Modi ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್; ಇದು ಮೊದಲ ಪಟ್ಟಿ ಎಂದ ಆರ್​ ಅಶೋಕ್​​

ಯಾವುದೇ ಷರತ್ತು ಇಲ್ಲದೇ ನಾನು ಬಿಜೆಪಿ ಮತ್ತು ನರೇಂದ್ರ ಮೋದಿ ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದ್ದೇನೆ.

ಬಿಜೆಪಿ ಸೇರಿದ ನಾಯಕರು

ಬಿಜೆಪಿ ಸೇರಿದ ನಾಯಕರು

 • Share this:
  ಬೆಂಗಳೂರು (ಮೇ. 7):  ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯ ನಾಯಕರು ಸಕ್ರಿಯರಾಗಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ. ಈ ನಡುವೆ ಅನೇಕ ಕಾಂಗ್ರೆಸ್  ಸೇರಿದಂತೆ ವಿವಿಧ ಪಕ್ಷದ ​ ನಾಯಕರು ಬಿಜೆಪಿ (BJP) ಸೇರುವ ಮೂಲಕ ಆಡಳಿತ ಪಕ್ಷಕ್ಕೆ ಬಲ ತುಂಬಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು ಈ ಮೊದಲೇ ತಿಳಿಸಿದಂತೆ ಕೋಲಾರ, ಮಂಡ್ಯ ಭಾಗದ ನಾಯಕರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಇದರಲ್ಲಿ ಕಾಂಗ್ರೆಸ್​​ ನಾಯಕರಿಗೆ ಶಾಕ್​ ನೀಡಿದವರು ಎಂದು ಪ್ರಮೋದ್​ ಮಧ್ವರಾಜ್​. ಮಾಜಿ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ (Pramodh Madhwaraj)​ ಬಿಜೆಪಿ ಸೇರ್ಪಡೆಗೂ ಎರಡು ಗಂಟೆ ಮುನ್ನ ಕಾಂಗ್ರೆಸ್ ಅಧ್ಯಕ್ಷರಿಗೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಪತ್ರ ರವಾನಿಸಿದ್ದಾರೆ.

  ಬಿಜೆಪಿ ಸೇರ್ಪಡೆಯಾದ ನಾಯಕರು 
  ಪ್ರಮೋದ್​ ಮಧ್ವರಾಜ್​ ಜೊತೆಗೆ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥ್ ಗೌಡ, ಸಂದೇಶ್, ನಾಗರಾಜ್, ಜೆಡಿಎಸ್​ ಟಿಕೆಟ್ ನಿರಾಶಿತೆ ನಿವೃತ್ತ ಐಆರ್​​ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ಸಚಿವ ಜಯರಾಮ್​​​​​ ಪುತ್ರ ಅಶೋಕ್ ಬಿಜೆಪಿಗೆ ಸೇರ್ಪಡೆ ಆದರು.
  ಬೆಂಗಳೂರು ಖಾಸಗಿ ಹೋಟೆಲ್​​​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​​​​, ಸಚಿವರಾದ ಆರ್.ಅಶೋಕ್, ಎಸ್​ಟಿ ಸೋಮಶೇಖರ್, ಮುನಿರತ್ನ ಸೇರಿ ಸಂಪುಟದ ಹಲವು ಸಚಿವರು ವಿವಿಧ ಪಕ್ಷದ ನಾಯಕರನ್ನು ಬಿಜೆಪಿಗೆ ಬರಮಾಡಿಕೊಂಡರು.

  ಇದು ಮೊದಲ ಪಟ್ಟಿ ಅಷ್ಟೇ ಎಂದ ಆರ್ ಅಶೋಕ್​

  ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್​​. ಆಶೋಕ್, ಇಂದು ಸೇರ್ಪಡೆ ಆಗಿರುವವರು ಮೊದಲ ಪಟ್ಟಿ ಮಾತ್ರ. ಇನ್ನೊಂದು ಪಟ್ಟಿ ಕೂಡಾ ಇದೆ. ಇದಲ್ಲದೇ ಇನ್ನೊಂದು ಹಾಲಿ ಶಾಸಕರ ಪಟ್ಟಿ ಕೂಡಾ ಪಕ್ಷದ ಅಧ್ಯಕ್ಷರ ಬಳಿ ಇದೆ. ತಾಂತ್ರಿಕ ಕಾರಣದಿಂದ ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣಾ ದೃಷ್ಟಿಯಿಂದ ಗೆಲ್ಲುವವರನ್ನು ಗುರುತಿಸಿ ಸೇರ್ಪಡೆ ಮಾಡಲಾಗುತ್ತಿದೆ. ನಮ್ಮ ಸಿಎಂ ಕಾಮನ್ ಮ್ಯಾನ್ ಸಿಎಂ. ನಮ್ಮ ಅಧ್ಯಕ್ಷರು ಏಳು ಬಾರಿ ರಾಜ್ಯ ಸುತ್ತಿದ್ದಾರೆ. ಸಿಎಂ ಅಧ್ಯಕ್ಷರ ಜೋಡಿ ಪರ್ಮನೆಂಟ್ ಜೋಡಿ ಎಂದು ಪಕ್ಷದ ನಾಯಕತ್ವವನ್ನು ಕೊಂಡಾಡಿದರು.

  ಇದನ್ನು ಓದಿ: Bengaluruನಲ್ಲಿ EV Charging Hub ಉದ್ಘಾಟನೆ: ಒಂದೇ ಬಾರಿಗೆ 50 ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯ

  ಯಾವುದೇ ಷರತ್ತು ಇಲ್ಲದೇ ಬಿಜೆಪಿ ಸೇರಿದ ಎಂದ ಮಧ್ವರಾಜ್
  ಬಿಜೆಪಿ ಸೇರಿದ ಬಳಿಕ ಮಾತನಾಡಿದ ಮಾಜಿ ಕಾಂಗ್ರೆಸ್​ ನಾಯಕ, ಯಾವುದೇ ಷರತ್ತು ಇಲ್ಲದೇ ನಾನು ಬಿಜೆಪಿ ಮತ್ತು ನರೇಂದ್ರ ಮೋದಿ ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದ್ದೇನೆ. ಬಿಜೆಪಿ ಈಗಾಗಲೇ ಸಾಕಷ್ಟು ಬಲಗೊಂಡಿದೆ. ಇನ್ನಷ್ಟು ಬಲಪಡಿಸಲು ಬಿಜೆಪಿ ಸೇರಿದ್ದೇನೆ ಎಂದರು.

  ಮಂಡ್ಯ ಗೆಲುವಿಗೆ ಶ್ರಮಿಸುತ್ತೇನೆ ಎಂದ ಲಕ್ಷ್ಮೀ ಅಶ್ವಿನ್ ಗೌಡ

  ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಐಆರ್ ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ರಾಜಕೀಯ ವಲಯದಲ್ಲಿ ಸಮಾಜ ಸೇವೆಗೆ ಹೆಚ್ಚಿನ ಅವಕಾಶ ಇದೆ. 2018 ರಲ್ಲಿ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದೆ. ಆಗ ನನ್ನ ರಾಜಕೀಯ ಪ್ರವೇಶದ‌ ಆರಂಭ ಫಲಪ್ರದ ಆಗಲಿಲ್ಲ. ಮೋದಿಯವರ ಆಡಳಿತ ರೋಮಾಂಚಕವಾಗಿದೆ. ಅನೇಕ ದಿಟ್ಟ ನಿರ್ಧಾರಗಳನ್ನು ಮೋದಿ ಕೈಗೊಂಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಪಕ್ಷ ಸಂಘಟನೆ ಮಾಡ್ತೇನೆ. ಮಂಡ್ಯದಲ್ಲಿ ಹೆಚ್ಚಿನ ಸೀಟ್ ಗೆಲ್ಲಿಸಲು ಶ್ರಮಿಸ್ತೇನೆ ಎಂದರು.

  ಇದನ್ನು ಓದಿ: ಬಸವ ಭೂಷಣ ಪ್ರಶಸ್ತಿ ಸ್ವೀಕಾರಕ್ಕೆ ದುಬೈಗೆ ತೆರಳಿದ ಮಾಜಿ ಸಿಎಂ

  ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಕೀಯ ‌ನಿಂತ ನೀರಲ್ಲ.  ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಬಹಳ ಜನ ದಕ್ಷಿಣ ಕರ್ನಾಟಕ ನಮ್ಮ ಕಪಿಮುಷ್ಠಿಯಲ್ಲಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಜನರಿಗೆ ಎರಡು ಪಕ್ಷದ ಮೇಲೆ ಭ್ರಮನಿರಸನಗೊಂಡಿದ್ದಾರೆ. ನಾವು ನೀರಾವರಿ, ಕೈಗಾರಿಕೆ, ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯ ಇದರ ಬಗ್ಗೆ ನಾವು ಕೇವಲ ಮಾತನಾಡುತ್ತಿಲ್ಲ. ಅದನ್ನು ಕಾರ್ಯರೂಪಕ್ಕೆ ತರುತ್ತಾ ಇದ್ದೇವೆ. ರಾಜಕೀಯದಲ್ಲಿ ವಿಶ್ವಾಸಾರ್ಹತೆ ಮುಖ್ಯ. ಆ ವಿಶ್ವಾಸಾರ್ಹತೆ ಬಿಜೆಪಿ ಮೇಲೆ ಇದೆ ಎಂದರು.
  Published by:Seema R
  First published: