Bengaluru Power Cut: ಬೆಂಗಳೂರಿನಲ್ಲಿ ಮುಗಿಯದ ಪವರ್​ ಕಟ್ ಕಥೆ ​- ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಇಲ್ಲಿದೆ ಫುಲ್ ಡೀಟೆಲ್ಸ್

Bengaluru Power Cut: ಮುನೇಶ್ವರ ಬಡಾವಣೆ, ಅವಲಹಳ್ಳಿ, ಕಮ್ಮನಹಳ್ಳಿ ಮುಖ್ಯ ರಸ್ತೆ, ಕುವೆಂಪು ರಸ್ತೆ, ಆರ್ ಎಸ್ ಪಾಳ್ಯ ಅಕ್ಷಯ ನಗರ, ಟಿಸಿ ಪಾಳ್ಯ ಮುಖ್ಯ ರಸ್ತೆ, ರಾಮಮೂರ್ತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಳೆದ ಹಲವು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್(Power Cut) ಸಮಸ್ಯೆ ಎದುರಾಗಿದೆ. ಒಂದೆಲ್ಲ ಒಂದು ಕಾರಣ ನೀಡಿ ಬೆಸ್ಕಾಂ ಕರೆಂಟ್ ತೆಗೆಯುತ್ತಿದೆ. ಇಂದು ಸಹ ಬೆಂಗಳೂರಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ(BESCOM) ಹೇಳಿದೆ. ಆದರೆ ಇಂದು ಕೆಲ ಏರಿಯಾಗಳಲ್ಲಿ ಬೆಳಗ್ಗೆ ಇಂದ ಮಧ್ಯಾಹ್ನದ ವರೆಗೆ ವಿದ್ಯುತ್ ವ್ಯತ್ಯಯವಾದರೆ, ಇನ್ನೂ ಕೆಲ ಏರಿಯಾಗಳಲ್ಲಿ ರಾತ್ರಿ 9ರವರೆಗೂ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದ್ದು, ಸಾರ್ವಜನಿಕರಲ್ಲಿ ಸಹಕರಿಸುವಂತೆ ಮನವಿ ಮಾಡಿದೆ.

ಈ ಏರಿಯಾಗಳಲ್ಲಿ ಪವರ್ ಕಟ್

4 ನೇ ಟಿ ಬ್ಲಾಕ್ ಜಯನಗರ, 9 ನೇ ಬ್ಲಾಕ್ ಜಯನಗರ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಇಸಿಎಸ್ ಲೇಔಟ್, ಕುಂದಲಹಳ್ಳಿ ಮತ್ತು ವಿಜ್ಞಾನ ನಗರ, ಎಚ್‌ಎಎಲ್ , ಮಂಗನಹಳ್ಳಿ ಅಡ್ಡ, ಉಳ್ಳಾಲ ಉಪನಗರ, ಅಂಜನ ನಗರ ಹಾಗೂ ನಾಯ್ಡು ಬಡಾವಣೆ, ಬೊಮ್ಮನಹಳ್ಳಿ, ಹೊಂಗಸಂದ್ರ ಸೇರಿದಂತೆ ಕುವೆಂಪು ನಗರ, ಕೆಆರ್ ಪುರಂ, ಪಾರ್ವತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಬಾಲಾಜಿ ಬಡಾವಣೆ, ಅಶೋಕ್ ನಗರ, ಕತ್ರಿಗುಪ್ಪೆ ,ತಲಕಾವೇರಿ ಬಡಾವಣೆ, ಅಮೃತಹಳ್ಳಿ, ಸಹಕಾರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಶಾರದ ಕಾಲೋನಿ, ಕಮಲಾನಗರ, ಬಸವೇಶ್ವರನಗರ  ಹಾಗೂ ಬಿಕೆ ನಗರ, ಅಂಬೇಡ್ಕರ್ ನಗರ, ಯಶವಂತಪುರ  ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದ್ದು ಈ ಪ್ರದೇಶಗಳಲ್ಲಿ ರಾತ್ರಿ 8ರವರೆಗೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

ಸಿಬಿಐ ರಸ್ತೆ, ಲಕ್ಷ್ಮಯ್ಯ ಬ್ಲಾಕ್, ಗಂಗಾ ನಗರ , ಹೆಲ್ತ್ ಲೇಔಟ್, ಎಸ್‌ಜಿ ಪಾಳ್ಯ, ವಾಜರಹಳ್ಳಿ, ಮಾರುತಿ ನಗರ, ನೆಲಮಂಗಲ ಮತ್ತು ಸುತ್ತಮುತ್ತಲಿನ   ಪ್ರದೇಶಗಳು, ನಿಸರ್ಗ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ಹೊಸಕೋಟೆ  ಹಾಗೂ ಎಜಿಎಸ್ ಲೇಔಟ್, ವಿಧಾನಸೌಧ, ವಸಂತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ವಿದ್ಯುತ್ ಸಮಸ್ಯೆ ಎದುರಿಸಬೇಕಾಗಿದೆ.

ಇದನ್ನೂ ಓದಿ: ಅಕ್ಟೋಬರ್ ಬಂದರೂ ನಿಲ್ಲದ ವರುಣನ ಆರ್ಭಟ -ರಾಜ್ಯದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕುಂಬಳಗೋಡು, ವಿಶ್ವೇಶ್ವರಯ್ಯ ಬಡಾವಣೆ, ಅರ್ಚಕರ ಕಾಲೋನಿ, ಕೋಡಿಪಾಳ್ಯ, ಕೆಂಗೇರಿ, ಆಯಿಲ್ ಮಿಲ್ ರಸ್ತೆ, ಲಿಂಗರಾಜಪುರ , ರಾಘವೇಂದ್ರ ಬ್ಲಾಕ್, ಅವಲಹಳ್ಳಿ , ವಿನಾಯಕ ಲೇಔಟ್, ನಾಯಂಡಹಳ್ಳಿ,ಮಾರೇನಹಳ್ಳಿ, ನಾಗರಭಾವಿ, ಎಸ್.ಜಿ. ಕಾವಲ್, ಪಟ್ಟೇಗಾರಪಾಳ್ಯ ಜಿಎಂ ಪಾಳ್ಯ, ಎಲ್ ಬಿ ಶಾಸ್ತ್ರಿ ನಗರ, ಜಗದೀಶ್ ನಗರ, ಎಚ್ ಎ ಎಲ್​ನಲ್ಲಿ ಹಾಗೂ ಯಮಲೂರು, ಮಾರತಹಳ್ಳಿಯಲ್ಲಿ ಪವರ್ ಇರುವುದಿಲ್ಲ.

ಗೊಂಡನಹಳ್ಳಿ, ವೈಟ್ ಫೀಲ್ಡ್, ಬಿಟಿಎಂ 2 ನೇ ಹಂತ. ಎಚ್ ಎಎಲ್ 2 ನೇ ಹಂತ ಕಿತಗನೂರು, ಮುನೇಶ್ವರ ಬಡಾವಣೆ, ಅವಲಹಳ್ಳಿ, ಕಮ್ಮನಹಳ್ಳಿ ಮುಖ್ಯ ರಸ್ತೆ, ಕುವೆಂಪು ರಸ್ತೆ, ಆರ್ ಎಸ್ ಪಾಳ್ಯ ಅಕ್ಷಯ ನಗರ, ಟಿಸಿ ಪಾಳ್ಯ ಮುಖ್ಯ ರಸ್ತೆ, ರಾಮಮೂರ್ತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ.

ಕಾಚಮಾರನಹಳ್ಳಿ, ವರ್ತೂರು, ಗುಂಜೂರು, ಪಣತ್ತೂರು, ಬಾಳಗೆರೆ ವೈಟ್‍ಫೀಲ್ಡ್ ಮುಖ್ಯ ರಸ್ತೆ, ರಾಮಗೊಂಡನಹಳ್ಳಿ, ಗುಂಜೂರು ಹೊಸಹಳ್ಳಿ, ವಿನಾಯಕ ಥಿಯೇಟರ್, ವಿನಾಯಕ ಲೇಔಟ್, ವರ್ತೂರು ಮುಖ್ಯರಸ್ತೆ, ಬಾಳಗೇರಿ ರಸ್ತೆ, ಗಾಂಧಿ ವೃತ್ತ, ಈದ್ಗಾ ರಸ್ತೆ, ಸಬ್ ರಿಜಿಸ್ಟ್ರಾರ್ ರಸ್ತೆ, ಪ್ರಕಾಶ ಲೇಔಟ್, ಮಧುರ ನಗರ, ವಾಲೇಪುರನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಇದನ್ನೂ ಓದಿ: ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು; ರಾತ್ರಿ ಸುರಿದ ಭೀಕರ ಮಳೆಗೆ ಹೈರಾಣಾದ ಸಿಲಿಕಾನ್ ಸಿಟಿ ಜನ

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Sandhya M
First published: