Halal ಮುಕ್ತ ಭಾರತಕ್ಕಾಗಿ ಹಿಂದೂಗಳು ಕೈ ಜೋಡಿಸಬೇಕು: Prashanth Sambargi ಕರೆ

ಧರ್ಮದ ಚಿಹ್ನೆಗಳನ್ನ ಪ್ರಾಡಕ್ಟ್ ಗಳ ಮೇಲೆ ಹಾಕಬಾರದು. ಇದೀಗ ಜನರಿಗೆ ಅರಿವು ಬಂದಿದೆ. ನಮ್ಮ ಹೋರಾಟದಿಂದ ಸರ್ಕಾರಕ್ಕೆ ಅರಿವಾಗಿ ಫುಡ್ ಕಮಿಷನರೊಂದಿಗೆ ಮಾತನಾಡಿದ್ದಾರೆ. ಏಪ್ರಿಲ್ ನಲ್ಲಿ ಫುಡ್ ಕಮಿಷನರ್ ಗೆ ಉಮೇಶ್ ಕತ್ತಿ ಪತ್ರ ಬರೆದಿದ್ದಾರೆ. ಆಹಾರ ಪದಾರ್ಥದ ಮೇಲೆ ಜಾತಿ ಪದ್ಧತಿಯ ಸ್ಟಾಂಪ್ ಇದೆ.

ಪ್ರಶಾಂತ್ ಸಂಬರಗಿ

ಪ್ರಶಾಂತ್ ಸಂಬರಗಿ

  • Share this:
ಜನ ಜಾಗೃತಿ ಸಮಿತಿಯಿಂದ (Jana Jagruti Samiti) ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ ಸಭೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಸನಾತನ ಮುಖಂಡರು ಭಾಗಿಯಾಗಿದ್ದಾರೆ. ಧರ್ಮ ಹಾಗೂ ರಾಷ್ಟ್ರದ ರಕ್ಷಣೆಗಾಗೆ ಸಂಘಟಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿಂದೂ ಮುಖಂಡ ಪ್ರಶಾಂತ್ ಸಂಬರಗಿ (Prashanth Sambargi), ನಮ್ಮಿಂದ ಬಂದ ಕಲೆಕ್ಷನ್ ಹಣ ನಮ್ಮ ವಿರೋಧ ಕೆಲಸಕ್ಕೆ ಹೋಗುತ್ತಿದೆ. ಹಲಾಲ್ (Halal) ಬಗ್ಗೆ ಸುಪ್ರೀಂಕೋರ್ಟ್ (Supreme Court), ಹೈಕೋರ್ಟ್ (High Court), ರಿಟ್ ಪೇಟೇಷನ್ ಹಾಕುತ್ತೇವೆ. ನಮ್ಮ ಯುವಕರಿಗೆ ಉದ್ಯೋಗ (job) ಅವಕಾಶ ಇಲ್ಲ. ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಹೇಳಿದರು.

ಹಿಂದೂ ಜಟ್ಕಾ ಮೀಟ್  ಪರ ನಿರಂತರ ಹೋರಾಟ ನಡೆಯಲಿದೆ. ಇದರಿಂದ ಹಿಂದೂ ಯುವಕರಿಗೆ ಕೆಲಸ ಕೊಡಿಸುವುದು ನಮ್ಮ ಉದ್ದೇಶವಾಗಿದೆ. ಹಲಾಲ್ ಕೇವಲ ಮಾಂಸಕ್ಕೆ ಮಾತ್ರ ಸೀಮಿತ ಅನ್ನುವುದು ನಿಮ್ಮ ತಲೆಯಿಂದ ತೆಗೆದುಬಿಡಿ. ಹಲಾಲ್ ಸರ್ಟಿಫಿಕೇಟ್ ಎಲ್ಲಾ ಆಹಾರ ಪದಾರ್ಥದ ಮೇಲಿರುತ್ತದೆ.

ಜಾತಿ ಪದ್ಧತಿಯ ಸ್ಟಾಂಪ್

ಧರ್ಮದ ಚಿಹ್ನೆಗಳನ್ನ ಪ್ರಾಡಕ್ಟ್ ಗಳ ಮೇಲೆ ಹಾಕಬಾರದು. ಇದೀಗ ಜನರಿಗೆ ಅರಿವು ಬಂದಿದೆ. ನಮ್ಮ ಹೋರಾಟದಿಂದ ಸರ್ಕಾರಕ್ಕೆ ಅರಿವಾಗಿ ಫುಡ್ ಕಮಿಷನರೊಂದಿಗೆ ಮಾತನಾಡಿದ್ದಾರೆ. ಏಪ್ರಿಲ್ ನಲ್ಲಿ ಫುಡ್ ಕಮಿಷನರ್ ಗೆ ಉಮೇಶ್ ಕತ್ತಿ ಪತ್ರ ಬರೆದಿದ್ದಾರೆ. ಆಹಾರ ಪದಾರ್ಥದ ಮೇಲೆ ಜಾತಿ ಪದ್ಧತಿಯ ಸ್ಟಾಂಪ್ ಇದೆ.

ಇದನ್ನೂ ಓದಿ:  PSI Recruitment Scam: ಕಿಂಗ್ ಪಿನ್ RD Patilಗೆ ಶಾಕ್; ಬಂಧಿತ CPI, DySPಗೆ ಕೈದಿ ನಂಬರ್; ಸರ್ಕಾರಕ್ಕೆ ಖರ್ಗೆ ಪಂಚ ಪ್ರಶ್ನೆ

ಆ ಧರ್ಮಕ್ಕೆ ದುಡ್ಡು ಹೋಗ್ತಿದೆ

ಕಾನೂನು ಬಾಹಿರವಾದ ಹಲಾಲ್ ಸರ್ಟಿಫಿಕೇಟ್ ರದ್ದುಗೊಳಿಸಬೇಕೆಂದು ಹೋರಾಟ ಮಾಡಿದ್ದೀವಿ. ಹಲಾಲ್ ಸರ್ಟಿಫಿಕೇಟ್ ಇರುವ ಆಹಾರ ಪದಾರ್ಥವನ್ನ ಅನ್ಯಧರ್ಮದವರು ತೆಗೆದುಕೊಂಡು ಸೇವನೆ ಮಾಡ್ತಾರೆ. ಹಲಾಲ್ ಯಿಂದ ಹಿಂದೂಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಆ ಧರ್ಮಕ್ಕೆ ದುಡ್ಡು ಹೋಗ್ತಿದೆ ಎಂದರು.

ಹುಬ್ಬಳ್ಳಿ ಗಲಾಟೆ ಸೇರಿದಂತೆ ಹಲವು ಕಡೆ ಇವರ ಷಡ್ಯಾಂತ್ರ ಇದೆ. ಮುಂದಿನ ವರ್ಷ ಸರ್ಕಾರವೇ ಹಲಾಲ್ ಬ್ಯಾನ್ ಮಾಡುತ್ತೆ ಎಂದು ನನಗೆ ವಿಶ್ವಾಸ ಇದೆ. ಹಲಾಲ್ ಮುಕ್ತ ಭಾರತ ನಾವೆಲ್ಲರೂ ಕೈ ಜೋಡಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಹಲಾಲ್ ಮುಕ್ತ ಭಾರತ ಮಾಡಬೇಕು. ಇದಕ್ಕೆ ಎಲ್ಲಾ ಹಿಂದೂಗಳು ಒಂದಾಗಬೇಕು. ಇಂದು ನಾವು ಸಂಕಲ್ಪ ಮಾಡಬೇಕಾದ ಅನಿವಾರ್ಯ ಇದೆ ಎಂದು ಪ್ರಶಾಂತ್ ಸಂಬರಗಿ ಕರೆ ಕೊಟ್ಟರು.

Azan Vs Bhajan: ದೇವಾಲಯಗಳಲ್ಲಿ ಧ್ವನಿವರ್ಧಕ ಅಳವಡಿಕೆ

ಲೌಡ್ ಸ್ಪೀಕರ್ ತೆರವು ಸಂಬಂಧ ಸರ್ಕಾರ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆ ಪೂರ್ವ‌ ನಿಗದಿಯಂತೆ ನಾಳೆಯಿಂದ ದೇವಸ್ಥಾನದ ಮೇಲೆ ಲೌಡ್ ಸ್ಪೀಕರ್ ಅಳವಡಿಕೆಗೆ ಶ್ರೀರಾಮಸೇನೆ ಮುಂದಾಗಿದೆ. ನಾಳೆ ಬೆಳಗ್ಗೆ 5 ಗಂಟೆಯಿಂದಲೇ ರಾಜ್ಯದ ದೇವಾಲಯಗಳಲ್ಲಿ ಲೋಡ್ ಸ್ಪೀಕರ್ ಅಳವಡಿಸಿ ರಾಮನಾಮ, ಹನುಮಾನ್ ಚಾಲೀಸ್, ವೇದ ಮಂತ್ರ ಪಠಣಗೆ ತೀರ್ಮಾನಿಸಲಾಗಿದೆ.

ಹಿಂದು ಜನಜಾಗೃತಿ ಸಮಿತಿ ಮೋಹನ್ ಗೌಡ ಮಾತನಾಡಿ, 31 ನವೆಂಬರ್ 2021ರಂದು  ಉಚ್ಛ ನ್ಯಾಯಲಯ ಅನಧಿಕೃತ ಲೌಡ್ ಸ್ಪೀಕರ್ ತೆರವು ಮಾಡಲು ತಿಳಿಸಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಗೃಹ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. 100ಕ್ಕೂ ಹೆಚ್ಚು ಡೆಸಿಬಲ್ ಸ್ಪೀಕರ್ ಬಳಕೆ ಆಗುತ್ತಿದೆ

ಇದನ್ನೂ ಓದಿ:  Gadag: ತವರಿಗೆ ಹೋಗೋ ಭರದಲ್ಲಿ 100 ಗ್ರಾಂ ಚಿನ್ನ ಇಟ್ಟಿದ್ದ ಬ್ಯಾಗನ್ನೇ ಮರೆತ ಶಿಕ್ಷಕಿ! ಆಹಾ, ಅಮ್ಮನ ಮನೆಯ ಪ್ರೀತಿಯೋ!

ಲೌಡ್ ಸ್ಪೀಕರ್ ಮೂಲಭೂತ ಹಕ್ಕಲ್ಲ

ಸಾರ್ವಜನಿಕರಿಗೆ, ವಯಸ್ಕರಿಗೆ , ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಅಲಹಾಬಾದ್ ಕೋರ್ಟ್ ಲೌಡ್ ಸ್ಪೀಕರ್ ಮೂಲಭೂತ ಹಕ್ಕಿನ ಉಲ್ಲಂಘನೆ ಅಲ್ಲ ಅಂತ ತಿಳಿಸಿದೆ.

ರಾಷ್ಟ್ರದ 19 ಉಚ್ಚ ನ್ಯಾಯಾಲಯಗಳು ಸ್ಪಷ್ಟವಾಗಿ ತಮ್ಮ ನಿಲುವನ್ನು ತಿಳಿಸಿವೆ. ಆದರೆ ರಾಜ್ಯ ಸರ್ಕಾರ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ. ಧ್ವನಿವರ್ಧಕಗಳನ್ನು ತೆರವು ಗೊಳಿಸುವ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಿಂದೂಪರ ಸಂಘಟನೆಗಳಿಂದ ಅಭಿಯಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Published by:Mahmadrafik K
First published: