ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ, ನವೆಂಬರ್ 27ಕ್ಕೆ ವಿಧಾನಸಭೆ ಚುನಾವಣೆನಾ?: DK Shivakumar ಹೇಳಿದ್ದೇನು?

ಬೆಂಗಳೂರಿಗೆ (Bengaluru) ಬಂದು ಇಲ್ಲಿಂದ ತುಮಕೂರಿ(Tumakuru)ಗೆ ತೆರಳಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(Sri Shivakumara Swamiji)ಗಳ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ನಂತರ  ಬಿಬಿಎಂಪಿ ವ್ಯಾಪ್ತಿಯ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ

ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್

ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್

  • Share this:
ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯ್ತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮಾರ್ಚ್ 31ರಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ (Former AICC President Rahul Gandhi) ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ (Bengaluru) ಬಂದು ಇಲ್ಲಿಂದ ತುಮಕೂರಿ(Tumakuru)ಗೆ ತೆರಳಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(Sri Shivakumara Swamiji)ಗಳ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ನಂತರ  ಬಿಬಿಎಂಪಿ ವ್ಯಾಪ್ತಿಯ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮರುದಿನ ಏಪ್ರಿಲ್ 1ರಂದು ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಸುತ್ತಾರೆ. ನಂತರ ಅತಿ ಹೆಚ್ಚು ಸಂಖ್ಯೆಯ ಸದಸ್ಯತ್ವ ಮಾಡಿಸಿದ ಪ್ರಮುಖರೊಂದಿಗೆ ಜೂಂ ಮೀಟಿಂಗ್ ನಲ್ಲಿ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

ಏಪ್ರಿಲ್ 1ರಂದು  ಸಂಜೆ ಎನ್ ಎಸ್ ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳದ ಪ್ರಮುಖರೊಂದಿಗೆ ಸಭೆ ಇದೆ. ಅದರ ಮಧ್ಯೆ ಕೆಲವು ಹಿರಿಯರ ಭೇಟಿ ಮಾಡುವ ಕಾರ್ಯಕ್ರಮವಿದೆ. ರಾಹುಲ್ ಗಾಂಧಿಯವರಿಗೆ ಸಾವಿರಾರು ಮಠಗಳ ಜತೆ ಸಂಬಂಧ ಸಂಪರ್ಕವಿದೆ. ಗಾಂಧಿ ಕುಟುಂಬದವರ ಮಠಗಳ ಸಂಬಂಧ ಭಕ್ತ ದೇವರ ನಡುವಿನ ಸಂಬಂಧ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಶೃಂಗೇರಿ‌ಮಠದ ಅನನ್ಯ ಭಕ್ತರು. ಸೋನಿಯಾ ಗಾಂಧಿಯವರು ಸಿದ್ದಗಂಗಾ ಮಠದ ಭಕ್ತರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:  Tumakuru: 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಶಂಕರಪ್ಪ ಆತ್ಮಹತ್ಯೆ

ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧ

ಇದೇ  ವೇಳೆ ಅವಧಿ ಪೂರ್ವ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಯಾವಾಗಲಾದರೂ ಚುನಾವಣೆ ಮಾಡಲಿ. ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಿದ್ದವಾಗಿದೆ. ನವೆಂಬರ್ 27 ಕ್ಕೆ ಆದರೂ ಮಾಡಲಿ, ಎಪ್ರಿಲ್‌ ನಲ್ಲಿ ಆದರೂ ಮಾಡಲಿ, ಜೂನ್ ನಲ್ಲಿ ಆದರೂ ಮಾಡಲಿ. ಯಾವಾಗ ಮಾಡಿದ್ರೂ ನಾವು ಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ ಎಂದರು.

ಯಾವುದೇ ಧರ್ಮದ ವ್ಯಾಪಾರಿಗಳಿಗೆ ಅಡಚಣೆ ಮಾಡಬಾರದು. ನವೆಂಬರ್ 27 ಕ್ಕೆ ಚುನಾವಣೆ ಮಾಡಬೇಕು ಅಂದ್ರೆ ಮಾಡಲಿ. ಚುನಾವಣೆ ಯಾವಾಗ ಬಂದರೂ ಕಾಂಗ್ರೆಸ್ ಸಿದ್ಧ. ಅದೇನು ನವೆಂಬರ್ 27 ಅಂತಾ ವಿಶೇಷವಾಗಿ ಡೇಟ್ ಹೇಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್. ನಿಮ್ಮ ರೀತಿಯಲ್ಲೇ ನಮಗೂ ಒಂದಿಷ್ಟು ಮಾಹಿತಿ ಬರುತ್ತೆ ಎಂದರು.

ಟಿಪ್ಪು ಇತಿಹಾಸ ತಿರುಚಲು ಸಾಧ್ಯ ಇಲ್ಲ

ಟಿಪ್ಪು ಇತಿಹಾಸ ತಿರುಚಲು ಯಾರಿಂದಲು ಸಾಧ್ಯವಿಲ್ಲ. ಹೊಸದಾಗಿ ಏನು ಸೇರಿಸಲಿಕ್ಕೂ ಆಗಲ್ಲ. ಇತಿಹಾಸದಲ್ಲಿ ಇರುವುದನ್ನು ತೆಗೆಯಲಿಕ್ಕೂ ಆಗಲ್ಲ. ಟಿಪ್ಪುವಿಗೆ ಮೈಸೂರು ಹುಲಿ ಅಂತಾ ಬಿರುದು ಕೊಟ್ಟಿದ್ದು ಕಾಂಗ್ರೆಸ್ ಅಲ್ಲ.  ಬಿಜೆಪಿಯವರು ಬ್ರಿಟಿಷರನ್ನ ಕೇಳಲಿ. ಮೈಸೂರು ಹುಲಿ ಅಂತಾ ಬಿರುದು ಕೊಟ್ಟಿರುವವರು ಬ್ರಿಟೀಷರು. ಲಂಡನ್ ಗೆ ಹೋಗಿ ಅಲ್ಲಿಯ ವಸ್ತುಸಂಗ್ರಹಾಲಯದಲ್ಲಿ ಟಿಪ್ಪು ಬಗ್ಗೆ ತಿಳಿದುಕೊಂಡು ಬರಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದುತ್ವ ಕಾಂಗ್ರೆಸ್ ಗೆ ಹೊಸದಲ್ಲ

ಹಿಂದುತ್ವ ಕಾಂಗ್ರೆಸ್ ಗೆ ಹೊಸದಲ್ಲ. ನಾವೆಲ್ಲಾ ಹಿಂದೂಗಳೇ ತಾನೇ?. ರಾಹುಲ್ ಗಾಂಧಿ ಸಂಸತ್ತಿನಲ್ಲಿ, ಜೈಪುರ ಸಮಾವೇಶದಲ್ಲಿ ಇದನ್ನೇ ತಾನೇ ಹೇಳಿದ್ದು‌? ಆದರೆ, ಧರ್ಮ ಜಾತಿಯ ಆಧಾರದ ಮೇಲೆ ಸಮಾಜವನ್ನು ಒಡೆಯುವುದು ಸರಿಯಲ್ಲ. ಇದನ್ನು ಜನ ನೋಡುತ್ತಿದ್ದಾರೆ.

ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ

ಈಶ್ವರಪ್ಪ ಮೇಲಿನ ಕಮೀಷನ್ ರಾಜಕೀಯದ ವಿಷಯ ಪೂರ್ವಯೋಜಿತ ಸಂಚು ಅಂತಾ ಹೇಳಿದ್ದು ನೋಡಿದ್ರೆ ಆಶ್ಚರ್ಯವಾಗುತ್ತೆ. ನನ್ನ ವಿರುದ್ದ ಯಾರಾದ್ರೂ ದೂರು ಕೊಟ್ಟಿದ್ರಾ? ಯಾವುದಾದ್ರೂ ತನಿಖಾ ಸಮಿತಿ‌ ಮಾಡಿ ವರದಿ ತೆಗೆದುಕೊಂಡಿದ್ರಾ? ಹಾಗಾದ್ರೆ ನನ್ನ ಮೇಲೆ ಯಾಕೆ ದಾಳಿ ಮಾಡಿ ಜೈಲಿಗೆ ಕಳುಹಿಸಿದ್ರು ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Bengaluru To Mysuru: ಅಕ್ಟೋಬರ್ ‌ನಿಂದ ಕೇವಲ 75 ನಿಮಿಷಗಳಲ್ಲಿ ಬೆಂಗಳೂರಿಂದ ಮೈಸೂರಿಗೆ ತಲುಪಬಹುದು..!

ಮೇಲಾಗಿ ಕಮೀಷನ್ ರಾಜಕೀಯದ ಬಗ್ಗೆ ನಾವು ಹೇಳಿದ್ದಲ್ಲವಲ್ಲ ಯತ್ನಾಳ್, ವಿಶ್ವನಾಥ್ ತಾನೇ ಮೊದಲು ಆರೋಪ ‌ಮಾಡಿದ್ದು. ಅವರಿಗೆ ಹಾಗಾದ್ರೆ ಬುದ್ದಿ ಇಲ್ವಾ ಎಂದರು.
Published by:Mahmadrafik K
First published: