ರಾಜ್ಯ ಪ್ರವಾಸ ಕೈಗೊಳ್ಳುವ ಹಿನ್ನೆಲೆ ಕೊಂಚ ತಡವಾಗಿ ತೆರಳುತ್ತಿದ್ದಾರೆ.. ಕೋವಿಡ್ ನಂತ್ರ ಸಹ ಆರೋಗ್ಯದಲ್ಲಿ ಸ್ವಲ್ಪ ಆರೋಗ್ಯ ಏರುಪೇರು ಆಗಿತ್ತು ನಂತ್ರ ಸಿದ್ದರಾಮಯ್ಯರವರವ ಶುಗರ್ ಲೆವೆಲ್ ಸಹ ಕಂಟ್ರೋಲ್‌ಗೆ ಬಂದಿರಲಿಲ್ಲ, ಜೊತೆಗೆ ಸಿದ್ದರಾಮಯ್ಯ ದೇಹದ ತೂಕವೂ ಕೊಂಚ ಜಾಸ್ತಿಯಾಗಿದೆ , ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಕಾರಿಯಾಗಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹುಟ್ಟುಹಬ್ಬ ಸಮಾರಂಭ, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷ ರಾಮಯ್ಯ ಅಧಿಕೃತ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲೇಬೇಕು ಇದ್ದ ಹಿನ್ನೆಲೆ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯನ್ನು ಮುಂದೂಡಿದ್ದರು.

ಕಳೆದ ವಾರವಷ್ಟೇ 74ನೆ ವರ್ಷಕ್ಕೆ ಕಾಲಿರಿಸಿರುವ ಸಿದ್ದರಾಮಯ್ಯ ವಯೋಸಹಜವಾಗಿ ಎದುರಾಗುವ ಆರೋಗ್ಯ ಸಮಸ್ಯೆಯ ನಿವಾರಣೆಗೆ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಹಿಂದೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಪಡೆದ ಇದರಿಂದಾಗಿ ಅವರಿಗೆ ಸಾಕಷ್ಟು ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಸಾಕಷ್ಟು ರಾಜಕೀಯ ನಾಯಕರು ಜಿಂದಾಲ್ ಗೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ವರ್ಷಕ್ಕೊಮ್ಮೆ ಆಗಮಿಸಿ ಜಿಂದಾಲ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳುತ್ತಾರೆ. ದಿಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಆಸ್ತಮಾದಿಂದ ಬಳಲುತ್ತಿರುವವರು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಅವರು ವರ್ಷಕ್ಕೊಮ್ಮೆ ಬಂದು ಜಿಂದಾಲ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳುತ್ತಾರೆ. ಇವರಲ್ಲದೆ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ಅನೇಕ ರಾಜಕೀಯ ಮುಖಂಡರು ಸಹ ಪ್ರಕೃತಿ ಚಿಕಿತ್ಸೆಗೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನೇ ಆಶ್ರಯಿಸುತ್ತಿದ್ದಾರೆ.

ನಾಲ್ಕನೇ ಬಾರಿಗೆ ಅಂತಿಮ

ಲಾಕ್ ಡೌನ್ ಕಾರಣದಿಂದ ಪ್ರಕೃತಿ ಚಿಕಿತ್ಸೆಗೆ ತೆರಳಲು ಸಿದ್ದರಾಮಯ್ಯಗೆ ಸಾಧ್ಯವಾಗಿರಲಿಲ್ಲ. ಮೂರು ಬಾರಿ ರೂಮ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು. ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ  ರೂಮ್ ಬುಕ್ ‌ಮಾಡಲಾಗಿತ್ತು. ಗೋವಿಂದ ಪ್ರಕರಣಗಳು ಹೆಚ್ಚಿದ್ದ ಕಾರಣ ಹಾಗೂ ಪಕ್ಷದ ಚಟುವಟಿಕೆಯಲ್ಲಿ ತೊಡಗಿರುವ ಹಿನ್ನೆಲೆ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಈಗಲೂ ಮತ್ತೊಮ್ಮೆ ತೆರಳುವ ಪ್ರಯತ್ನ ಮಾಡದೇ, ಬೆಂಗಳೂರಿಗೆ ಸಮೀಪದಲ್ಲೇ ಇರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ತೀರ್ಮಾನಿಸಿದ್ದಾರೆ. ಮುಂದಿನ ಹತ್ತು ದಿನ ಇವರು ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು ನಿಸರ್ಗದ ಮಡಿಲಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಇದನ್ನು ಓದಿ: ಯಶಸ್ವಿನಿ ವಿಮಾ ಯೋಜನೆ ಮರು ಜಾರಿಗೆ ಸರ್ಕಾರ ಚಿಂತನೆ

ಸಾಲು-ಸಾಲು ಚುನಾವಣೆ

ಇನ್ನೂ ತಡ ಮಾಡಿದ್ರೆ ಆಗಲ್ಲ ಮುಂದು ಸಾಲು ಸಾಲು ಚುನಾವಣೆ ಇದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಯಾವುದೇ ಸಮಯದಲ್ಲೂ ಬಿಬಿಎಂಪಿ ಚುನಾವಣೆ ಘೋಷಣೆ ಆಗಬಹುದು. 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಹಿನ್ನೆಲೆ ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಇರುವ ಹಿನ್ನೆಲೆ ಅದಕ್ಕೂ ಮುನ್ನವೇ ಆರೋಗ್ಯ ಸುಧಾರಿಸಿಕೊಳ್ಳಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸಾರಿ ಕೋವಿಡ್ ಗೆ ತುತ್ತಾಗಿರುವ ಅವರು, ಎರಡನೇ ಅಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಜನರಿಂದ ದೂರವಿದ್ದು ಎರಡನೇ ಬಾರಿ ಕೋವಿಡ್ ದಾಳಿ ಆಗದಂತೆ ಎಚ್ಚರ ವಹಿಸಿದ್ದರು. ಮೊದಲ ಅಲೆಯ ಸಂದರ್ಭದಲ್ಲಿ ಕೋವಿಡ್ ಪೋಸಿಟಿವ್ ಗೆ ಒಳಗಾಗಿದ್ದ ಅವರು, ಚೇತರಿಕೆ ನಂತರ ಹಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಗಾಗ ಜ್ವರದಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾಯಿಲೆ ಹೊಂದಿರುವ ಅವರು ಹಿಂದೆಲ್ಲಾ ಶುಗರ್ ಲೆವೆಲ್ ಅನ್ನು ಚೆನ್ನಾಗಿ ನಿಯಂತ್ರಿಸಿ ಕೊಂಡಿದ್ದರು. ಆದರೆ ಇತ್ತೀಚಿಗೆ ಅದನ್ನ ನಿಯಂತ್ರಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಇತ್ತೀಚಿನ ಕೆಲ ತಿಂಗಳಲ್ಲಿ ಶರೀರದ ತೂಕವು ಹೆಚ್ಚಾಗುತ್ತಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಸೆಪ್ಟೆಂಬರ್ 13 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು ಅದರಲ್ಲಿ ಪಾಲ್ಗೊಳ್ಳುವ ಹರಿತವಾಗಿ ಪ್ರಕೃತಿ ಚಿಕಿತ್ಸೆ ಪೂರೈಸಿಕೊಂಡು ಮಾಡಲು ತೀರ್ಮಾನಿಸಿದ್ದಾರೆ.

2023 ರ ಸಾರ್ವಜನಿಕ ಚುನಾವಣೆ , ಸ್ಥಳೀಯ ಸಂಸ್ಥೆ ಗಳ ಚುನಾವಣಾ ಸೇರಿದಂತೆ ,  ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆ, ಪ್ರತಿಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಣೆ, ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಸಂಚಾರ ಸೇರಿದಂತೆ ಹಲವು ಒತ್ತಡದ ಕೆಲಸಗಳು ಮುಂಬರುವ ದಿನಗಳಲ್ಲಿ ಎದುರಾಗುವ ಹಿನ್ನೆಲೆ ಅದಕ್ಕೆ ಸಜ್ಜಾಗಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ.
Published by:Seema R
First published: