ಬೆಂಗಳೂರು: ಹಿಂದಿ (Hindi) ನಮ್ಮ ರಾಷ್ಟ್ರ ಭಾಷೆ (National Language) ಹೌದೋ ಅಲ್ಲವೋ ಎಂಬ ವಿಚಾರಕ್ಕೆ ಸಾಕಷ್ಟು ವಾದ, ಪ್ರತಿವಾದಗಳು ನಡೆದಿದ್ದವು. ಬಾಲಿವುಡ್ ನಟ (Bollywood Actor) ಅಜಯ್ ದೇವಗನ್ (Ajay Devagan) ಮಾಡಿದ್ದ ಟ್ವೀಟ್‌ಗೆ (Tweet) ಸ್ಯಾಂಡಲ್‌ವುಡ್ ನಟ (Sandalwood Actor) ಕಿಚ್ಚ ಸುದೀಪ್ (Kichcha Sudeep) ರೀಟ್ವೀಟ್ ಮಾಡಿದ್ದರು. ಇದಾದ ಬಳಿಕ ಹಿಂದಿ ಹೇರಿಕೆ ವಿರುದ್ಧ, ಹಿಂದಿ ನಮ್ಮ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ವಿಚಾರಕ್ಕೆ ಭಾರೀ ಚರ್ಚೆ ನಡೆದಿತ್ತು. ದಕ್ಷಿಣದಲ್ಲಿ ಬಲವಂತವಾಗಿ ಹಿಂದಿ ಹೇರಲಾಗುತ್ತಿದೆ ಅಂತ ಅನೇಕರು ದನಿಗೂಡಿಸಿದ್ದರು. ಇದೀಗ ಮತ್ತೆ ಹಿಂದಿ ರಾಷ್ಟ್ರಭಾಷೆ ಎಂಬ ವಿಚಾರದ ಬಗ್ಗೆ ಸ್ಯಾಂಡಲ್‌ವುಡ್ ನಟ, ರಿಯಲ್ ಸ್ಟಾರ್ ಉಪೇಂದ್ರ (Real Star Upedra) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಕನ್ನಡ ವಾಹಿನಿ ಜೊತೆ ಎಕ್ಸ್‌ಕ್ಲೂಸಿವ್ (Exclusive) ಆಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಕನ್ನಡವೇ ನಮ್ಮ ರಾಷ್ಟ್ರಭಾಷೆ” ಎಂದ ಉಪ್ಪಿ
ಹಿಂದಿ ರಾಷ್ಟಭಾಷೆ ಎಂಬ ವಿಚಾರಕ್ಕೆ ಸ್ಯಾಂಡಲ್‌ವುಡ್ ನಟ ಕಮ್ ರಾಜಕಾರಣಿ, ರಿಯಲ್ ಸ್ಟಾರ್ ಉಪೇಂದ್ರ ಟಕ್ಕರ್ ಕೊಟ್ಟಿದ್ದಾರೆ. ನ್ಯೂಸ್ 18 ಕನ್ನಡ ವಾಹಿನಿ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಅವರು, ಕನ್ನಡವೇ ನಮಗೆ ರಾಷ್ಟ್ರ ಭಾಷೆ ಎಂದಿದ್ದಾರೆ. ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿವೆ. ನಮ್ಮ ನೋಟಿನ ಮೇಲಿರುವ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿವೆ. ಆದ್ದರಿಂದ ನೋಟಿನ ಮೇಲೆ ಎಲ್ಲಾ ಭಾಷೆಗಳನ್ನು ಬತೆದಿದ್ದಾರೆ ಅಂತ ಹೇಳಿದ್ದಾರೆ.
“ಭಾಷೆ ಅನ್ನೋದು ಕಮ್ಯೂನಿಕೇಷನ್‌ಗೆ ಇರುವುದು”
ಭಾಷೆ ಅನ್ನೋದು ಕಮ್ಯುನಿಕೇಶನ್ ಗೆ ಇರುವಂತ ಮೀಡಿಯಾ ಅಷ್ಟೇ. ನಾನು ಈಗ ಅಲ್ಲಿ ಹೋಗಿ ಹಿಂದಿ ಸಿನಿಮಾ ಮಾಡಿದ್ರೆ ಹಿಂದಿ ಕಲಿಯಲೇ ಬೇಕು, ಅವರು ಇಲ್ಲಿ ಬಂದು ಕನ್ನಡ ಸಿನಿಮಾ ಮಾಡಿದ್ರೆ ಕನ್ನಡ ಕಲಿಯಲೇ ಬೇಕು . ನಮ್ಮ ಕನ್ನಡ ಭಾಷೆ ನಮಗೆ ರಾಷ್ಟ ಭಾಷೆ ಅಂತ ಉಪ್ಪಿ ಹೇಳಿದ್ದಾರೆ.
ಇದನ್ನೂ ಓದಿ: Ramya Divyaspandana: 'ಶಿವ' ಶಿವಾ.. 'ಪದ್ಮಾವತಿ' Troll ಮಾಡ್ತಿದ್ಯಂತೆ ಕಾಣದ 'ಕೈ'? ತಾವೇ ಖುದ್ದು ಸಾಕ್ಷಿ ಕೊಟ್ರು ರಮ್ಯಾ!
ಮೋಹನ್ ದಾಸ್ ಪೈ ಟ್ವೀಟ್‌ಗೆ ಉಪ್ಪಿ ಪ್ರತಿಕ್ರಿಯೆ
ಇನ್ನು ಬಿಬಿಎಂಪಿ ಎಲೆಕ್ಷನ್, ಪಿಎಸ್ಐ ಅಕ್ರಮದ ಬಗ್ಗೆ ಉಪ್ಪಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಬೆಂಗಳೂರು ಅವ್ಯವಸ್ಥೆ ಬಗ್ಗೆ ಐಟಿ ದಿಗ್ಗಜ, ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದರು. ಅತೀ ಹೆಚ್ಚು ತೆರಿಗೆ ಪಾವತಿಸಿದರೂ ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ ಅಂತ ಇಲ್ಲಿನ ಅವ್ಯವಸ್ಥೆ, ಕೆಟ್ಟ ರಸ್ತೆಯ ಬಗ್ಗೆ ಹೇಳಿದ್ದರು. ಈ ಬಗ್ಗೆಯೂ ಉಪ್ಪಿ ಮಾತನಾಡಿದ್ದಾರೆ.
“ಅವರ್ ಟ್ವೀಟ್‌ನಿಂದನೇ ನಮಗೆ ಗೊತ್ತಾಗಬೇಕಾ?”
ಮೋಹನ್ ದಾಸ್ ಪೈ ಅವರ ಟ್ವೀಟ್ ನಿಂದ ನಮಗೆ ಗೊತ್ತಾಗಬೇಕಾ? ಅಂತ ಪ್ರಶ್ನಿಸಿರುವ ಉಫೇಂದ್ರ, ಅದು ಎಲ್ಲರಿಗೂ ಗೊತ್ತಿರುವ ವಿಚಾರ, ಟ್ಯಾಕ್ಸ್ ಕಟ್ಟೋ ನಮಗೆ ಗೊತ್ತಿಲ್ವ? ಇಲ್ಲ ಗೊತ್ತಿದ್ರು ನಮಗೆ ಗೊತ್ತಿಲ್ಲ ಗೊತ್ತಿಲ್ಲ ಅಂತ ಇದ್ದೀವಾ? ಅಂತ ಖಾರವಾಗೇ ಪ್ರಶ್ನಿಸಿದ್ದಾರೆ. ಸಮಸ್ಯೆಗಳ ಬಗ್ಗೆ ಗೊತ್ತಿದ್ರು ಗೊತ್ತಿಲ್ಲ ಅಂತ ಕೂತಿರೋದೆ ನಮ್ಮ ಸಿಸ್ಟಮ್, ಕರಪ್ಷನ್ ಆಗ್ತಿರೋದು ಗೊತ್ತುಇಲ್ಲಿ ದುಡ್ಡಿನ ವ್ಯವಹಾರ ನಡಿತಿರೋದು ಗೊತ್ತು ಅಂತ ಕುಟುಕಿದ್ದಾರೆ.
ಇದನ್ನೂ ಓದಿ: Sonu Sood: ಇದಪ್ಪಾ ಮಾನವೀಯತೆ! 12 ಕೋಟಿಯ 50 ಜನರ ಲಿವರ್ ಚಿಕಿತ್ಸೆ ಮಾಡುವಂತೆ ಮನವಿ ಮಾಡ್ಕೊಂಡಿದ್ದ ಸೋನು ಸೂದ್!
ಬಿಬಿಎಂಪಿ ಚುನಾವಣೆಗೆ ಪ್ರಜಾಕೀಯ ಸ್ಪರ್ಧೆ
ಇನ್ನು ಮುಂಬರುವ ಬಿಬಿಎಂಪಿ ಚುನಾವಣೆಗೆ ಪ್ರಜಾಕೀಯದಿಂದ ಎಲ್ಲಾ ವಾರ್ಡ್ ಗಳಿಂದ ಅಭ್ಯರ್ಥಿಗಳು ಚುನಾವಣೆಗೆ ನಿಲ್ತಾರೆ ಅಂತ ಉಪೇಂದ್ರ ಹೇಳಿದ್ದಾರೆ. ಅಭ್ಯರ್ಥಿಗಳನ್ನು ನಾನು ಸೆಲೆಕ್ಟ್ ಮಾಡಲ್ಲ ಜನರೆ ಆಯ್ಕೆ ಮಾಡ್ತಾರೆ, ಸೆಲೆಕ್ಷನ್, ಎಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಶನ್ ಎಲ್ಲವನ್ನು ಜನರ ಜೊತೆ ಸೇರಿ ಮಾಡಿ ಮತದಾರನಾಗಿ ಉಳಿಯಬೇಕು ಅನ್ನೋದೆ ನನ್ನ ಆಸೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ