Hijab ಸಂಘರ್ಷದ ನಡುವೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುರುವಾಯ್ತು ಟೆನ್ಷನ್!
ಹಿಜಾಬ್ ಗೆ ಅನುಮತಿ ನೀಡದ ಹಿನ್ನೆಲೆ ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ. ಇನ್ನು ಕೆಲವರು ತಮಗೆ ಆನ್ ಲೈನ್ ಕ್ಲಾಸ್ (Online Class) ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ (PU Students) ಹೊಸ ಟೆನ್ಷನ್ ಶುರುವಾಗಿದೆ.
Karnataka Hijab Row: ಹಿಜಾಬ್ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಶುಕ್ರವಾರ ಸರ್ಕಾರದ ಪರ ವಕೀಲರು ಸಹ ವಾದ ಮಂಡಿಸಿದ್ದು, ಸೋಮವಾರ ಆದೇಶ ಹೊರ ಬೀಳುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಇತ್ತ ಹೈಕೋರ್ಟ್ (Highcourt) ಮಧ್ಯಂತರದ ಆದೇಶದ ನಡುವೆಯೂ ರಾಜ್ಯದ ಬಹುತೇಕ ಶಾಲಾ ಕಾಲೇಜಿನ ವಿದ್ಯಾರ್ಥಿನಿ(Students)ಯರು ಹಿಜಾಬ್ (Hijab) ಮತ್ತು ಬುರ್ಖಾ (Burqa) ಧರಿಸಿ ಆಗಮಿಸಿ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಹಿಜಾಬ್ ಗೆ ಅನುಮತಿ ನೀಡದ ಹಿನ್ನೆಲೆ ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ. ಇನ್ನು ಕೆಲವರು ತಮಗೆ ಆನ್ ಲೈನ್ ಕ್ಲಾಸ್ (Online Class) ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ (PU Students) ಹೊಸ ಟೆನ್ಷನ್ ಶುರುವಾಗಿದೆ.
ಹಿಜಾಬ್ ಸಂಘರ್ಷದ ನಡುವೆ ರಾಜ್ಯಾದ್ಯಂತ ಪಿಯು ಪ್ರಯೋಗಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಸೋಮವಾರದಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭಗೊಳ್ಳಲಿವೆ. ಈಗ ಹಿಜಾಬ್ ಇಲ್ಲದೇ ಪರೀಕ್ಷೆಗೆ ಹಾಜರಾಗಲ್ಲ ಎಂದು ಹೇಳುತ್ತಿರುವ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ.
ಮಾರ್ಚ್ 25ವರೆಗೆ ಮಾತ್ರ ಅವಕಾಶ
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ಕಾಲೇಜುಗಳು ಮಾರ್ಚ್ 25ರೊಳಗೆ ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ಮುಗಿಸಿಕೊಳ್ಳಬೇಕೆಂಬ ಸೂಚನೆ ನೀಡಲಾಗಿದೆ. ಮಾರ್ಚ್ 25ರ ನಂತ್ರ ಯಾವುದೇ ಅವಕಾಶ ನೀಡಲ್ಲ ಎಂದು ಪಿಯು ಬೋರ್ಡ್ ಹೇಳಿದೆ.
ಹಿಜಾಬ್ (Hijab) ಧರಿಸಿಯೇ ತರಗತಿಗೆ ಪ್ರವೇಶಿಸಲು ಪ್ರಯತ್ನಿಸಿದ್ದ ವಿದ್ಯಾರ್ಥಿನಿಯರ (Students) ವಿರುದ್ಧ ಶುಕ್ರವಾರ ಗರಂ ಆಗಿದ್ದ ಪ್ರಾಂಶುಪಾಲರಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಕೊಲೆ ಬೆದರಿಕೆ ಹಾಕಲಾಗಿದೆ. ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ (Madikeri Gov Junior College) ಪ್ರಾಂಶುಪಾಲ ವಿಜಯ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.
ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿರಿಸಿ ತರಗತಿಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೆ ತರಗತಿಗೆ ಹೋಗಲು ಯತ್ನಿಸಿದ್ದರು. ಈ ವೇಳೆ ಪ್ರಾಂಶುಪಾಲ ವಿಜಯ್ ಅವರು ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿದ್ದರು.
ಹಿಜಾಬ್ ಹಿಂದೆ ಐಸಿಸ್ ಕೈವಾಡ ಅಂದ್ರು ಆರ್ ಅಶೋಕ್
ಪ್ರತಿಭಟನೆ ಮಾಡುತ್ತಿರುವುದು ವಿದ್ಯಾರ್ಥಿನಿಯರ ತಪ್ಪಿನಿಂದ ಅಲ್ಲ. ಪ್ರತಿಭಟನೆಯ ಹಿಂದೆ ಬಹಳಷ್ಟು ಜನ ಇದ್ದಾರೆ. ಹೋರಾಟ ಹಿಂದೆ ವಿದೇಶಿ ಕೈವಾಡ ಷಡ್ಯಂತ್ರ ಇದೆ. ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ. ಇಷ್ಟು ವೇಗವಾಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಇದರ ಹಿಂದೆ ಐಸಿಸ್, ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಅಂತ ಆರ್ ಅಶೋಕ್ ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ (Shiralakoppa, Shivamogga) ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಶಾಲಾ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಶಿರಾಳಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅಮಾನತು ಮಾಡಿ ಆದೇಶ ಪ್ರಕಟಿಸಿದೆ. ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಶಾಲಾ ಆಡಳಿತ ಮಂಡಳಿಯ ನಿರ್ಧಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ