ಬೆಂಗಳೂರು: ಆ.23ರಿಂದ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗುತ್ತಿದ್ದು, ಪಿಯುಸಿ ತರಗತಿಗಳಿಗೆ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದ ಕಾಲೇಜಿನತ್ತ ಮುಖ ಮಾಡಲಿರುವ ವಿದ್ಯಾರ್ಥಿಗಳಿಗಾಗಿ ಪಿಯು ಬೋರ್ಡ್ ಅಧಿಕೃತ ಕಾರ್ಯಸೂಚಿ ಬಿಡುಗಡೆ ಮಾಡಿದೆ. ಪಿಯು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಕಾಲೇಜು ಆಡಳಿತ ಮಂಡಳಿ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.
ಪಿಯುಸಿ ಕೊರೊನಾ ಮಾರ್ಗಸೂಚಿ ಪ್ರಮುಖ ಅಂಶಗಳು
- ಪಾಸಿಟಿವಿಟಿ ಶೇ. 2ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಕಾಲೇಜು ಆರಂಭ
- ವಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿ
- ಸೋಮವಾರ, ಮಂಗಳವಾರ, ಬುಧವಾರ ಕಾಲೇಜಿನ ರೂಮ್ಗಳಲ್ಲಿ ಪಾಠ
- ಭೌತಿಕ ತರಗತಿ ಹಾಜರಾಗದವರಿಗೆ ಅನ್ ಲೈನ್ ತರಗತಿ
- ಆನ್ ಲೈನ್ ತರಗತಿ ಹಾಜರಾದವರಿಗೆ ಉಳಿದ ಮೂರು ದಿನದಲ್ಲಿ ಭೌತಿಕ ತರಗತಿ
- ಗುರುವಾರ, ಶುಕ್ರವಾರ, ಶನಿವಾರ ತರಗತಿಗಳು ನಡೆಯಲಿವೆ
- ಶೇ.50ರ ಅನುಪಾತದಲ್ಲಿ ಭೌತಿಕ ತರಗತಿಗಳು
- ವಾರದಲ್ಲಿ ಪ್ರತ್ಯೇಕ ಎರಡು ಬ್ಯಾಚ್‌ನಲ್ಲಿ ಮೂರು ದಿನ ಭೌತಿಕ ತರಗತಿ
- 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ವಾರಪೂರ್ತಿ ಭೌತಿಕ ತರಗತಿ ನಡೆಸಲು ಅನುಮತಿ
- ವಿಶಾಲವಾದ ಕೊಠಡಿಯಿರುವ ಕಾಲೇಜಿಗೆ ಅನುಮತಿ
- ವಿದ್ಯಾರ್ಥಿಗಳ ಹಾಜರಾತಿ ಸ್ಥಳೀಯ ಪರಿಸ್ಥಿತಿ ಅನುಗುಣವಾಗಿ ಕಡ್ಡಾಯಗೊಳಿಸುವುದು
- ಕಾಲೇಜು ಆವರಣದಲ್ಲಿ ಗುಂಪು ಗೂಡುವಿಕೆ ಇರಬಾರದು
- ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಕಡ್ಡಾಯ
- ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು
- ಭೌತಿಕ ತರಗತಿ ಹಾಜರಾದವರಿಗೆ ಆನ್ ಲೈನ್ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು
- ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಚಟುವಟಿಕೆ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು
- ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು
- ಪ್ರತಿದಿನ ಕಾಲೇಜಿನ ಕೊಠಡಿ, ಕಾರಿಡಾರು ಸ್ಯಾನಿಟೈಸ್ ಮಾಡಬೇಕು
- ಕಾಲೇಜಿನಲ್ಲಿ ಸಂಗ್ರಹಿಸುವ ತ್ಯಾಜ್ಯ ಮೂರು ದಿನದೊಳಗೆ ವಿಲೇವಾರಿ ಮಾಡಬೇಕು
- ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಕೂಡಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.