Rape Case in Bangalore: ಕ್ಯಾಬ್​ ಚಾಲಕನ ವಿರುದ್ಧ ಅತ್ಯಾಚಾರ ಆರೋಪ; ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ಇಂದು ಬೆಳಗಿನ ಜಾವ 3 ರಿಂದ 4 ಗಂಟೆಯಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಯುವತಿ ಜೀವನ ಭೀಮಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

file photo

file photo

 • Share this:
  ಬೆಂಗಳೂರು (ಸೆ. 22): ಮೈಸೂರು ಅತ್ಯಾಚಾರ ಘಟನೆ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ಯುವತಿ ಮೇಲೆ ಕ್ಯಾಬ್ ಚಾಲಕನೋರ್ವ (cab Driver) ಅತ್ಯಾಚಾರ  (Rape Case) ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಜೀವನ್ ಭೀಮಾನಗರ (jeevan Bhim nagar) ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಮೂಲದ ದೇವರಾಜ್​ ಬಂಧಿತ ಆರೋಪಿ. ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

  ಏನಿದು ಘಟನೆ?
  ಖಾಸಗಿ ಹೋಟೆಲ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ್ರಸ್ತೆ ಮಹಿಳೆ ನಿನ್ನೆ ರಾತ್ರಿ ಸ್ನೇಹಿತರ ಮನೆಗೆ ಔತಣ ಕೂಟಕ್ಕೆ ಹೋಗಿದ್ದಳು. ಇದನ್ನು ಮುಗಿಸಿ ರಾತ್ರಿ ಮಲ್ಲೇಶ್​ ಪಾಳ್ಯಕ್ಕೆ ಹೋಗಲು ಕ್ಯಾಬ್​ ಬುಕ್​ ಮಾಡಿದ್ದಳು. ಮಹಿಳೆ ಮನೆಯ ಬಳಿ ಬಂದಾಗ ಆರೋಪಿ ದೇವರಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇಂದು ಬೆಳಗಿನ ಜಾವ 3 ರಿಂದ 4 ಗಂಟೆಯಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಯುವತಿ ಜೀವನ ಭೀಮಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ
  ಪ್ರಕರಣ ಕುರಿತು ದೂರು ದಾಖಲಾಗುತ್ತಿದ್ದ ಪೊಲೀಸರು ಐಪಿಸಿ ಸಿಆರ್ ಪಿಸಿ ಅಡಿ ತನಿಖೆ ನಡೆಸಲು ಮುಂದಾದರು. ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಇನ್ನು ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಆರಂಭಿಸಿದ್ದು, ತನಿಖೆ ಬಳಿಕ ಕೆಲವು ವಿಷಯ ತಿಳಿಯಲಿದೆ ಎಂದಿದ್ದಾರೆ.

  ಇದನ್ನು ಓದಿ: ಸೀರೆ ಉಟ್ಟವರಿಗೆ ರೆಸ್ಟೋರೆಂಟ್​ಗೆ​ ಪ್ರವೇಶ ಇಲ್ಲ ಎಂದ ಮಹಿಳೆಯನ್ನು ಹೊರಗೆ ಕಳುಹಿಸಿದ ಸಿಬ್ಬಂದಿ

  ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ

  ಇನ್ನು ಈ ಪ್ರಕರಣ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ವಿಚಾರಣೆ ವೇಳೆ ಕ್ಯಾಬ್​ ಚಾಲಕ ತಾವು ಅತ್ಯಾಚಾರ ನಡೆಸಿಲ್ಲ ಎಂದು ಹೇಳುತ್ತಿದ್ದಾನೆ. ಕ್ಯಾಬ್​ ಚಾಲಕ ಮತ್ತು ಸಂತ್ರಸ್ತೆ ನಡುವೆ ಬೆಳಗಿನ ಜಾವ ಡ್ರಾಪ್​ ನೀಡುವ ವಿಚಾರದಲ್ಲಿ ಗಲಾಟೆ ಆಗಿದೆ ಎಂದಿದು ಕ್ಯಾಬ್​ ಚಾಲಕ ತಿಳಿಸಿದ್ದಾನೆ. ಈ ಬಗ್ಗೆ ಸತ್ಯಾಂಶ ಪರಿಶೀಲನೆ ನಡೆಸಲಾಗುವುದು. ಪ್ರಾಥಮಿಕ ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದ್ದಾರೆ.

  ಡಿಸಿಪಿ ಶರಣಪ್ಪ, ಹೆಚ್ಚುವರಿ ಆಯುಕ್ತ ಮುರುಗನ್​ ರಿಂದ ವಿಚಾರಣೆ

  ಇನ್ನು ಪ್ರಕರಣ ಕುರಿತು ಸಂತ್ರಸ್ತ ಯುವತಿಯನ್ನು ಮಧ್ಯಾಹ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರದಿ ಬಂದ ಬಳಿಕ ಈ ಬಗ್ಗೆ ತನಿಖೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ಶರಣಪ್ಪ ಮತ್ತು ಹೆಚ್ಚುವರಿ ಆಯುಕ್ತ ಮುರುಗನ್ ಅವರೇ ಆರೋಪಿಯ ಖುದ್ದು ವಿಚಾರಣೆ ಮುಂದಾಗಿದ್ದಾರೆ.
  Published by:Seema R
  First published: