HOME » NEWS » State » BENGALURU URBAN RAMESH JARKIHOLI CASE ACCUSED NARESH DRILLED BY SIT TEAM KVD

ರಮೇಶ್ ಜಾರಕಿಹೊಳಿ ಸಿಡಿ ಕೇಸ್: CD ಮೇಕಿಂಗ್, ವಿತರಣೆ ಬಗ್ಗೆ ಆರೋಪಿ ನರೇಶ್​ಗೆ SIT ಡ್ರಿಲ್!

ಸಿಡಿ ಯಾವಾಗ, ಹೇಗೆ ಮಾಡಿದ್ದಿರಿ? ಸಿಡಿ ಮಾಡಲು ಕ್ಯಾಮರಾವನ್ನು ಎಲ್ಲಿಂದ ಖರೀದಿ ಮಾಡಲಾಗಿತ್ತು? ಸಿಡಿಯನ್ನು ಎಡಿಟ್ ಮಾಡಿಸಿದ್ದು ಎಲ್ಲಿ? ಸಿಡಿ ಎಡಿಟ್ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆದ್ರಾ?

Kavya V | news18-kannada
Updated:June 16, 2021, 5:43 PM IST
ರಮೇಶ್ ಜಾರಕಿಹೊಳಿ ಸಿಡಿ ಕೇಸ್: CD ಮೇಕಿಂಗ್, ವಿತರಣೆ ಬಗ್ಗೆ ಆರೋಪಿ ನರೇಶ್​ಗೆ SIT ಡ್ರಿಲ್!
ರಮೇಶ್​ ಜಾರಕಿಹೊಳಿ, ಆರೋಪಿ ನರೇಶ್​
  • Share this:
ಬೆಂಗಳೂರು: ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದ ಸಿಡಿ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಆರೋಪಿ ನರೇಶ್​ರನ್ನು ಇಂದು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. 2 ದಿನಗಳ ಹಿಂದೆಯೂ ಆರೋಪಿಗಳಾದ ನರೇಶ್​, ಶ್ರವಣ್​ರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ಎಸ್​ಐಟಿ ತನಿಖಾ ತಂಡ ಅಸಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಆರೋಪಿ ನರೇಶ್ ಸಂಬಳ , ಬ್ಯಾಂಕ್ ಖಾತೆ, ಎಷ್ಟು ಆದಾಯ ಇತ್ತು, ಬೇರೆ ಯಾವುದಾದ್ರು ಆದಾಯದ ಮೂಲ ಇದೆಯೇ ಎಂಬುದರ ಬಗ್ಗೆ ಎಸ್ ಐ ಟಿ ತಂಡ ಮಾಹಿತಿ ಪಡೆದುಕೊಂಡಿದೆ. ಇನ್ನು ಸಿಡಿ ಮೇಕಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಲಾಗಿದೆ. ಸಿಡಿ ಯಾವಾಗ, ಹೇಗೆ ಮಾಡಿದ್ದಿರಿ? ಸಿಡಿ ಮಾಡಲು ಕ್ಯಾಮರಾವನ್ನು ಎಲ್ಲಿಂದ ಖರೀದಿ ಮಾಡಲಾಗಿತ್ತು? ಸಿಡಿಯನ್ನು ಎಡಿಟ್ ಮಾಡಿಸಿದ್ದು ಎಲ್ಲಿ? ಸಿಡಿ ಎಡಿಟ್ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆದ್ರಾ? ಈ ಹಿಂದೆ ಇದೇ ರೀತಿ ಎಷ್ಟು ಕೃತ್ಯ ಎಸಗಿದ್ದಿರಾ ಎಂದೆಲ್ಲಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಸಿಡಿ ದಿನೇಶ್ ಕಲ್ಲಹಳ್ಳಿಗೆ ಕೊಟ್ಟು ಬಿಡುಗಡೆ ಮಾಡಿಸಿದ್ದು ಯಾರು? ಸಿಡಿ ಬಿಡುಗಡೆಗೂ ಮೊದಲು ಸಭೆ ಸೇರಿದ್ದಿರಾ ಎಂದು ಪ್ರಶ್ನಿಸಲಾಗಿದೆ. ಆದರೆ ಆರೋಪಿ ನರೇಶ್​ ತಾನು ಮುಗ್ಧ, ನನಗೆ ಇವೆಲ್ಲದ್ರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಸಿಡಿ ಬಗ್ಗೆ ಯುವತಿ  ಹೇಳಿದಾಗಲೇ ಗೊತ್ತಾಗಿದ್ದು ಎಂದು ಉತ್ತರಿಸಿದ್ದಾರೆ. ಯುವತಿಗೆ ನ್ಯಾಯ ಕೊಡಿಸಲು ಅಷ್ಟೆ ನಾನು ಮುಂದಾಗಿದ್ದೆ. ಕಾಮನ್ ಫ್ರೆಂಡ್ ಒಬ್ಬರ ಮೂಲಕ ಯುವತಿ ಪರಿಚಯ ಅಗಿದ್ದರು. ಅದಕ್ಕೆ ತಾನೊಬ್ಬ ಪತ್ರಕರ್ತನಾಗಿ ಸಹಾಯ ಮಾಡಲು ಮುಂದಾಗಿದ್ದೆ. ಅದ್ರೆ ಆ ನಡುವೆ ದೊಡ್ಡವರ ಇದರಲ್ಲಿ ಭಾಗಿಯಾಗಿರೋದು ಗೊತ್ತಾಯಿತು.

ಇದನ್ನೂ ಓದಿ: ಯಾರಾದರು ಸತ್ತಾಗ RIP ಎಂದು ಬರೆಯುವುದು ಹಿಂದೂ ವಿರೋಧಿಯೇ? ವೈರಲ್ ಪೋಸ್ಟ್ ಅಸಲಿಯತ್ತೇನು?

ದಿನೇಶ್ ಕಲ್ಲಹಳ್ಳಿಗೆ ಸಿಡಿಯನ್ನು ನಾನು ಕೊಟ್ಟಿಲ್ಲ, ಯಾರು ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮ ಮೇಲೆ ಸುಮ್ಮನೆ ಅರೋಪ ಮಾಡಲಾಗಿತ್ತು, ಅದಕ್ಕೆ ನಾವು ಊರು ಬಿಟ್ಟಿದ್ದೆವೆ ಎಂದು ನರೇಶ್ ಉತ್ತರಿಸಿದ್ದಾರೆ. ತೀವ್ರ ವಿಚಾರಣೆ ನಡೆಯುತ್ತಿದ್ದು ಮಹತ್ವದ ಸತ್ಯ ಹೊರ ಬೀಳುವ ನಿರೀಕ್ಷೆ ಇದೆ. ಇನ್ನು ಮತ್ತೊಬ್ಬ ಆರೋಪಿ ಶ್ರವಣ್​​ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳು ಕೋರ್ಟ್​​ನಿಂದ ಜಾಮೀನು ಪಡೆದುಕೊಂಡಿದ್ದರು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 16, 2021, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories