Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್ - ಎಲ್ಲೆಲ್ಲಿ ಕರೆಂಟ್ ಇರಲ್ಲ ಇಲ್ಲಿದೆ ಡೀಟೈಲ್ಸ್​

Bengaluru Power Cut: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಪರದಾಡುವಂತಾಗಿತ್ತು. ಈ ಮಧ್ಯೆ ಬೆಸ್ಕಾಂ(BESCOM) ಸಹ ಪವರ್ ಕಟ್ (Power Cut)ಮಾಡುತ್ತಿದ್ದು ಜನರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ನಗರದಲ್ಲಿ ಧಾರಕಾರ ಮಳೆ (Rainfall )ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಪರದಾಡುವಂತಾಗಿತ್ತು. ಈ ಮಧ್ಯೆ ಬೆಸ್ಕಾಂ(BESCOM) ಸಹ ಪವರ್ ಕಟ್ (Power Cut)ಮಾಡುತ್ತಿದ್ದು ಜನರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಇಂದು ಸಹ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದ್ದು, ಯಾವ್ಯಾವ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂಬ ಲಿಸ್ಟ್  ಸಹ ನೀಡಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಮಾರುತಿ ನಗರ, ಯಲಹಂಕ ಓಲ್ಡ್ ಟೌನ್, ಯೋಗೀಶ್ ನಗರ, ವಿನಾಯಕ ನಗರ, ಪಂಪ ಲೇಔಟ್ಮ ಸಿಂಧಿ ಸ್ಕೂಲ್,, ನೇತಾಜಿ ನಗರ, ವೆಂಕಟೇಗೌಡ ಲೇಔಟ್ , ಜೆಪಿ ನಗರ 5 ನೇ ಹಂತ, ಇಸ್ರೋ ಲೇಔಟ್, ಪೈಪ್ ಲೈನ್, ಕೆಎಸ್ ಲೇಔಟ್ 1 ನೇ ಹಂತ, 14 ನೇ ಮೇನ್, ಸಿದ್ದಾಪುರ, ತೂಬರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬಿಟಿಎಂ ಲೇಔಟ್ 2 ನೇ ಹಂತ, ಮಲ್ಲಸಂದ್ರ, ಬೃಂದಾವನ್ ಲೇಔಟ್, ಬಿಎಚ್​ಇಎಲ್ ಮಿನಿ ಕಾಲೋನಿ, ರಮೇಶ್ ಲೇಔಟ್ , ಪೈಪ್ ಲೈನ್ ರೋಡ್, ದಾಸರಹಳ್ಳಿ ಸೇರಿದಂತೆ ಹೊಸೂರು ಮೇನ್ ರೋಡ್, ಬಂಡೆ ಪಾಳ್ಯ, ಸಿಂಗಸಂದ್ರ ಹಾಗೂ ಜಿ. ಬಿ ಪಾಳ್ಯ, ಕೂಡ್ಲು ಗೇಟ್, ಬೈಚಾಪುರ, ಆಂದ್ರೇಶ್ವರ, ಕಾಡುಗೋಡಿ ಮತ್ತು ಅದರ ಸುತ್ತಲಿನ ಏರಿಯಾಗಲಲ್ಲಿ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.

ಇದನ್ನೂ ಓದಿ: ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಬಂಗಾರ; ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಕುಮಾರಸ್ವಾಮಿ ಲೇಔಟ್ , ರಾಜ್ಯೋತ್ಸವ ನಗರ, ಇಲಿಯಾಸ್ ನಗರ, ರಿಂಗ್ ರೋಡ್, ವೆಂಕಟಾಪುರ, ಜಕ್ಕಸಂದ್ರ, ಟೀಚರ್ಸ್ ಕಾಲೋನಿ ಸೇರಿದಂತೆ  ಭುವನೇಶ್ವರಿ ನಗರ, ಹೆಬ್ಬಾಳ, ವೈಟ್ ಫೀಲ್ಡ್, ಗಣಪತಿ ನಗರ, ಆಚಾರ್ಯ ಕಾಲೇಜ್ ರೋಡ್, ಶಾಂತಿ ನಗರ್, ಕೃಷ್ಣ ಕಾಲೇಜ್, ಅಗ್ಗೆ ಗೌಡನ ಪಾಳ್ಯ ಹಾಗೂ  ಸೋಲಾದೇವನ ಹಳ್ಳಿ, ರಾಘವೇಂದ್ರ ಲೇಔಟ್ , ವಾಗ್ಬೇವಿ ಕಾಲೇಜು, ವಿರೂಪಾಕ್ಷಪುರ ಮತ್ತು ಉಳಿದ ಕೆಲ ಪ್ರದೇಶಗಳಲ್ಲಿ ಪವರ್ ಕಟ್​ ಸಾಧ್ಯತೆ ಇದೆ ಎಂದು ಬೆಸ್ಕಾಂ ಹೇಳಿದೆ.

ಸಿಂಗಸಂದ್ರ, ದೊಡ್ಡತೋಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಗೊಟ್ಟಿಗೆರೆ, ಸುರಭಿ ನಗರ, ಎಚ್‌ಎಸ್‌ಆರ್‌ ಬಡಾವಣೆ, ಗೋವಿಂದರಾಜ ನಗರ, ನಾಗರಬಾವಿ, ಚಂದ್ರಾ ಬಡಾವಣೆ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಹಂಪಿನಗರ, ಹೊಸಹಳ್ಳಿ, ವಿಜಯನಗರ, ಮಲ್ಲತ್ತಹಳ್ಳಿ, ಮಾರೇನಹಳ್ಳಿ, ದೊಡ್ಡಬಸ್ತಿ ಮುಖ್ಯರಸ್ತೆ, ಮಾರುತಿ ನಗರ, ವಿಘ್ನೇಶ್ವರ ನಗರ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಹೇಳಿದೆ.

ಜನರ ಪರದಾಟ ಒಂದೆರೆಡಲ್ಲ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.

ಹಾಗೆಯೇ ಎಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ತಮಿಳುನಾಡಿಗೆ 25.84 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ. ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Sandhya M
First published: