R Ashok v/s HDK: ಅರುಣ್ ಸಿಂಗ್ ಬಗ್ಗೆ ಮಾತಾಡಿ ಎಚ್​ಡಿಕೆ ತಮ್ಮ ಘನತೆಗೆ ಧಕ್ಕೆ ತಂದುಕೊಳ್ಳುತ್ತಿದ್ದಾರೆ: ಆರ್.ಅಶೋಕ್

r ashok lashes out on hd kumaraswamy: ಕುಮಾರಸ್ವಾಮಿ ಇಂಥ ಹೇಳಿಕೆ ಕೊಡಬಾರದು, ಇಂಥ ಹೇಳಿಕೆ ಕೊಡೋ ಮೂಲಕ ಎಚ್​ಡಿಕೆ ತಮ್ಮ ಘನತೆಗೆ ತಾವೇ ಧಕ್ಕೆ ಮಾಡಿಕೊಂಡಿದ್ದಾರೆ. ಯಾವುದನ್ನು ಮಾತಾಡಬೇಕು, ಯಾವುದನ್ನು ಮಾತಾಡಬಾರದು ಅಂತ ಅರ್ಥ ಮಾಡಿಕೊಳ್ಳಲಿ ಎಂದು ಕಿಡಿಕಾಡಿದರು.

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

  • Share this:
ಬೆಂಗಳೂರು: ಜೆಡಿಎಸ್​ ಮುಳುಗುವ ಹಡಗು ಎಂಬ ಬಿಜೆಪಿ ರಾಜ್ಯ  ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ವಿರುದ್ಧ ಜೆಡಿಎಸ್​ ವರಿಷ್ಠ ಎಚ್​.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು. ಹಣ ವಸೂಲಿಗಾಗಿ ಅರುಣ್​ ಸಿಂಗ್​ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್​. ಅಶೋಕ್​​​ ಅವರು ಮಾಜಿ ಸಿಎಂ ಎಚ್​ಡಿಕೆಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಇಂಥ ಹೇಳಿಕೆ ಕೊಡಬಾರದು, ಇಂಥ ಹೇಳಿಕೆ ಕೊಡೋ ಮೂಲಕ ಎಚ್​ಡಿಕೆ ತಮ್ಮ ಘನತೆಗೆ ತಾವೇ ಧಕ್ಕೆ ಮಾಡಿಕೊಂಡಿದ್ದಾರೆ. ಯಾವುದನ್ನು ಮಾತಾಡಬೇಕು, ಯಾವುದನ್ನು ಮಾತಾಡಬಾರದು ಅಂತ ಅರ್ಥ ಮಾಡಿಕೊಳ್ಳಲಿ ಎಂದು ಕಿಡಿಕಾಡಿದರು.

ಕಾಂಗ್ರೆಸ್​​​ ಅಧಿಕಾರದಲ್ಲಿದ್ದಾಗ ಒಂದು ಬಾರಿ ಧರ್ಮ ಒಡೆಯಲು ಹೋಗಿ ಕೈ ಸುಟ್ಟುಕೊಂಡಿದೆ. ಕೈ ಅಲ್ಲ ಮುಖವನ್ನೇ ಸುಟ್ಟುಕೊಂಡಿದೆ. ವೀರಶೈವ ಲಿಂಗಾಯತ ಧರ್ಮ ವಿಭಜನೆಗೆ ಮುಂದಾದ ಕಾರಣ 70 ಸೀಟಿಗೆ ಬಂತು. ಹೀಗೆ ಮುಂದುವರಿದರೆ 20 ಸೀಟಿಗೆ ಇಳಿಯಲಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ

ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂಬ ಅಮಿತ್ ಶಾ ಹೇಳಿಕೆಯನ್ನು ಸಚಿವ ಆರ್ ಅಶೋಕ್  ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಯಾರಿರ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸೋದು ಸಂಪ್ರದಾಯ. ಬಿ.ಎಸ್​. ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಯಡಿಯೂರಪ್ಪರನ್ನು ಪಕ್ಷ ಯಾವತ್ತೂ ಮರೆಯೋದಿಲ್ಲ. ಯಡಿಯೂರಪ್ಪ ರಾಜ್ಯ ಪ್ರವಾಸವನ್ನು ಪಕ್ಷ ನಿರ್ಧರಿಸುತ್ತೆ. ಯಡಿಯೂರಪ್ಪ ಎಲ್ಲೆಲ್ಲಿ ಪ್ರವಾಸ ಮಾಡಬೇಕು ಅನ್ನೋದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​ ಕುಮಾರ್​​ ಕಟೀಲ್ ನಿರ್ಧರಿಸುತ್ತಾರೆ ಎಂದರು.

ಸೆ.5ರಂದು ರಾಜ್ಯಕ್ಕೆ ಕೇಂದ್ರದ ನಿಯೋಗ

ಇನ್ನು ರಾಜ್ಯದಲ್ಲಿ 2021ನೇ ಸಾಲಿನಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ರಾಜ್ಯಕ್ಕೆ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಲಾಗಿತ್ತು. ಸೆ.5ರಂದು ಕೇಂದ್ರದಿಂದ ಅಧ್ಯಯನ ಮಾಡಲು ನಿಯೋಗ ಬರುತ್ತಿದೆ. ಕೋವಿಡ್ ನಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ಮುದ್ರಾಂಕ ಶುಲ್ಕ ಕಡಿಮೆ ಮಾಡಲು ಸಭೆ ಕರೆದಿದ್ದೆ, ನಲವತ್ತೈದು ಲಕ್ಷದ ವರೆಗಿನ ಪ್ಲಾಟ್ ಗಳಿಗೆ ಐದರಿಂದ ಮೂರು‌ ಪರ್ಸೆಂಟ್ ಕಡಿಮೆ ಮಾಡಲಾಗಿದೆ. ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಭೆ ಮಾಡಲಾಗಿದೆ. ಸರ್ವೆ ಇಲಾಖೆಯಲ್ಲಿ ಸಾಕಷ್ಟು ಫೈಲ್ ಗಳು ಪೆಂಡಿಂಗ್ ಇವೆ. ಈ ವರ್ಷದ ಕೊನೆಗೆ ಆರುನೂರು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆಗ ಆದಷ್ಟು ಶೀಘ್ರವಾಗಿ ಪೆಂಡಿಂಗ್ ಇರುವ ಕೆಲಸ ಮುಗಿಸಲು ಸಾದ್ಯವಾಗುತ್ತದೆ. ಸ್ಟಾಂಪ್ ಡ್ಯೂಟಿ ಇಳಿಕೆ, ಸರ್ವೆ ಇಲಾಖೆ  ಒತ್ತಡ ಕಡಿಮೆ ಮಾಡಲು ಸಿಬ್ಬಂದಿ ನೇಮಕ ಹಾಗೂ ಮಳೆ  ಹಾನಿ ಬಗ್ಗೆ ಸಮೀಕ್ಷೆಗೆ ಕೇಂದ್ರ ತಂಡದ ಆಗಮಿಸಲಿದೆ. ಈ ಮೂರು ವಿಚಾರಗಳ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕುಮಾರಸ್ವಾಮಿ ನೋಡಿ ಕಣ್ಣೊಡೆದ ಯೋಗೇಶ್ವರ್; ಸಿಪಿವೈ ಮಂತ್ರಿ ಆಗ್ತಾರೆ ಅಂದ ಡಿಕೆ ಸುರೇಶ್

ರಸ್ತೆ ಗುಂಡಿಗಳ ಸಮಸ್ಯೆಗೆ ಶೀಘ್ರವೇ ಪರಿಹಾರ

ನ್ಯೂಸ್ 18 ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಬಾರಿ ಮಳೆ ಬಂದಾಗಲೂ ಗುಂಡಿ ಉಂಟಾಗುವುದು ಮಾಮೂಲಿ. ಬೆಂಗಳೂರಿನಲ್ಲಿ ಅತ್ಯಧಿಕ ಮಳೆಯಾಗುತ್ತಿದೆ, ಹೀಗಾಗಿ ರಸ್ತೆಗಳ ಅವ್ಯವಸ್ಥೆಗೆ ಕಾರಣವಾಗಿದೆ. ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆ ಕರೆಯುತ್ತೇನೆ. ಪಾತ್​​​ ಹೋಲ್ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಸ್ತೆ ನೋಡಿದರೆ ಗಾಬರಿಯಾಗುತ್ತದೆ ನಿಜ, ಗಾಬರಿ ಕಡಿಮೆ ಮಾಡುವ ದೃಷ್ಟಿಯಿಂದ ಪಾಲಿಕೆ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: