ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ; ಅಮಿತ್​ ಶಾ ಹೇಳಿಕೆ ಸಮರ್ಥಿಸಿಕೊಂಡ ಆರ್​ ಅಶೋಕ್​​

ಯಡಿಯೂರಪ್ಪ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ನಮ್ಮ ಹಿರಿಯ ನಾಯಕರು ಅವರನ್ನು ಪಕ್ಷ ಯಾವತ್ತಿಗೂ ಮರೆಯುವುದಿಲ್ಲ

ಸಚಿವ ಆರ್​.ಅಶೋಕ್

ಸಚಿವ ಆರ್​.ಅಶೋಕ್

 • Share this:
  ಬೆಂಗಳೂರು (ಸೆ. 3): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ನೇತೃತ್ವದಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆಯನ್ನು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ (amit shah) ತಿಳಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ (BS yediyurappa) ನಾಯಕತ್ವ ತೆರೆಮರೆಗೆ ಸರಿಯಲಿದೆ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್​ ಅಶೋಕ್ (R Ashok​, ಅಮಿತ್​ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯಡಿಯೂರಪ್ಪ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ನಮ್ಮ ಹಿರಿಯ ನಾಯಕರು ಅವರನ್ನು ಪಕ್ಷ ಯಾವತ್ತಿಗೂ ಮರೆಯುವುದಿಲ್ಲ. ಆದರೆ, ಮುಖ್ಯಮಂತ್ರಿ ಯಾರು ಇರುತ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಪಕ್ಷದ ಸಂಪ್ರದಾಯ. ಅದರಂತೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.

  ತಮ್ಮ ಘನತೆಗೆ ತಾವೇ ಚ್ಯುತಿ ತಂದುಕೊಳ್ಳುತ್ತಿದ್ದಾರೆ
  ಇನ್ನು ಇದೇ ವೇಳೆ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ವಿರುದ್ಧ ಎಚ್​ಡಿ ಕುಮಾರಸ್ವಾಮಿ ಟೀಕೆಗೆ ಖಂಡನೆ ವ್ಯಕ್ತಪಡಿಸಿದ ಅವರು, ಎಚ್​ಡಿ ಕುಮಾರಸ್ವಾಮಿ ಇಂತಹ ಲಘು ಹೇಳಿಕೆ ನೀಡುವ ಮೂಲಕ ತಮ್ಮ ಘನತೆಗೆ ತಾವೇ ಧಕ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಯಾವುದನ್ನು ಮಾತನಾಡಬೇಕು. ಯಾವುದನ್ನು ಮಾತನಾಡ ಬಾರದು ಎಂಬ ಬಗ್ಗೆ ತಿಳುವಳಿಕೆ ಇರಬೇಕು ಎಂದರು.

  ರಾಜ್ಯಕ್ಕೆ ಕೇಂದ್ರದ ನಿಯೋಗ
  ರಾಜ್ಯದಲ್ಲಿ ಉಂಟಾಗಿರುವ ಮಳೆ ಹಾನಿ ಕುರಿತು ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ರಾಜ್ಯಕ್ಕೆ ನೆರವು ನೀಡುವಂತೆ ಕೇಂದ್ರವನ್ನು ಕೇಳಲಾಗಿತ್ತು, ಈ ಸಂಬಂಧ ನೆರೆ ಪರಿಶೀಲನೆ ಮಾಡಲು ರಾಜ್ಯಕ್ಕೆ ಕೇಂದ್ರದ ನಿಯೋಗ ತಂಡ ಬರಲಿದೆ. ಐದನೇ ತಾರೀಖು ಕೇಂದ್ರದ ತಂಡ ಬಂಧ ಈ ಕುರಿತು ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಮಾಡಲಿದೆ.

  ಇದನ್ನು ಓದಿ: ಬಸವಧರ್ಮ, ವೀರಶೈವ ಪ್ರತ್ಯೇಕ ಅಲ್ಲ, ಒಟ್ಟಾಗಿ ಹೋರಾಟ: ಎಂಬಿ ಪಾಟೀಲ್ ಒಗ್ಗಟ್ಟು ಮಂತ್ರ

  ಆರು ನೂರು ಸಿಬ್ಬಂದಿ ನೇಮಕ
  ಕೋವಿಡ್ ನಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ಮುದ್ರಾಂಕ ಶುಲ್ಕ ಕಡಿಮೆ ಮಾಡಲು ಸಭೆ ಕರೆದಿದ್ದೆ. ನಲವತ್ತೈದು ಲಕ್ಷದ ವರೆಗಿನ ಪ್ಲಾಟ್ ಗಳಿಗೆ ಐದರಿಂದ ಮೂರು‌ ಪರ್ಸೆಂಟ್ ಕಡಿಮೆ ಮಾಡಲಾಗಿದೆ. ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಭೆ ಮಾಡಲಾಗಿದೆ. ಸರ್ವೆ ಇಲಾಖೆಯಲ್ಲಿ ಸಾಕಷ್ಟು ಕಡತಗಳು ಹಾಗೇ ಉಳಿದಿದೆ. ಸರ್ವೆ ಇಲಾಖೆ ಒತ್ತಡ ಕಡಿಮೆ ಮಾಡಲು ಸಿಬ್ಬಂದಿ ನೇಮಕ ಮಾಡಲಾಗುವುದು. ಈ ವರ್ಷದ ಕೊನೆಗೆ ಆರುನೂರು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆಯಿಂದ ಆದಷ್ಟು ಶೀಘ್ರವಾಗಿ ಬಾಕಿ ಉಳಿದಿರುವ ಕೆಲಸ ಮುಗಿಸಲು ಸಾಧ್ಯವಾಗುತ್ತದೆ.

  ಬೆಂಗಳೂರಿನಲ್ಲಿ ಮತ್ತೆ ಅವ್ಯವಸ್ಥೆ
  ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೆ ಅವ್ಯವಸ್ಥೆ ಕಂಡು ಬಂದಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ, ಪ್ರತಿ ಬಾರಿ ಮಳೆ ಬಂದಾಗಲೂ ಗುಂಡಿ ಉಂಟಾಗುವುದು ಮಾಮೂಲಿ. ಅವುಗಳ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆ ನೋಡಿದರೆ ಗಾಬರಿಯಾಗುತ್ತದೆ ನಿಜ. ಗಾಬರಿ ಕಡಿಮೆ ಮಾಡುವ ದೃಷ್ಟಿಯಿಂದ ಪಾಲಿಕೆ ಅಧಿಕಾರಿಗಳ ಸಭೆ ನಡೆಸುತ್ತೇನೆ. ಈ ಬಗ್ಗೆ ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: