ಆಯುರ್ವೇದದಿಂದ Cancer ಗುಣಪಡಿಸೋದಾಗಿ ನಂಬಿಸಿದ್ರು; ಹೆಂಡತಿ-ಹಣ ಎರಡನ್ನೂ ಕಳೆದುಕೊಂಡ ಗಂಡ!

ಶಿವ ಶಕ್ತಿ ಆಯುರ್ವೇದ ಅಂಗಡಿಯಿಂದ ಯಾದವ್ ಅವರು ಸೂಚಿಸಿದ ಔಷಧಿಗಳನ್ನು ಖರೀದಿಸಿದೆ. ಆದರೆ ಆಯುರ್ವೇದ ಔಷಧಿ ಪಡೆದ ತಿಂಗಳೊಳಗೆ ನನ್ನ ಹೆಂಡತಿಯ ಸ್ಥಿತಿ ಹದಗೆಟ್ಟಿತು. ಕೊನೆಗೆ ಪತ್ನಿ ಕೊನೆಯುಸಿರೆಳೆದಳು ಎಂದು ನೋವು ತೋಡಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಕ್ಯಾನ್ಸರ್​​ಗೆ (Cancer) ತುತ್ತಾಗಿದ್ದ ಪತ್ನಿಯನ್ನು (Wife) ಗುಣಪಡಿಸುವುದಾಗಿ ಹೇಳಿ 4.4 ಲಕ್ಷ ರೂಪಾಯಿ ವಂಚಿಸಿದ್ದಾರೆ (Cheating) ಎಂದು ನಗರದ 46 ವರ್ಷದ ಪ್ರಾಧ್ಯಾಪಕರೊಬ್ಬರು (Professor) ಪೊಲೀಸ್‌ ದೂರು ದಾಖಲಿಸಿದ್ದಾರೆ. ಆಯುರ್ವೇದ ಮೆಡಿಕಲ್‌ ಶಾಪ್‌ ಮಾಲೀಕ (Ayurveda Medical Shop Owner) ಸೇರಿದಂತೆ ಮೂವರ ವಿರುದ್ಧ ಹಲಸೂರು ಗೇಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಸಿದ್ದಾರೆ. ಜೀವನ್ ಭೀಮಾ ನಗರದ ನಿವಾಸಿಯಾಗಿರುವ ದೂರುದಾರರ ಪತ್ನಿ ಈ ವರ್ಷದ ಆಗಸ್ಟ್‌ನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ದೂರುದಾರರ ಪ್ರಕಾರ, ಆಯುರ್ವೇದ ಔಷಧಿಗಳೊಂದಿಗೆ ಚಿಕಿತ್ಸೆ ನೀಡಿದ ನಂತರ ಅವರ ಪತ್ನಿಯ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು. ಆಯುರ್ವೇಧ ಔಷಧಿ ಪಡೆದ ಒಂದು ತಿಂಗಳಲ್ಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ರೋಗಿಯ ಕುಟುಂಬಸ್ಥರಿಗೆ ಬಲೆ ಬೀಸ್ತಾರೆ

ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ನಾನು ದೂರು ದಾಖಲಿಸಲು ವಿಳಂಬ ಆಯಿತು. ಆಯುರ್ವೇದ ಅಂಗಡಿ ಮಾಲೀಕರು ಹಾಗೂ ಇನ್ನಿಬ್ಬರು ನನ್ನ ಪತ್ನಿಯ ಸಾವಿಗೆ ಕಾರಣ. ಕ್ಯಾನ್ಸರ್​ ಗುಣಪಡಿಸುವ ಔಷಧ ನೀಡುವುದಾಗಿ ನನಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಪತ್ನಿ ಕ್ಯಾನ್ಸರ್‌ನಿಂದಾಗಿ ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಭೇಟಿ ನೀಡಿದಾಗ ಸಂತೋಷ್ ಎಂಬಾತ ನನ್ನ  ಬಳಿಗೆ ಬಂದು ನನ್ನ ಹೆಂಡತಿಯ ಬಗ್ಗೆ ವಿಚಾರಿಸಿದನು.

ಇದೇ ಔಷಧಿ ಖರೀದಿಸುವಂತೆ ಮನವೊಲಿಕೆ

ಸಂತೋಷ್ ಸ್ನೇಹಿತ ಶಂಕರ್ ಯಾದವ್ ಎಂಬುವರ ಪತ್ನಿಯೂ ಇದೇ ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಮತ್ತು ಆಯುರ್ವೇದ ಔಷಧಿಗಳಿಂದ ಗುಣಮುಖರಾಗಿದ್ದಾರೆ ಎಂದು ನನಗೆ ಹೇಳಿದರು. ನಾನು ಅವನನ್ನು ನಂಬಿ ನನ್ನ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದೇನೆ. ಕೆಲವು ದಿನಗಳ ನಂತರ, ಶಂಕರ್ ಯಾದವ್ ನನಗೆ ಫೋನ್ ಮೂಲಕ ಕರೆ ಮಾಡಿದರು. ಆಯುರ್ವೇದ ಔಷಧದಿಂದ ನಿಮ್ಮ ಪತ್ನಿ ಗುಣಮುಖಳಾಗುತ್ತಾಳೆ ಎಂದು ಭರವಸೆ ನೀಡಿದರು. ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಶಿವ ಶಕ್ತಿ ಆಯುರ್ವೇದ ಅಂಗಡಿಯಲ್ಲಿ ಔಷಧಿಗಳನ್ನು ಖರೀದಿಸುವಂತೆ ವಿಳಾಸ ನೀಡಿದರು.

ಇದನ್ನೂ ಓದಿ: 1 ವರ್ಷದ ಅವಧಿಯಲ್ಲಿ ತಮ್ಮದೇ ಸಂಸ್ಥೆಯಲ್ಲಿ ಬರೋಬ್ಬರಿ 1,070 Laptops ಕದ್ದ ಮೂವರು IT ಉದ್ಯೋಗಿಗಳು!

ಹಣ ಪಡೆದು ವಂಚಿಸುವ ಜಾಲ

ಅದರಂತೆ, ನಾನು ಆಗಸ್ಟ್ 1 ರಂದು ಶಿವ ಶಕ್ತಿ ಆಯುರ್ವೇದ ಅಂಗಡಿಯಿಂದ ಯಾದವ್ ಅವರು ಸೂಚಿಸಿದ ಔಷಧಿಗಳನ್ನು ಖರೀದಿಸಿದೆ. ಆದರೆ ಆಯುರ್ವೇದ ಔಷಧಿ ಪಡೆದ ತಿಂಗಳೊಳಗೆ ನನ್ನ ಹೆಂಡತಿಯ ಸ್ಥಿತಿ ಹದಗೆಟ್ಟಿತು. ಕೊನೆಗೆ ಪತ್ನಿ ಕೊನೆಯುಸಿರೆಳೆದಳು ಎಂದು ನೋವು ತೋಡಿಕೊಂಡಿದ್ದಾರೆ. ಸಂತೋಷ್, ಯಾದವ್ ಮತ್ತು ಆಯುರ್ವೇದ ಅಂಗಡಿ ಮಾಲೀಕ ಕುಮಾರ್ ಗೌಡ ನನಗೆ ಮೋಸ ಮಾಡಿದ್ದಾರೆ ಎಂದು ಈಗ ನನಗೆ ಅರಿವಾಗಿದೆ. 2.2 ಲಕ್ಷಕ್ಕೂ ಹೆಚ್ಚು ಮೌಲ್ಯದ ಔಷಧಗಳನ್ನು ಖರೀದಿಸಿದ್ದೆ. ಯಾದವ್ ನನ್ನ ಸಹಾಯವನ್ನು ಕೇಳಿದರು ಮತ್ತು ನಾನು ಅವರ ಬ್ಯಾಂಕ್ ಖಾತೆಗೆ 49,900 ರೂಪಾಯಿಗಳನ್ನು ವರ್ಗಾಯಿಸಿದೆ. ಜೊತೆಗೆ ಅವರಿಗೆ Rs1.7 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ನೀಡಿದ್ದೇನೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಅಮಾಯಕರೇ ಟಾರ್ಗೆಟ್​

ಪೊಲೀಸರು ಕುಮಾರ್, ಯಾದವ್, ಸಂತೋಷ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೆಡಿಕಲ್​​ ಶಾಪ್​ ಮಾಲೀಕ ಸೇರಿದಂತೆ ಮೂವರದ್ದು ವಂಚನೆಯ ಗ್ಯಾಂಗ್ ಆಗಿದ್ದು, ಒಟ್ಟಾಗಿ ಸೇರಿ ಅಮಾಯಕರನ್ನು ವಂಚಿಸಿದ್ದಾರೆ.
Published by:Kavya V
First published: