Power Cut: ಬೆಂಗಳೂರಿಗರೇ, ಇಂದು ಬೇಗ ಬೇಗ ಮನೆ ಕೆಲ್ಸ ಮಾಡ್ಕೊಳ್ಳಿ, ಬೆಳಗ್ಗೆ 10ರಿಂದ ಆಗಲಿದೆ ಪವರ್ ಕಟ್!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಗ್ರಿಡ್ನಲ್ಲಿನ ಸಣ್ಣ ಹೊರೆಯ ನಡುವೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲು ಸೂಕ್ತ ವಿಚಾರ ನಡೆಸಿದೆ. ಹಾಗಾಗಿ ವಾರಾಂತ್ಯದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಅಷ್ಟರೊಳಗೆ ಕೆಲಸ ಮುಗಿಸಿಕೊಂಡರೆ ಉತ್ತಮ.
ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Area) ವಾರಾಂತ್ಯದಲ್ಲಿ (Weekend) ವಿದ್ಯುತ್ ಕಡಿತ (Power Cut) ಉಂಟಾಗಲಿದೆ. ವಿದ್ಯುತ್ ವ್ಯತ್ಯಯಕ್ಕೆ ಕಾರಣ ಏನೆಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಗ್ರಿಡ್ನಲ್ಲಿನ ಸಣ್ಣ ಹೊರೆಯ ನಡುವೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲು ಸೂಕ್ತ ವಿಚಾರ ನಡೆಸಿದೆ. ಇದರಿಂದಾಗಿ ಬಹುಪಾಲು ಉದ್ಯೋಗಿಗಳು ವಿರಾಮ ತೆಗೆದುಕೊಳ್ಳಲಿದ್ದಾರೆ. ಅದು ವಾರಾಂತ್ಯದಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಕಾರಣ ಆಗಲಿದೆ. ಇಂದು ಭಾನುವಾರ ವಿದ್ಯುತ್ ಕಡಿತ ಉಂಟಾಗಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ತಯ ಉಂಟಾಗಲಿದ್ದು ಯಾವ ಏರಿಯಾಗಳಲ್ಲಿ ವಿದ್ಯುತ್ ಕೈ ಕೊಡಲಿದೆ ಎಂಬ ಪಟ್ಟಿ ಇಲ್ಲಿದೆ.
ಮೇ 15, ಭಾನುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು ಹೀಗಿವೆ…
ಗಾಂಧಿಗ್ರಾಮ, ದೇವಯ್ಯ ಪಾರ್ಕ್, ಇ-ಬ್ಲಾಕ್ ಸುಬ್ರಹ್ಮಣ್ಯನಗರ ಬೀದಿದೀಪ, ಎ- ಬ್ಲಾಕ್ ಸುಬ್ರಹ್ಮಣ್ಯನಗರ, ಡಬ್ಲ್ಯುಪಿ ರಸ್ತೆ 15 ನೇ ಅಡ್ಡ, 16 ನೇ ಕ್ರಾಸ್ ಮಲ್ಲೇಶ್ವರಂ, ಎಲ್ ಜಿ ಹಳ್ಳಿ, ಸೂಲಿಕುಂಟೆ, ಮುತ್ತಾನಲ್ಲೂರು ಕ್ರಾಸ್, ಜುನಸಂದ್ರ ಮುಖ್ಯ ರಸ್ತೆ, ಸನ್ ಸಿಟಿ, ಎಂ ಎಸ್ ರಾಮಯ್ಯ ನಗರ, ಎಸ್ ಆರಾಧನಾ ಶಾಲೆ
ರಾಘವೇಂದ್ರ ಲಾಯೌಟ್, ಜಿ ಆರ್ ಲ್ಯಾವೆಂಡರ್ ಅಪಾರ್ಟ್ಮೆಂಟ್ಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಿಗಣಿ ಕೈಗಾರಿಕಾ ಪ್ರದೇಶಗಳು, ಜಿಗಣಿ ಕೆಐಎಡಿಬಿ ಪ್ರದೇಶಗಳು, ಅನಂತನಗರ ಕೈಗಾರಿಕಾ ಪ್ರದೇಶಗಳು, ವೀರಸಂದ್ರ ಕೈಗಾರಿಕಾ ಪ್ರದೇಶಗಳು, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳು 2 ಮತ್ತು 3 ನೇ ಹಂತ.
ಇನ್ನು ವಿದ್ಯುತ್ ಇಲ್ಲದೇ ವಧುಗಳ ಅದಲು ಬದಲು ಆದ ಘಟನೆ ಮೊನ್ನೆಯಷ್ಟೇ ನಡೆದಿದೆ
ಉಜ್ಜಯಿನಿಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ ಕೊಟ್ಟಿದ್ದರಿಂದ ವಧುಗಳು ಅದಲು ಬದಲಾಗಿದ್ದಾರೆ.
ಅಕ್ಕ ತಂಗಿ ಒಂದೇ ರೀತಿಯ ಡ್ರೆಸ್ ತೊಟ್ಟಿದ್ದರಿಂದ ಗೊಂದಲ
ಮದುವೆ ದಿನ ಅಕ್ಕ ಹಾಗೂ ತಂಗಿ ಇಬ್ಬರೂ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರಿಂದ ಅವರ ಮನೆಯವರಿಗೂ ಈ ವಿಷಯ ಗಮನಕ್ಕೆ ಬಂದಿಲ್ಲ. ವಧುಗಳು ತಮ್ಮ ಗಂಡನ ನಿವಾಸವನ್ನು ತಲುಪಿದಾಗ ಅವರಿಬ್ಬರು ಅದಲು ಬದಲಾಗಿರೋದು ಕುಟುಂಬಗಳ ಗಮನಕ್ಕೆ ಬಂದಿದೆ.
ಬೇರೆ ಬೇರೆ ವಧು-ವರರಿಂದ ವಿಧಿವಿಧಾನ
ಉಜ್ಜಯಿನಿ ಜಿಲ್ಲೆಯ ಅಸ್ಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದೇ ದಿನಾಂಕದಂದು ಮೂವರು ಸಹೋದರಿಯರ ಮದುವೆ ನಡೆದಿತ್ತು. ಆದಾಗ್ಯೂ, ದೀರ್ಘಾವಧಿಯ ವಿದ್ಯುತ್ ಕಡಿತದಿಂದಾಗಿ ಇಬ್ಬರು ಸಹೋದರಿಯರು ತಪ್ಪಾಗಿ ಬೇರೆ ವರನೊಂದಿಗೆ ಮದುವೆಯ ವಿಧಿಗಳನ್ನು ಪೂರ್ಣಗೊಳಿಸಿದರು.
ಈ ಮದುವೆಯು ಭಿಲ್ ಸಮುದಾಯದ ಕುಟುಂಬದಲ್ಲಿ ನಡೆದಿದೆ. ಲೈಟ್ಗಳು ಆಫ್ ಆದಾಗ ಯಾವುದೇ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ವಿದ್ಯುತ್ ಕಡಿತಗೊಂಡಾಗ ಕತ್ತಲು ಆವರಿಸಿತು. ಬೆಳಕು ಇಲ್ಲದ್ದರಿಂದ ಮುಖ ಸರಿಯಾಗಿ ಕಾಣಿಸದೇ ಹಾಗೂ ವಧುಗಳು ಒಂದೇ ರೀತಿಯ ಉಡುಪು ತೊಟ್ಟಿದ್ದರಿಂದ ಸಂಬಂಧಿಕರು ಸರಿಯಾಗಿ ವಧುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.