Power Cut: ಬೆಂಗಳೂರಿಗರೇ ಗಮನಿಸಿ, ಇಂದಿನಿಂದ ಎರಡು ದಿನ ಪವರ್ ಕಟ್: ಇಲ್ಲಿದೆ ಸಂಪೂರ್ಣ ಮಾಹಿತಿ

ಅಂಡರ್ ಗ್ರೌಂಡ್ ನಲ್ಲಿ ಕೇಬಲ್ ಅಳವಡಿಕೆ ಮತ್ತು ನಿರ್ವಹಣಾ ಕಾರ್ಯವನ್ನು ಬೆಸ್ಕಾಂ ಮುಂದಿನ ಎರಡು ದಿನ ನಡೆಸಲಿದೆ. ನಿರ್ವಹಣಾ ಕಾರ್ಯ ಮುಗಿದ ಕೂಡಲೇ ವಿದ್ಯುತ್ ಸರಬರಾಜು ಮಾಡಲಾಗುವುದು  ಎಂದು ಬೆಸ್ಕಾಂ ತನ್ನ ಪ್ರಕಟನೆಯಲ್ಲಿ  ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನಿಂದ ಎರಡು ದಿನ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (Bangalore Electricity Supply Company Limited-BESCOM) ಮಾಹಿತಿ ನೀಡಿದೆ. ನಗರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ (Bengaluru Rains) ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಪವರ್ ಕಟ್ (Power Cut) ಶಾಕ್ ಸಿಕ್ಕಿದೆ. ವಿದ್ಯುತ್ ಕಡಿತಗೊಳ್ಳುವ ಮುನ್ನವೇ ಮೊಬೈಲ್, ಲ್ಯಾಪ್ ಟಾಪ್ ಅಂತಹ ಎಲೆಕ್ಟ್ರಾನಿಕ್ ಡಿವೈಸ್ (Electronic devices) ಗಳನ್ನು ಚಾರ್ಜ್ ಮಾಡಿಕೊಳ್ಳುವುದು ಒಳಿತು. ಬೆಂಗಳೂರಿನಲ್ಲಿ ವಿದ್ಯುತ್​ ಕಡಿತ ಸಾಮಾನ್ಯ ಸಂಗತಿಯಾಗಿದೆ, ಪ್ರತಿನಿತ್ಯ ಯಾವುದಾದರೂ ಒಂದು ಭಾಗದಲ್ಲಿ ರಿಪೇರಿ ಮತ್ತು ನಿರ್ವಹಣಾ  ಕಾರ್ಯ ಅಂತ ಹೇಳಿ ವಿದ್ಯುತ್ ಕಡಿತಗೊಳಿಸಲಾಗುತ್ತಿರುತ್ತದೆ.

ಬೆಂಗಳೂರು ದಕ್ಷಿಣ (South Bengaluru) ಭಾಗದ ಭಾಗಶಃ ಪ್ರದೇಶಗಳು ವಿದ್ಯುತ್ ಸಮಸ್ಯೆ ಎದುರಿಸಲಿವೆ. ಜಯನಗರ, ಜೆಪಿ ನಗರ, ಹೆಚ್ಎಸ್ಆರ್ ಲೇಔಟ್, ಮಾರುತಿ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ಉತ್ತರ ಭಾಗದಲ್ಲಿಯೂ ಸಂಪರ್ಕ ಕಡಿತ

ಕೋನಪ್ಪನ ಅಗ್ರಹಾರ, ದೊಡ್ಡತೊಗುರು ಮತ್ತು ಇನ್ನುಳಿದ ಸುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10.30 ರಿಂದ  ಮಧ್ಯಾಹ್ನ 1.30ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಇನ್ನು ಬೆಂಗಳೂರು ಉತ್ತರ (North Bengaluru) ಭಾಗದ ಹೆಬ್ಬಾಳ, ಪೀಣ್ಯ, ಮಲ್ಲೇಶ್ವರಂ, ಜಾಲಹಳ್ಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Weather Report: ರಾಜಧಾನಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ವರುಣನ ಅಬ್ಬರ, 13 ಜಿಲ್ಲೆಗೆ ಅಲರ್ಟ್ ಸಂದೇಶ

ಆರ್.ಆರ್.ನಗರ ಮತ್ತು ಕೆಂಗೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಬೆಂಗಳೂರು ಪೂರ್ವ (East Bengaluru) ಭಾಗದ ಇಂದಿರಾನಗರ, ಶಿವಾಜಿ ನಗರ ಮತ್ತು ವೈಟ್ ಫೀಲ್ಡ್  ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಮುಂದಿನ ಎರಡ್ಮೂರು ದಿನ ಈ ಸಮಸ್ಯೆ

ನಗರದಲ್ಲಿ  ಹಲವೆಡೆ ಕೇಬಲ್ ಅಳವಡಿಕೆಯ ಕಾರ್ಯ ನಡೆಯುತ್ತಿದೆ. ಇದರ ಜೊತೆ   ಅಂಡರ್ ಗ್ರೌಂಡ್ ನಲ್ಲಿ ಕೇಬಲ್ ಅಳವಡಿಕೆ ಮತ್ತು ನಿರ್ವಹಣಾ ಕಾರ್ಯವನ್ನು ಬೆಸ್ಕಾಂ ಮುಂದಿನ ಎರಡು ದಿನ ನಡೆಸಲಿದೆ. ನಿರ್ವಹಣಾ ಕಾರ್ಯ ಮುಗಿದ ಕೂಡಲೇ ವಿದ್ಯುತ್ ಸರಬರಾಜು ಮಾಡಲಾಗುವುದು  ಎಂದು ಬೆಸ್ಕಾಂ ತನ್ನ ಪ್ರಕಟನೆಯಲ್ಲಿ  ತಿಳಿಸಿದೆ. ಮುಂದಿನ ಎರಡ್ಮೂರು ದಿನ ಈ ಸಮಸ್ಯೆ ಇರಲಿದೆ ಎಂದು ಬೆಸ್ಕಾಂ ಹೇಳಿದೆ.

ಇದನ್ನೂ ಓದಿ:  Namma Metro: ನಮ್ಮ ಮೆಟ್ರೋ ರೈಲುಗಳ ಸಮಯ ವಿಸ್ತರಣೆ

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Work From Home ಉದ್ಯೋಗಿಗಳಿಗೆ ಸಂಕಷ್ಟ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ (COVID Pandemic) ಹೆಚ್ಚಿನ ಜನರು ಮನೆಯಿಂದಲೇ ಕೆಲಸ (Work From Home) ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ರಾಜ್ಯ ಹೆಚ್ಚುವರಿಯಾಗಿ ವಿದ್ಯುತ್ ಪಡೆದುಕೊಂಡ್ರೂ ಪ್ರಸರಣ ವ್ಯವಸ್ಥೆ ದುರ್ಬಲಗೊಂಡಿರುವ ಹಿನ್ನೆಲೆ ಈ ರೀತಿಯ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ ಎಂಬಮ ಮಾತುಗಳು ಸಹ ಕೇಳಿ ಬಂದಿವೆ.
Published by:Mahmadrafik K
First published: