Bengaluru ಮಳೆ ಸಂಬಂಧ CM ಸಭೆ; ಕ್ರಿಕೆಟ್​​ನಲ್ಲಿ ಅಶೋಕ್ ಬ್ಯುಸಿ, ಉಸ್ತುವಾರಿ ಬೇಕೆಂದಿದ್ದ ಸೋಮಣ್ಣ ಕೂಡ ಗೈರು!

ಸಚಿವ ವಿ.ಸೋಮಣ್ಣ ಸಭೆಗೆ ಬರಲಿಲ್ಲ. ಇನ್ನು ಸಚಿವ ಆರ್​.ಅಶೋಕ್​ ಸಭೆಗೆ ಬರದೆ ತಮ್ಮ ಕ್ಷೇತ್ರದ ಹುಡುಗರೊಂದಿಗೆ ಮೈದಾನಲ್ಲಿ ಕ್ರಿಕೆಟ್​​ ಆಡಿದರು. ಸಭೆ ನಡೆಯುತ್ತಿದ್ದ ಸಮಯದಲ್ಲಿ ಮಕ್ಕಳೊಂದಿಗೆ ಅಶೋಕ್ ಕ್ರಿಕೆಟ್​ ಆಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಸಭೆ, ಕ್ರಿಕೆಟ್​ ಆಡಿದ ಆರ್​.ಅಶೋಕ್​

ಸಿಎಂ ಸಭೆ, ಕ್ರಿಕೆಟ್​ ಆಡಿದ ಆರ್​.ಅಶೋಕ್​

  • Share this:
ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರು ಉಸ್ತುವಾರಿ ಸಚಿವ (Minister in charge of Bangaluru ) ಸ್ಥಾನಕ್ಕೆ ಆರ್​.ಅಶೋಕ್​ (R. Ashoka) ಹಾಗೂ ವಿ.ಸೋಮಣ್ಣ(V. Somanna) ಮಧ್ಯೆ ಜಟಾಪಟಿ ನಡೆದಿತ್ತು. ಬೆಂಗಳೂರು ಜವಾಬ್ದಾರಿಗಾಗಿ ಬಹಿರಂಗ ಹೇಳಿಕೆಗಳ ಮೂಲಕ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದರು. ಈಗ ಬೆಂಗಳೂರು ನಗರ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆಸಿದ ಮಹತ್ವದ ಸಭೆಗೆ ಇಬ್ಬರೂ ಸಚಿವರು ಗೈರಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸುರಿದ ವ್ಯಾಪಕ ಮಳೆ (Bengaluru Rain) ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ತುರ್ತು ಸಭೆ ನಡೆಯಿತು. ಸಚಿವ ವಿ.ಸೋಮಣ್ಣ ಸಭೆಗೆ ಬರಲಿಲ್ಲ. ಇನ್ನು ಸಚಿವ ಆರ್​.ಅಶೋಕ್​ ಸಭೆಗೆ ಬರದೆ ತಮ್ಮ ಕ್ಷೇತ್ರದ ಹುಡುಗರೊಂದಿಗೆ ಮೈದಾನಲ್ಲಿ ಕ್ರಿಕೆಟ್​​ ಆಡಿದರು. ಸಭೆ ನಡೆಯುತ್ತಿದ್ದ ಸಮಯದಲ್ಲಿ ಮಕ್ಕಳೊಂದಿಗೆ ಅಶೋಕ್ ಕ್ರಿಕೆಟ್​ ಆಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಲ್ಲಿ ಇನ್ನೂ ಹೆಚ್ಚು ಮಳೆಯಾಗುತ್ತೆ

ಇನ್ನು ಇತ್ತುವಿಪತ್ತು ನಿರ್ವಹಣಾ ಅಧಿಕಾರಿಗಳು, BBMP , BWSSB ಅಧಿಕಾರಿಗಳು ಜೊತೆ ಸಿಎಂ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಸುರಿದ ಮಳೆ‌ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಈ ವರ್ಷ ಮಳೆಗಾಲ ವಿಸ್ತರಣೆ ಆಗಿದೆ. ನಗರದಲ್ಲಿ ಮತ್ತಷ್ಟು ಮಳೆ ಆಗುವ ಸಾಧ್ಯತೆ ಇದೆ. ಅಕ್ಟೋಬರ್, ನವೆಂಬರ್ ಅತಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಯಾವ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿದೆ ಎಂದು ಗುರುತಿಸಿದ್ದೇವೆ. ಹೊರವಲಯದಲ್ಲಿ ಮಳೆ ಹೆಚ್ಚಾಗುತ್ತಿದೆ, ತುರ್ತಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸಚಿವರ ಗೈರಿಗೆ ಸಿಎಂ ಸಮರ್ಥನೆ

ಸಭೆಗೆ ಬೆಂಗಳೂರು ಸಚಿವರಾದ ಆರ್​.ಅಶೋಕ್​ ಹಾಗೂ ವಿ.ಸೋಮಣ್ಣ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬೆಂಗಳೂರಿಗೆ ಬಂದ ತಕ್ಷಣ ನಾನು ಈ ಸಭೆ ಮಾಡಿದೆ. ಇದು ತುರ್ತು ಸಭೆ, ಹಾಗಾಗಿ ಇಂದಿನ ಸಭೆಗೆ ಯಾರು ಬಂದಿಲ್ಲ. ಎಲ್ಲಾರೂ ಸಚಿವರು ಆ್ಯಕ್ಟಿವ್ ಇದ್ದಾರೆ ಎಂದು ಸಮರ್ಥನೆ ನೀಡಿದರು.

ಅಗತ್ಯ ಹಣಕಾಸು ನೆರವು ನೀಡುತ್ತೇವೆ

ನಿನ್ನೆ ಆಗಿರುವ ಸಮಸ್ಯೆಗಳು ಹಾಗೂ ಪ್ರಮುಖ ಕಾರಣದ ಬಗ್ಗೆ ವರದಿ ತೆಗೆದುಕೊಂಡಿದ್ದೇವೆ. ಬೆಂಗಳೂರಿನಲ್ಲಿ ಹಿಂದೆ ಕಟ್ಟಿದ ತಡೆಗೋಡೆ ಕುಸಿತು ಸಮಸ್ಯೆಯಾಗುತ್ತಿದೆ. ತಡೆಗೋಡೆಯಿಂದ ಹಲವಾರು ಅಡಚಣೆಗಳಿಂದ ತೊಂದರೆಯಾಗುತ್ತಿದೆ. ಹಣಕಾಸು ಇಲಾಖೆ ಜೊತೆ ನಾನು ಮಾತಾಡಿದ್ದೇನೆ. ತಿಂಗಳಿಗೆ ಒಮ್ಮೆ ಅಧಿಕಾರಿಗಳು ವರದಿ ನೀಡಬೇಕು. ಏನಾದರೂ ಸಮಸ್ಯೆ ನನ್ನ ಗಮನಕ್ಕೆ ತಂದು ಚರ್ಚೆ ನಡೆಸುವಂತೆ ಸೂಚನೆ ನೀಡುವುದಾಗಿ ಹೇಳಿದರು. ನಗರದಲ್ಲಿ ಪದೇ ಪದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ವರದಿ ನೀಡಲು ಹೇಳಿದ್ದೇನೆ. ಅಲ್ಪಾವಧಿ ಹಾಗೂ ದೀರ್ಘಕಾಲ ಕ್ರಮಕೈಗೊಳ್ಳಲು ವರದಿ ಕೇಳಿದ್ದೇನೆ. ಇದಕ್ಕೆ ಸಂಬಂಧಿಸಿದ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳಿಗೆ ಸಿಎಂ ಕ್ಲಾಸ್​

ಸಭೆಯಲ್ಲಿ ಬಿಬಿಎಂಪಿ ಕಮೀಷನರ್ ಮತ್ತು ಇಂಜಿನಿಯರಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು. ತಡೆಗೋಡೆ ಬಗ್ಗೆ ಸ್ಪಷ್ಟ ಮಾಹಿತಿ ಕೊಡದ ಅಧಿಕಾರಿಗಳು, ಇಂಜಿನಿಯರ್ ಕಡೆ ನೋಡಿದ ಬಿಬಿಎಂಪಿ ಕಮೀಷನರ್. ಇಂಜಿನಿಯರ್ ಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಹೀಗೆ ಆದ್ರೆ ಹ್ಯಾಂಗ್ ರೀ ಇನ್ನೂ ಮುಂದೆ ಇದೇ ರೀತಿ ಆದ್ರೆ ಸಹಿಸುವುದಿಲ್ಲ. ಕೂಡಲೇ ತಡೆಗೋಡೆ ಕಾಮಗಾರಿ ವಿಳಂಭ ಮಾಡದೇ ಪೂರ್ಣಗೊಳಿಸಿ. ಆರ್ಥಿಕ ಸಂಪನ್ಮೂಲಗಳನ್ನ ಹೊದಗಿಸುತ್ತೇವೆ ಎಂದು ಖಡಕ್​ ಆಗಿ ಸೂಚಿಸಿದರು.

ಇದನ್ನೂ ಓದಿ: ಸಿಂದಗಿಯಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲೆಂದ ಸಿಎಂ; ಹಾನಗಲ್ ಅಳಿಯ ಅಂದ್ರೂ ಸಿಎಂಗೆ ಸೋಲಿಸಿದ್ರು - ಡಿಕೆಶಿ ಟಾಂಗ್

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಭಾಗಿಯಾಗಿದ್ದರು.
Published by:Kavya V
First published: