ಬಟ್ಟೆಬಿಚ್ಚಿ ಓಡಾಡೋರಿಗೇನ್ ಗೊತ್ತು ಗಾಂಧಿ ಮೌಲ್ಯ?: ಕಂಗನಾ ವಿರುದ್ಧ ರಮೇಶ್ ಕುಮಾರ್ ಕಿಡಿ

Ramesh Kumar vs Right Wing- ಮಹಾತ್ಮ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡುವ ಇವರು ಮನುಷ್ಯರಾ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ಸೇರಿದಂತೆ ಬಲಪಂಥೀಯರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿಡಿಗುಟ್ಟಿದ್ಧಾರೆ.

ರಮೇಶ್ ಕುಮಾರ್

ರಮೇಶ್ ಕುಮಾರ್

 • Share this:
  ಬೆಂಗಳೂರು, ನ. 18: ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಬರೀ ಭಿಕ್ಷೆ ಮಾತ್ರ. ಒಂದು ಕೆನ್ನೆಗೆ ಹೊಡೆದರೆ ಎರಡೂ ಕೆನ್ನೆಗೆ ಹೊಡೆಸಿಕೊಳ್ಳಿ ಎಂದು ಗಾಂಧಿಜಿ ಅವರಿಗೆ ಸಿಗುವುದು ಭಿಕ್ಷೆ ಮಾತ್ರವೇ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Former Speaker Ramesh Kumar) ಕಿಡಿಕಾರಿದ್ಧಾರೆ. ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತಿದೆ ಗಾಂಧಿ ಮೌಲ್ಯ (Shame that those who strip clothes speak about Gandhiji) ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಕೆಯಂಥವರು ಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ತಿರುಗುವವರು. ಅಂಥವರ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಮಾತನಾಡಿದಷ್ಟೂ ಅವರು ದೊಡ್ಡವರಾಗುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಅವರು ಹೇಳಿದ್ದಾರೆ. ನಗರದ ಮಹಾರಾಣಿ ಕಾಲೇಜು ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಕಚೇರಿಯಲ್ಲಿ ದೇಶದ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ನಿಮಿತ್ತ ನಡೆಸಲಾದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ರಮೇಶ್ ಕುಮಾರ್ ಅವರು ಬಲಪಂಥೀಯರನ್ನ ಹಿಗ್ಗಾಮುಗ್ಗ ಝಾಡಿಸುವ ಪ್ರಯತ್ನ ಮಾಡಿದರು.

  ನರಿಗಳು ಬಂದು ಖುರ್ಚಿಯಲ್ಲಿ ಕುಳಿತಿದ್ದಾರೆ. ನಾವು ಸಿಂಹದ ಮರಿಗಳು ಈ ನರಿಗಳಿಗೆ ಅಂಜುವುದು ಬೇಡ. ಅವರ ಆಟ ಸ್ವಲ್ಪ ದಿನ ಮಾತ್ರ ನಡೆಯಬಹುದು ಅಷ್ಟೇ. ನಾವು ಕಾದು ಮುನ್ನುಗ್ಗೋಣ ಎಂದು ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಕರೆ ನೀಡಿದರು.

  ಮಕ್ಕಳ ಮನಸಲ್ಲಿ ವಿಷ ಬಿತ್ತುತ್ತಾರೆ:

  “ಈ ದೇಶಕ್ಕೆ ಸ್ವಾತಂತ್ರ್ಯವನ್ನು ಯಾರೂ ಗಿಫ್ಟ್ ಆಗಿ ಕೊಡಲಿಲ್ಲ. ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದೆವು. ಈ ದೇಶಕ್ಕೆ ಏನು ಕೊಟ್ಟಿದ್ದೀರಾ ಎಂದು ಬಿಜೆಪಿ ನಾಯಕರು ಕೇಳುತ್ತಾರೆ. ಇವರು ಅಂದು ಹುಟ್ಟಿದ್ದರಾ? ಆರೆಸ್ಸೆಸ್ ಕೆಲಸ ಏನು ಗೊತ್ತಿದೆಯಾ? ಎಳೆಯ ಮಕ್ಕಳ ಮನಸಿನಲ್ಲಿ ವಿಷ ತುಂಬುವುದು ಅದರ ಕೆಲಸ. ಹಿಂದೂ ರಾಷ್ಟ್ರ ಮಾಡುವುದು ಅದರ ಗುರಿ.

  ರಮೇಶ್ ಕುಮಾರ್ ಕಣ್ಣೀರು:

  “ಆರೆಸ್ಸೆಸ್​ಗೆ ಭಗತ್ ಸಿಂಗ್ ಯಾಕೆ ಹೀರೋ ಆಗಿ ಕಾಣಿಸಲಿಲ್ಲ. ಗಾಂಧಿಜಿಗೆ ಪರಿಶಿಷ್ಟರ ಮೇಲೆ ಬದ್ಧತೆ ಇತ್ತು. ಬ್ರಿಟಿಷರಿಗೆ ಬಿಜೆಪಿಯವರಿಗೆ ಯಾವ ವ್ಯತ್ಯಾಸವೂ ಇಲ್ಲ. ಎಲ್ಲಾ ಉದ್ಯಮಗಳನ್ನ ಖಾಸಗಿಯವರಿಗೆ ನೀಡುತ್ತಿದ್ದಾರೆ. ನೀವು ದೇಶಭಕ್ತರು, ನಾವೆಲ್ಲಾ ದೇಶದ್ರೋಹಿಗಳಾ? ದೇಶದ ಬಗ್ಗೆ ಇವರಿಂದ ನಾವು ತಿಳಿಯಬೇಕಾ? ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಇವರು ಮನುಷ್ಯರಾ ಎಂದು ರಮೇಶ್ ಕುಮಾರ್ ಕಣ್ಣೀರು ಹಾಕಿದರು.

  ಇದನ್ನೂ ಓದಿ: ಬಿಜೆಪಿಯಲ್ಲಿರುವ ಗುರುವಿನ ಮಾತು ಮೀರದ ಡಿಕೆಶಿ, ಒಂದೇ ಕರೆಗೆ ನೀಡಿದ್ರು ಪರಿಷತ್ ಟಿಕೆಟ್

  ಯಾರು ಹಿಂದೂ?

  ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ಮಾತನಾಡುವ ಆರೆಸ್ಸೆಸ್ ಬಗ್ಗೆ ರಮೇಶ್ ಕುಮಾರ್ ವಾಗ್ದಾಳಿ ಮುಂದುವರಿಸಿದರು. ಯಾರು ಹಿಂದೂ, ಯಾರು ಹಿಂದೂ ಅಲ್ಲ. ರಾಜರಾಮ್ ಮೋಹನ್ ರಾಯ್ ಹಿಂದೂ ಅಲ್ವಾ? ದಯಾನಂದ ಸರಸ್ವತಿ ಹಿಂದೂ ಅಲ್ವಾ? ರವೀಂದ್ರನಾಥ್ ಠಾಗೋರ್ ಹಿಂದೂ ಅಲ್ವಾ? ಎಂದು ಪ್ರಶ್ನಿಸಿದ ರಮೇಶ್ ಕುಮಾರ್, ಸತಿ ಸಹಗಮನ ಪದ್ಧತಿಯನ್ನ ಆರೆಸ್ಸೆಸ್ ಈಗಲೂ ಸಮರ್ಥಿಸಿಕೊಳ್ಳುತ್ತದೆ. ಹಾಗಾದರೆ ಹೆಂಡತಿ ಸತ್ತರೆ ಇವರು ಸಾಯಬೇಕಲ್ವಾ? ಎಂದು ವ್ಯಂಗ್ಯ ಮಾಡಿದರು.

  ಅಮಿತ್ ಶಾ ಯಾರು ಇವನು? ಎನ್​ಆರ್​ಸಿ ಬಂದಾಗ ಚುನ್ ಚುನ್ ಕೆ ಮಾರೂಂಗ ಅಂತಾನೆ ಶಾ. ಇವನ ಕೈಯಲ್ಲಿ ಬಂದೂಕು ಇದೆಯಲ್ಲ. ಹೋಮ್ ಮಿನಿಸ್ಟರ್ ಅಲ್ವೆ ಇವನು. ಎಂಥವರ ಕೈಗೆ ದೇಶ ಕೊಟ್ಟಿದ್ದೇವೆ ಸ್ವಾಮಿ..! ನಾನು ಇತಿಹಾಸದ ಬಗ್ಗೆ ದಾಖಲೆ ಇಟ್ಟುಕೊಂಡು ಹೇಳಿದ್ದೇನೆ. ಇದರಲ್ಲಿ ಒಂದು ಸಳ್ಳಾದರೂ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ರಮೇಶ್ ಕುಮಾರ್ ಸವಾಲು ಹಾಕಿದರು.

  ಮಾಹಿತಿ: ಸಂಜಯ ಎಂ ಹುಣಸನಹಳ್ಳಿ
  Published by:Vijayasarthy SN
  First published: