ಬಂಕ್​​ಗಳ ಮೇಲೆ ಅಧಿಕಾರಿಗಳ ದಾಳಿ.. ಕಡಿಮೆ ಪೆಟ್ರೋಲ್ ಹಾಕ್ತಿದ್ದ 20 ಬಂಕ್​​ಗಳ ಮೇಲೆ ಕೇಸ್ ದಾಖಲು

ಒಂದೇ ದಿನ ರಾಜ್ಯದಲ್ಲಿ 222 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಕೆಲವು ಪೆಟ್ರೋಲ್ ಬಂಕ್ ಮಾಲೀಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗಿದೆ. ಬೆಂಗಳೂರು ನಗರ, ಜಿಲ್ಲೆಯಲ್ಲಿ 194  ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಗಳ ಮೇಲೆ ದಾಳಿ ನಡೆಸಲಾಗಿದೆ.

ಪೆಟ್ರೋಲ್​ ಬಂಕ್​ಗಳ ಮೇಲೆ ದಾಳಿ

ಪೆಟ್ರೋಲ್​ ಬಂಕ್​ಗಳ ಮೇಲೆ ದಾಳಿ

  • Share this:
ಬೆಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಸರಿಯಾಗಿ ಪೆಟ್ರೋಲೇ ಹಾಕಲ್ಲ ಕಡಿಮೆ ಹಾಕ್ತಾರೆ ಅನ್ನೋದು ಗಾಡಿ ಮಾಲೀಕರ ಅನುಮಾನ. ಇದು ನಿಜ ಕೂಡಾ. ಇದೀಗ ಇಂತಹ ಬಂಕ್ ಮಾಲೀಕರಿಗೆ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.   ಬೆಂಗಳೂರಿನಲ್ಲಿ ಸುಮಾರು ಒಂದು ಸಾವಿರ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಗಳಿದ್ದು, 200 ಕ್ಕೂ ಹೆಚ್ಚು ಕಡೆ ತಪಾಸಣೆ ನಡೆಸಿದ್ದು, ಪೆಟ್ರೋಲ್ ಹಾಗೂ ಡೀಸಲ್ ವಿತರಣೆ ಮಾಡುವುತ್ತಿರುವುದರಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ 20  ಬಂಕ್ ಗಳ ವಿರುದ್ಧ ಕೇಸು ದಾಖಲಿಸಲಾಗಿದೆ.

ಅದರಲ್ಲಿ ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ಪೆಟ್ರೋಲ್ ಬಂಕ್ ಗಳು ಇಂಧನ ವಿತರಣೆಯಲ್ಲಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದು ಪ್ರಕರಣ ದಾಖಲಿಸಲಾಗಿದೆ. ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ದಾಖಲಿಸಿದ ಪ್ರಕರಣಗಳನ್ನು ಇಲಾಖೆಯ ನಿಯಂತ್ರಕರು ವಿಚಾರಣೆ ನಡೆಸಿ ಆದೇಶ ಹೊರಡಿಸಲಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಇತಿಹಾಸದಲ್ಲಿ ಏಕ ಕಾಲಕ್ಕೆ 1089 ಕಡೆ ದಾಳಿ ನಡೆಸಿರುವುದು ಇದೇ ಮೊದಲು. ಮಾತ್ರವಲ್ಲ ಒಂದೇ ದಿನ ರಾಜ್ಯದಲ್ಲಿ 222 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಕೆಲವು ಪೆಟ್ರೋಲ್ ಬಂಕ್ ಮಾಲೀಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗಿದೆ.

ಬೆಂಗಳೂರು ನಗರ, ಜಿಲ್ಲೆಯಲ್ಲಿ 194  ಪೆಟ್ರೋಲ್ ಹಾಗೂ ಡೀಸಲ್ ಬಂಕ್ ಗಳ ಮೇಲೆ ದಾಳಿ ನಡೆಸಲಾಗಿದೆ. ಸಹಾಯಕ ನಿಯಂತ್ರಕ ತನಿಖಾ ದಳಗಳು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಕೇಸು ದಾಖಲಿಸಿದ್ದು ಅದರಲ್ಲಿ ಹತ್ತು ಪೆಟ್ರೋಲ್ ಬಂಕ್ ಗಳಲ್ಲಿ ಡೀಸಲ್ ಕದಿಯುತ್ತಿದ್ದ ಬಂಕ್ ಗಳ ವಿರುದ್ಧ ಕೇಸು ದಾಖಲಿಸಲಾಗಿದೆ.  ಬೆಂಗಳೂರು ವಿಭಾಗದಲ್ಲಿ 139 ಕಡೆ ದಾಳಿ ಮಾಡಿದ್ದು, 48 ಕೇಸು ದಾಖಲಿಸಿದ್ದು, ಹತ್ತಕ್ಕೂ ಹೆಚ್ಚು ಬಂಕ್ ಗಳಲ್ಲಿ ಇಂಧನ ಕದಿಯುತ್ತಿದ್ದ ಆರೋಪ ಸಂಬಂಧ ಕೇಸು ದಾಖಲಿಸಲಾಗಿದೆ. ಒಟ್ಟಾರೆ, ಬೆಂಗಳೂರು ನಗರದಲ್ಲಿ17.500  ರೂ . ದಂಡವನ್ನು ವಸೂಲಿ ಮಾಡಿದ್ದಾರೆ. ಬೆಂಗಳೂರು ವಿಭಾಗದಲ್ಲಿ 50 ಪ್ರಕರಣ ದಾಖಲಿಸಿ 57 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಆದರೆ, ಪೆಟ್ರೋಲ್ ಬಂಕ್ ಮುಲಾಜಿಗೆ ಒಗಾಗಿರುವ ಕಾನೂನು ಮಾಪನ ಶಾಸ್ತ್ರದ ಇಲಾಖೆ ಅಧಿಕಾರಿಗಳು ವಂಚಕ ಪೆಟ್ರೋಲ್ ಬಂಕ್ ಗಳ ವಿವರ ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಬಂಕ್ ಮಾಲೀಕರ ಜತೆ ಶಾಮೀಲಾಗಿರುವ ಆರೋಪಗಳಿಗೆ ಈ ಬೆಳವಣಿಗೆ ಪುಷ್ಠಿ ನೀಡಿದಂತಿದೆ.

ಇದನ್ನೂ ಓದಿ: ಪ್ರೀತಿಸಿದ ಯುವತಿಯ ಜೊತೆಗಿದ್ದ ಖಾಸಗಿ ದೃಶ್ಯ ಸೆರೆ ಹಿಡಿದು ಬೆದರಿಕೆ; ಯುವಕ ಆತ್ಮಹತ್ಯೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೀಟರ್ ಇಂಧನ ಖರೀದಿಸಿದ ಗ್ರಾಹಕನಿಂದ ಐದು ಎಂಎಲ್ ಕದಿಯುವ ಜಾಲಕ್ಕೆ ಅಧಿಕಾರಿಗಳೇ ಅವಕಾಶ ನೀಡಿರುವ ಅರೋಪವಿದೆ.  ಮೊದಲಿನಿಂದಲೂ ಲೀಟರ್ ಗೆ ಐದು ಎಂಎಲ್ ಇಂಧನ ಕದಿಯುವ ಬಂಕ್ ನ ಅಕ್ರಮ ಜಾಲಕ್ಕೆ ಅಧಿಕಾರಿಗಳೇ ಸಾತ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪರ್ಮಿಸಬಲ್ ಲಿಮಿಟ್ ಎನ್ನುವ ಕಾರಣ ನೀಡಿ ಐದು ಲೀಟರ್ ಇಂಧನ ಮಾರಿದಾಗ 25 ಎಂ.ಎಲ್ ಕಡಿಮೆಯಾದರೂ ಕೇಸು ದಾಖಲಿಸದಂತೆ ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳು ಅನಧಿಕೃತ ನಿಯಮ ಪಾಲಿಸುತ್ತಿದ್ದರು. ಇದಕ್ಕಾಗಿ ಪೆಟ್ರೋಲ್ ಬಂಕ್ ಮಾಲೀಕರು ಈ ಅಧಿಕಾರಿಗಳನ್ನು ತಪಾಸಣೆ ಹೆಸರಿನಲ್ಲಿ ಹೋದಾಗ ಕ್ಷೇಮವಾಗಿ ನೋಡಿಕೊಂಡು ವಾಪಸು ಕಳುಹಿಸುತ್ತಿದ್ದರು. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬಂಕ್ ಗಳ ಅಕ್ರಮಗಳು ಬಯಲಿಗೂ ಬರುತ್ತಿರಲಿಲ್ಲ.

ಇತ್ತೀಚೆಗೆ ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಚಿಪ್ ಅಳವಡಿಸಿ ಕದಿಯುವ ದಂಧೆ ಬಗ್ಗೆ ಬೆಂಗಳೂರು ಸಿಸಿಬಿ  ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು. ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳಿಂದ ತಾಂತ್ರಿಕ ನೆರವು ಬಯಸಿದ್ದು ಗೊತ್ತಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳೇ ಸಿಸಿಬಿ ಪೊಲೀಸರ ಕಾರ್ಯಾಚರಣೆ ವಿಚಾರವನ್ನು ಪೆಟ್ರೋಲ್ ಬಂಕ್ ಮಾಲೀಕರಿಗೆ ಲೀಕ್ ಮಾಡಿದ್ದರು. ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ವಿಫಲ ಮಾಡಿದ್ದರು.

ಪೆಟ್ರೋಲ್ ಬಂಕ್ ಚೀಟಿಂಗ್ ಬಯಲಿಗೆ ಎಳೆಯೋದು ಹೇಗೆ...? ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಕದಿಯುವ ಬಗ್ಗೆ ಸಾರ್ವಜನಿಕರಿಗೆ ಸಂಶಯ ಮೂಡಿದರೆ ಅಲ್ಲಿಯೇ ತಪಾಸಣೆ ಮಾಡಲು ಸಾರ್ವಜನಿಕರಿಗೂ ಅಧಿಕಾರವಿದೆ. ಯಾವುದೇ ಪಟ್ರೋಲ್ ಬಂಕ್ ನ ಇಂಧನ ಪೂರೈಕೆ ಬಗ್ಗೆ ಸಂಶಯ ಮೂಡಿದರೆ ಸಾರ್ವಜನಿಕರು ಬಯಸಿದರೆ ಐದು ಲೀಟರ್ ಅಳತೆಯ ಕ್ಯಾನ್ ಗೆ ಇಂಧನ ತುಂಬಬೇಕು. ಅಲ್ಲಿ ಐದು ಲೀಟರ್ ಗೆ ಸರಿಯಾಗಿ ಮಾರ್ಕ್ ಮಾಡಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಪ್ರಮಾಣೀಕರಿಸಿರುತ್ತಾರೆ. ಅ ಗುರುತಿಗೆ ಸರಿಯಾಗಿ ಇಂಧನ ತುಂಬಿದರೆ ಸರಿಯಾಗಿದೆ ಎಂದರ್ಥ, ಆದರೆ, ಹೆಚ್ಚು ಬಂದರೂ, ಕಡಿಮೆ ಬಂದರೂ ಪೆಟ್ರೋಲ್ ಬಂಕ್ ನಲ್ಲಿ ಅಕ್ರಮ ನಡೆಯುತ್ತಿದೆ ಎಂದೇ ಪರಿಗಣಿಸಬೇಕು. ಕೂಡಲೇ ಕಾನೂನು ಮಾಪನ ಶಾಸ್ತ್ರದ ಅಧಿಕಾರಿ ಗಮನಕ್ಕೆ ತಂದರೆ ಅವರು ಬಂದು ತಪಾಸಣೆ ನಡೆಸಿ ಕೇಸು ದಾಖಲಿಸಬೇಕು. ಆದರೆ ಇವತ್ತಿನ ಬೆಂಗಳೂರು ಒತ್ತಡದ ಬದುಕಿನಲ್ಲಿ ಸಾರ್ವಜನಿಕರು  ತಾಳ್ಮೆಯಿಂದ ಇಂಧನ ತಪಾಸಣೆ ನಡಸುವ ಗೋಜಿಗೆ ಹೋಗುವುದಿಲ್ಲ.

ಇನ್ನು ಡಿಜಿಟಲ್ ಬೋರ್ಡ್ ನಲ್ಲಿ ತಂತ್ರಜ್ಞಾನ ಅಳವಡಿಸುವ ಮೂಲಕ ಸಹ ಮೋಸ ಮಾಡಲು ಅವಕಾಶವಿದ್ದು, ಯಾರಾದರೂ ತಗಾದೆ ತೆಗೆದ ಕೂಡಲೇ  ಕ್ಷಣಾರ್ಧದಲ್ಲಿ ಅದನ್ನು ಸರಿಪಡಿಸುತ್ತಾರೆ. ಇಷ್ಟ ಬಂದವರಿಗೆ ಮೋಸ ಮಾಡುತ್ತಾರೆ. ತಾಂತ್ರಿಕವಾಗಿ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳೇ ಸತ್ಯಾಪಣೆ ಮಾಡಿದಾಗ ಮಾತ್ರ ಅಕ್ರಮಗಳನ್ನು ಬಯಲಿಗೆ ಎಳೆಯಲು ಸಾಧ್ಯ. ಆದರೆ, ರಾಜ್ಯ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಕೆಲ ಭ್ರಷ್ಟಾಚಾರದಿಂದ ಅಡ್ಜೆಸ್ಟ್ ಮೆಂಟ್ ವ್ಯವಹಾರವೇ ಮುಂದುವರೆದುಕೊಂಡು ಸಾಗಿದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬಂದಿದೆ.
Published by:Kavya V
First published: