PSI Recruitment Scam: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು (Police) 12 ಪರೀಕ್ಷಾರ್ಥಿಗಳನ್ನು ಬಂಧಿಸಿದ್ದಾರೆ. ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 8ನೇ ಎಸಿಎಂಎಂ ನ್ಯಾಯಾಧೀಶರು 12 ಆರೋಪಿಗಳನ್ನು (Accused) ನ್ಯಾಯಾಲಯ 10 ದಿನ ಪೊಲೀಸ್ ಕಸ್ಟಡಿಗೆ (Police Custody) ನೀಡಿದೆ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಇದುವರೆಗೂ 545 ಅಭ್ಯರ್ಥಿಗಳ ಪೈಕಿ 400ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಲ್ಲ 545 ಅಭ್ಯರ್ಥಿಗಳಿಗೆ (Exam Candidates) ಓಎಂಆರ್ ಶೀಟ್ (OMR Sheet) ಜೊತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಕಾರ್ಬನ್ ಶೀಟ್ ಮಿಸ್ಸಾಗಿದೆ, ಆರೋಗ್ಯ ಸರಿಯಿಲ್ಲ ಎಂದು ಕೆಲ ಅಭ್ಯರ್ಥಿಗಳು ಗೈರಾಗಿದ್ದರು.
ವಿಚಾರಣೆಗೆ ಹಾಜರಾದ 400 ಮಂದಿ ಪೈಕಿ 22 ಮಂದಿ ಲಿಸ್ಟ್ ಔಟ್ ಮಾಡಿಕೊಂಡಿದೆ. ಇದೀಗ ಈ 22ರಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ 12 ಅಭ್ಯರ್ಥಿಗಳದ್ದು OMR ಶೀಟ್ ನಲ್ಲಿ ಅಟೆಂಡ್ ಮಾಡಿರೋ ಪ್ರಶ್ನೆಗೂ ಕಾರ್ಬನ್ ಕಾಫಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಬಂಧನಕ್ಕೊಳಗಾಗಿರುವ 12 ಜನರು ಬೆಂಗಳೂರು ಮೂಲದವರಾಗಿದ್ದಾರೆ.
ಅಜ್ಞಾತ ಸ್ಥಳದಲ್ಲಿ ಬಂಧಿತರ ವಿಚಾರಣೆ
ಕಾರ್ಬನ್ ಶೀಟ್ ಮತ್ತು ಮೂಲ ಓಎಮ್ ಆರ್ ಶೀಟ್ ನಲ್ಲಿ ಇಂಕ್, ಟಿಕ್ ಮಾರ್ಕ್ ಹೆಚ್ಚು ವ್ಯತ್ಯಾಸ ಕಂಡು ಬಂದಿದ್ದು, ಉಳಿದ ಅಭ್ಯರ್ಥಿಗಳ ವಿಚಾರಣೆ ಮುಂದುವರಿದಿದೆ. ಸಿಐಡಿ ಅಧಿಕಾರಿಗಳು ನೀಡಿದ ದೂರಿನನ್ವಯ 12 ಮಂದಿಯನ್ನ ಬಂಧಿಸಲಾಗಿದೆ. ಸದ್ಯ ಹೈಗ್ರೌಂಡ್ಸ್ ನಲ್ಲಿ ದಾಖಲಾಗಿದ್ದ ಕೇಸ್ ಇಂದು ಸಿಐಡಿಗೆ ವರ್ಗಾವಣೆ ಸಾಧ್ಯತೆಗಳಿವೆ.
ಬಂಧಿತ 12 ಮಂದಿಯನ್ನ ವಶಕ್ಕೆ ಪಡೆದಿರೋ ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಬಂಧಿತ 12 ಮಂದಿಯ ವಿಚಾರಣೆ ನಡೆಯುತ್ತಿದೆ.
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ
ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ಒಡತಿಯಾಗಿದ್ದು, ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ (Money) ಪಡೆದ ಬಗ್ಗೆ ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಆರ್ ಡಿ ಪಾಟೀಲ್ (RD Patil Gang) ಆಂಡ್ ಮಂಜುನಾಥ್ ಗ್ಯಾಂಗ್ (Manjunath Gang) ನಿಂದ ದೊಡ್ಡ ಮಟ್ಟದ ಹಣ ಸಂದಾಯ ಆಗಿರುವ ವಿಷಯವನ್ನ ಸಹ ಕ್ವೀನ್ ಪಿನ್ ಒಪ್ಪಿಕೊಂಡಿದ್ದಾಳೆ. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಎಂಬಾತನೇ ಆರ್ ಡಿ ಪಾಟೀಲ್ ಆಂಡ್ ಮಂಜುನಾಥ್ ಬಳಿಯಿಂದ ಹಣ ಕೊಡಿಸಿದ್ದ ಎನ್ನಲಾಗಿದೆ. ದಿವ್ಯಾ ಹಾಗರಗಿ , ಆರ್ ಡಿ ಪಾಟೀಲ್ , ಮಂಜುನಾಥ್ ಮಧ್ಯೆ ಮಧ್ಯವರ್ತಿಯಾಗಿ ಕಾಶಿನಾಥ್ ಕೆಲಸ ಮಾಡಿದ್ದನು. ಕಾಶಿನಾಥ್ ಕೂಡ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಬಯಲಾಗ್ತಿದ್ದಂತೆ ಮುಖ್ಯ ಶಿಕ್ಷಕ ಕಾಶಿನಾಥ್ ತೆಲೆಮರೆಸಿಕೊಂಡಿದ್ದಾನೆ.
ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಹೇಗೆ?
ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದುವ ಬಗ್ಗೆ ಕಾಶಿನಾಥ್ ದಿವ್ಯಾಗೆ ಹೇಳಿದ್ದನು. ಕಾಶಿನಾಥ್ ಮುಖ್ಯಾಂತರ ಅಕ್ರಮ ಎಸಗಲು ಇಂಜಿನೀಯರ್ ಮಂಜುನಾಥ್ ಪ್ಲಾನ್ ಮಾಡಿದ್ದನು. ದಿವ್ಯಾ ಹಾಗರಗಿ ಒಡೆತನ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳನ್ನು ಈ ಮಂಜುನಾಥ್ ಸಂಪರ್ಕಿಸಿದ್ದನು.
ತಮ್ಮ ಅಭ್ಯರ್ಥಿಗಳಿಗೆ ಸಹಾಯ ಮಾಡುವಂತೆ ಮಂಜುನಾಥ್ ಕೇಳಿದ್ದನು. ಈ ವಿಷಯವನ್ನು ಕಾಶಿನಾಥ್ ತನ್ನ ಶಾಲೆಯ ಒಡತಿ ದಿವ್ಯಾ ಗಮನಕ್ಕೆ ತಂದಿದ್ದನು. ಇದರ ಜೊತೆಗೆ ಇದೇ ಕಾಶಿನಾಥ್ ಇಡೀ ಪರೀಕ್ಷಾ ಕೇಂದ್ರವನ್ನು ಮೇಲ್ವಿಚಾರಣೆ ಮಾಡುತ್ತಿದ್ದನು. ಹಾಗಾಗಿ ಸರಳವಾಗಿ ತಮಗೆ ಬೇಕಾದ ಅಭ್ಯರ್ಥಿಗಳು ಯಾವ ಕೋಣೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದನು.
ತಮ್ಮ ಅಭ್ಯರ್ಥಿಗಳು ಇರೋ ಕೋಣೆಗೆ ತನಗೆ ಬೇಕಾದ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಿದ್ದನು. ಈ ಮೇಲ್ವಿಚಾರಕರಿಗೆ ಓಎಂಆರ್ ಶೀಟ್ ತಿದ್ದುವ ಬಗ್ಗೆ ಹೇಳಿಕೊಟ್ಟಿದ್ದನು. ಮೊದಲೇ ಮೇಲ್ವಿಚಾರಕರಿಗೆ ಅಭ್ಯರ್ಥಿಗಳ ಓಎಂಆರ್ ಶೀಟ್ ನಂಬರ್ ಸಹ ಹೇಳಿದ್ದನು.