PSI Recruitment ಅಕ್ರಮದ ಬೆನ್ನತ್ತಿದೆ ಸಿಐಡಿ ಸೈಬರ್ ಟೀಂ; 1000 ಮಂದಿಯ ಶಾರ್ಟ್ ಲಿಸ್ಟ್ ರೆಡಿ

ಅಕ್ಟೋಬರ್ 23 ರಂದು ನಡೆದ ಪರೀಕ್ಷೆ ಹಿಂದಿನ ದಿನ ಮತ್ತು ಮರುದಿನ ಹೆಚ್ಚು ಆತ್ಮೀಯ ಸಂಪರ್ಕದ ಲಿಸ್ಟ್  ನನ್ನು ಸಿಐಡಿ ಮಾಡಿದೆ. ಪರೀಕ್ಷೆಯ ಇಪ್ಪತ್ತು ದಿನದ ಅಂತರದಲ್ಲಿ ಅನುಮಾನಿತ ಅಭ್ಯರ್ಥಿಗಳ ಜೊತೆ 1000 ಮಂದಿಗೂ ಹೆಚ್ಚು ಸಂಪರ್ಕದಲ್ಲಿದ್ರು ಎನ್ನಲಾಗಿದೆ‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಸ್ ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ಚುರುಕು‌ಗೊಂಡಿದೆ. ಅನುಮಾನಿತ ಅಭ್ಯರ್ಥಿಗಳ (Suspected Candidates) ಜಾಲದ ಹಿಂದೆ ಬೆನ್ನತ್ತಿ ಸೈಬರ್ ಟೀಂ ಹೊರಟಿದೆ. ಎರಡು ವಿಶೇಷ ತಂಡಗಳಿಂದ ನಡೆಯುತ್ತಿದೆ ಸದ್ದಿಲ್ಲದೆ ಕಾರ್ಯಾಚರಣೆ ನಡೆಯುತ್ತಿದ್ದು, ಅನುಮಾನಿತ ಅಭ್ಯರ್ಥಿಗಳ ಆತ್ಮೀಯ ಸಂಪರ್ಕದಲ್ಲಿದ್ದವರ ಶಾರ್ಟ್ ಲಿಸ್ಟ್ (Shortlist) ಮಾಡಿದೆ. ಹೌದು ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಬಲೆಗೆ ಒಬ್ಬೊಬ್ಬರೇ ಬೀಳ್ತಿದ್ದಾರೆ‌. ಈ ಮಧ್ಯೆ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಲು ಸ್ಪೆಷಲ್ ಸೈಬರ್ ಅಧಿಕಾರಿಗಳದ್ದು (Cyber Officer) ಎರಡು ತಂಡ ರಚಿಸಲಾಗಿದೆ. ಈಗಾಗಲೇ ಸಿಐಡಿ ಸೈಬರ್ ಕ್ರೈಂಟೀಂ ನಿಂದ ಬರೋಬ್ಬರಿ ಒಂದು ಸಾವಿರ ಮಂದಿಯ ಶಾರ್ಟ್ ಲಿಸ್ಟ್ ಸಿದ್ದಪಡಿಸಿದ್ದು, ಎಲ್ಲರ ಸಿಡಿಆರ್ (CDR) ಹಾಕಿ ಮಾಹಿತಿ ಕಲೆ ಹಾಕಲಾಗ್ತಿದೆ.

ಅನುಮಾನಿತ ಅಭ್ಯರ್ಥಿಗಳ ಜೊತೆ 1000 ಮಂದಿ ಸಂಪರ್ಕ

ಅಕ್ಟೋಬರ್ 23 ರಂದು ನಡೆದ ಪರೀಕ್ಷೆ ಹಿಂದಿನ ದಿನ ಮತ್ತು ಮರುದಿನ ಹೆಚ್ಚು ಆತ್ಮೀಯ ಸಂಪರ್ಕದ ಲಿಸ್ಟ್  ನನ್ನು ಸಿಐಡಿ ಮಾಡಿದೆ. ಪರೀಕ್ಷೆಯ ಇಪ್ಪತ್ತು ದಿನದ ಅಂತರದಲ್ಲಿ ಅನುಮಾನಿತ ಅಭ್ಯರ್ಥಿಗಳ ಜೊತೆ 1000 ಮಂದಿಗೂ ಹೆಚ್ಚು ಸಂಪರ್ಕದಲ್ಲಿದ್ರು ಎನ್ನಲಾಗಿದೆ‌. ಬಂಧಿತ ಅಭ್ಯರ್ಥಿ, ನಾಪತ್ತೆಯಾಗಿರೋ ಅಭ್ಯರ್ಥಿ ಹಾಗೂ ಅನುಮಾನಿತ ಅಭ್ಯರ್ಥಿಗಳ ಪೂರ್ತಿ ಹಿಸ್ಟರಿ ಕೆದಕಲಾಗ್ತಿದೆ. ಜೊತೆಗೆ ನಾಪತ್ತೆಯಾದವರ ಮೊಬೈಲ್ ಟವರ್ ಡಂಪ್ ಮಾಡಿ ಕಾರ್ಯಾಚರಣೆ ನಡೆಸಲಾಗ್ತಿದೆ.

ಮೊಬೈಲ್ ಗಳು ಜಪ್ತಿ ಮಾಡಿರೋ ಸಿಐಡಿಗೆ ಶಾಕ್

ಇನ್ನು ಬಂಧಿತ ಎಲ್ಲಾ ಮೊಬೈಲ್ ಗಳು ಜಪ್ತಿ ಮಾಡಿರೋ ಸಿಐಡಿಗೆ ಶಾಕ್ ಆಗಿದೆ. ಯಾಕಂದ್ರೆ ಬಂಧಿತ ಅಭ್ಯರ್ಥಿಗಳು ಮೊಬೈಲ್ ಪೂರ್ತಿ ಪ್ಲಾಶ್ ಮಾಡಿ ಡೇಟಾ ಡಿಲಿಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಂಧಿತ ಅಭ್ಯರ್ಥಿಗಳ ಮೊಬೈಲ್ ರಿಟ್ರೀವ್ ಮಾಡಲು ಎಫ್ ಎಸ್ ಎಲ್ ಗೆ  ಕಳಿಸಲಾಗಿದೆ. ಪ್ರಮುಖುವಾಗಿ ಆರು ತಿಂಗಳ ಅವಧಿಯಲ್ಲಿನ ವಾಟ್ಸ್ ಅಫ್ ಮೆಸೇಜ್, ಟೆಲಿಗ್ರಾಮ್, ಮೆಸೆಡಂಜರ್ ಮತ್ತು ಟೆಕ್ಸ್ಟ್ ಮೆಸೇಜ್ ರಿಟ್ರೀವ್ ಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಯಶವಂತ ಗೌಡ ಹಾಗು ಮಧು ಅರೆಸ್ಟ್​

ಈಗಾಗಲೇ ಬಂಧಿತರ ಸಂಪರ್ಕದಲ್ಲಿದ್ದ ನೂರಕ್ಕೂ ಹೆಚ್ಚು ಮಂದಿಯ ವಿಚಾರಣೆ ಮಾಡಿರೋ ಸಿಐಡಿ , ಕುಟುಂಬಸ್ಥರು ಮತ್ತು ಆತ್ಮೀಯ ಸಂಪರ್ಕದಲ್ಲಿದ್ದ ಜೊತೆಗೆ ಕೆಲ ಕೋಚಿಂಗ್ ಸೆಂಟರ್ ನ ತರಬೇತುದಾರನ್ನೂ ವಿಚಾರಣೆ ಮಾಡಿದೆ. ಈ ಮಧ್ಯೆ ಸಿಐಡಿಯಿಂದ ಮತ್ತಿಬ್ಬರು ಅಭ್ಯರ್ಥಿಗಳನ್ನ ಬಂಧನ ಮಾಡಲಾಗಿದೆ. ಯಶವಂತ ಗೌಡ ಹಾಗು ಮಧು ಎಂಬುವರನ್ನ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗ್ತಿದೆ.

ಪ್ರಕರಣದಲ್ಲಿ ಎ14 ಆಗಿದ್ದ ಮಧು ಆರ್, ಪಿಎಸ್ಐ ನಲ್ಲಿ 12ನೇ ರ್ಯಾಂಕ್ ಪಡೆದಿದ್ದ .ಅದೇ ರೀತಿ ಮತ್ತೊಬ್ಬ ಅಭ್ಯರ್ಥಿ ಯಶವಂತಗೌಡ, 8ನೇ ರ್ಯಾಂಕ್ ಬಂದಿದ್ದ. ಕೇಸ್ ದಾಖಲಾದ ಬಳಿಕ ಇಬ್ಬರೂ ಸಹ ನಾಪತ್ತೆಯಾಗಿದ್ರು. ಇದೀಗ ಇಬ್ಬರು ಅಭ್ಯರ್ಥಿಗಳನ್ನ  ಓಎಂಅರ್ ಶೀಟ್ ತಿದ್ದಿದ ಆರೋಪದಲ್ಲಿ ಬಂಧಿಸಲಾಗಿದೆ.

ಇದನ್ನು ಓದಿ: ಬಿಎಸ್‌ವೈ ಆಯ್ತು, ಈಗ ಡಾ. ಕೆ.ಸುಧಾಕರ್ ಸರದಿ; ಸಿನಿಮಾದಲ್ಲಿ ಬಣ್ಣ ಹಚ್ಚಿದ ಆರೋಗ್ಯ ಸಚಿವ!

ಅಕ್ರಮದಲ್ಲಿ ಅಣ್ಣ-ತಮ್ಮ ಭಾಗಿ

ಇದಲ್ಲದೆ ಅಣ್ಣ ತಮ್ಮ ಇಬ್ಬರು ಅಕ್ರಮದಲ್ಲಿ ಭಾಗಿಯಾಗಿದ್ದು, ಎಫ್ಐಆರ್ ದಾಖಲಾಗಿದೆ. ನಾರಾಯಣ ಸಿ ಎಂ, ಪಿಎಸ್ಐ ನೇಮಕಾತಿಯಲ್ಲಿ 9ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ರೆ, ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5, ಒಟ್ಟು 157.5 ಅಂಕ ಗಳಿಕೆ ಬಂದಿದೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಕಂಡಿದೆ..ಅದೇ ರೀತಿ ನಾರಾಯಣನ ಸಹೋದರ ನಾಗರಾಜ ಸಿ ಎಂ ಮೇಲೂ ಕೇಸ್ ದಾಖಲಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದಿದ್ದ ನಾಗರಾಜ ಸಿ ಎಂ, ಮೊದಲ ಪತ್ರಿಕೆಯಲ್ಲಿ 31, ಎರಡನೇ ಪತ್ರಿಕೆಯಲ್ಲಿ 126, ಒಟ್ಟು-157 ಅಂಕ ಪಡೆದಿದ್ದ. ನಾಗರಾಜನ ಮೇಲೂ ಓಎಂಆರ್ ಶೀಟ್ ತಿದ್ದಿದ ಆರೋಪವಿದ್ದು, ತನಿಖೆ ನಡೆಸಲಾಗ್ತಿದೆ.
Published by:Pavana HS
First published: