ಬೆಂಗಳೂರು (ಮೇ 6): ಮನೆಯಲ್ಲಿ (Home) ಕಿರಿಕಿರಿ ಮಾಡ್ತಾಳೆ ಎಂದು ಹೆಣ್ಣು ಕೊಟ್ಟ ಅತ್ತೆಯನ್ನು ಅಳಿಯ ಕೊಲೆ ಮಾಡಿರೋ ಘಟನೆ ಗೋವಿಂದರಾಜ ನಗರದ (GovindRaja nagar) SVG ಲೇಜೌಟ್ನಲ್ಲಿ ನಡೆದಿದೆ. 52 ವರ್ಷದ ನಂಜಮ್ಮ (Nanjamma) ಕೊಲೆಯಾದ ದುರ್ದೈವಿ, ಅಳಿಯ ರಾಘವೇಂದ್ರ (Raghavendra) ನಿತ್ಯ ಮನೆಗೆ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಹಾಗೇ ರಾತ್ರಿ ಕೂಡ ಕುಡಿದು ಬಂದು ಜಗಳ ತೆಗೆದಿದ್ದಾನೆ. ಕುಡಿದು ಮನೆಗೆ ಬಂದ ರಾಘವೇಂದ್ರನಿಗೆ ಹೆಂಡತಿ ಬಾಗಿಲು ತೆಗೆದಿಲ್ಲ. ಇದ್ರಿಂದ ಸಿಟ್ಟಾದ ರಾಘವೇಂದ್ರ ಅತ್ತೆ ಜೊತೆ ಜಗಳ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದೆ. ಕುಡಿದ (Drunk) ಅಮಲಿನಲ್ಲಿ ಅತ್ತೆ ನಂಜಮ್ಮನನ್ನು ಕೊಲೆಗೈದಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ನಂಜಮ್ಮ ಅಳಿಯ ರಾಘವೇಂದ್ರನಿಗೆ ಗ್ಯಾರೇಜ್ ತೆರೆಯಲು 1 ಲಕ್ಷ ಹಣವನ್ನು ನೀಡಿದ್ದಳು. ರಾತ್ರಿ ನಡೆದ ಜಗಳಕ್ಕೆ ನಂಜಮ್ಮ ಬಲಿಯಾಗಿದ್ದು, ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಮಗನಾದ ಶಶಿಧರ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ವನಿತಾ ಕುಟುಂಬಸ್ಥರಿಗೆ ನಂಬಿಸಿ ಮದುವೆ ಮಾಡಿಕೊಂಡರು. ಆದರೆ, ಮದುವೆಯಾದ ದಿನದಿಂದ ಒಂದು ದಿನವೂ ಆತ ಕೆಲಸಕ್ಕೆ ಹೋಗಿರಲಿಲ್ಲ.
ಗರ್ಭಿಣಿಯ ಪತ್ನಿ ಕತ್ತು ಹಿಸುಕಿ ಕೊಲೆ; ಆರೋಪಿ ಬಂಧನ
ನೆಲಮಂಗಲ: ಮೂರು ತಿಂಗಳ ಗರ್ಭಿಣಿಯ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿಯೊಬ್ಬ ನಂತರ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬೆಂಗಳೂರಿನ ನೆಲಮಂಗಲ ತಾಲೂಕಿನ ದಾಬಸ್ಪೇಟೆಯ ಅನ್ನಪೂರ್ಣೆಶ್ವರಿ ಬಡಾವಣೆಯಲ್ಲಿ ಘಟನೆ ನಡೆದಿದೆ. ವನಿತಾ (25) ಗಂಡನಿಂದಲೇ ಕೊಲೆಯಾದ ನತದೃಷ್ಟ ಮಹಿಳೆಯಾಗಿದ್ದು, ಪತಿ ಶಶಿಧರ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ತುಮಾಕೂರು ಜಿಲ್ಲೆ ನಂದಿಹಳ್ಳಿಯ ವನಿತಾ ಮತ್ತು ಶಶಿಧರ್ ಒಂದು ವರ್ಷದ ಹಿಂದೆಷ್ಟೇ ಮದುವೆ ಮದುವೆಯಾಗಿದ್ದರು.
ಇದನ್ನೂ ಓದಿ: BMRCL: ಬೈಯಪ್ಪನ ಹಳ್ಳಿಯಿಂದ ವೈಟ್ಫೀಲ್ಡ್ಗೆ ಶೀಘ್ರವೇ ಮೆಟ್ರೋ ಸಂಚಾರ; 99 ಪರ್ಸೆಂಟ್ ಕಾಮಗಾರಿ ಕಂಪ್ಲೀಟ್
ನಂಬಿಸಿ ಮದುವೆಯಾಗಿ ಕೊಲೆಗೈದ
ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾದ ಶಶಿಧರ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ವನಿತಾ ಕುಟುಂಬಸ್ಥರಿಗೆ ನಂಬಿಸಿ ಮದುವೆ ಮಾಡಿಕೊಂಡರು. ಆದರೆ, ಮದುವೆಯಾದ ದಿನದಿಂದ ಒಂದು ದಿನವೂ ಆತ ಕೆಲಸಕ್ಕೆ ಹೋಗಿರಲಿಲ್ಲ. ವಿವಿಧ ಚಟಗಳನ್ನು ಮೈಗೂಡಿಸಿಕೊಂಡಿದ್ದ. ಹೀಗಾಗಿ ಪತಿ-ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ.
ಕತ್ತು ಹಿಸುಕಿ ಕೊಲೆ ಮಾಡಿದ್ದ
ಇದರಿಂದ ವನಿತಾ ತವರು ಮನೆಗೆ ಬಂದಿದ್ದಳು. ಕೆಲವು ದಿನಗಳ ಹಿಂದೆ ಶಶಿಧರ್ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದ್ದಾಗಿ ಹೇಳಿ ಮುಚ್ಚಳಿಕೆ ಬರೆದುಕೊಟ್ಟು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದ. ಸದ್ಯ ವನಿತಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಇದೀಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಆರೋಪಿ ಶಶಿಧರ್, ಈತನ ತಾಯಿ ಅನ್ನಪೂರ್ಣಮ್ಮ, ತಂದೆ ಪುಟ್ಟರುದ್ರಯ್ಯ, ಸಹೋದರಿ ಸೌಮ್ಯ ಆಕೆಯ ಗಂಡ ವಸಂತ್ ಸೇರಿ 5 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Kannadada Kotyadhipatiಯಲ್ಲಿ ಭಾಗವಹಿಸಿದ್ದ ಪ್ರತಿಭಾವಂತ ಯುವಕ ಸೂಸೈಡ್! ಗೃಹಪ್ರವೇಶಕ್ಕೂ ಮುನ್ನವೇ ಸಾವಿಗೆ ಶರಣು
ಲಾರಿ ಹರಿದು 60 ಕುರಿಗಳು ಸಾವು
ತುಮಕೂರು: ಲಾರಿ ಹರಿದ ಪರಿಣಾಮ 60 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು 20 ಕುರಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ನಡೆದಿದೆ. ಅತೀ ವೇಗದಿಂದ ಬಂದ ಲಾರಿಯೊಂದು ಏಕಾಏಕಿ ಕುರಿಗಳ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಕುರಿಗಾಹಿ ಕೂಡ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ರಾಮಯ್ಯನಹಟ್ಟಿ ಗ್ರಾಮದ ಡೊಡ್ಡ ಈರಪ್ಪ ಎಂಬುವರ ಕುರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿವೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ