Bengaluru Power Cut: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್- ಇಂದು ಈ ಏರಿಯಾಗಳಲ್ಲಿ ವಿದ್ಯುತ್​ ವ್ಯತ್ಯಯ

Bengaluru Power Cut: ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ(Corona) ಮಹಾಮಾರಿ ಓಮಿಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ(BESCOM) ಎಂದಿನಂತೆ ಶಾಕ್ ನೀಡಿದ್ದು, ಇಂದು ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ. ಹಾಗಿದ್ರೆ ಬೆಂಗಳೂರಿನ ಯಾವ ಯಾವ ಪ್ರದೇಶದಲ್ಲಿ ಇಂದು ಕಾಲ ವಿದ್ಯುತ್ ವ್ಯತ್ಯಯವಾಗಲಿದೆ (Power Cut)ಎಂಬ ಮಾಹಿತಿ ಇಲ್ಲಿದೆ.

 ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್‌, ಭೂಮಿಕ ಲೇಔಟ್‌, ಪಟ್ಟಣಗೆರೆ, ಬಿ.ಎಚ್‌.ಇ.ಎಲ್‌. ಲೇಔಟ್‌, ಹರ್ಷ ಲೇಔಟ್‌, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್‌. ಆಸ್ಪತ್ರೆ ರಸ್ತೆ, ಮೈಸೂರು ಹೈವೆ, ಸಿದ್ದಾರ್ಥ ಶಾಲೆ ರಸ್ತೆ, ಮುನೇಶ್ವರ ಲೇಔಟ್‌, ಪ್ರಸನ್ನ ಲೇಔಟ್‌, ಮಾರುತಿನಗರ, ಕೆಂಪೇಗೌಡ ನಗರ, ಸನ್‌ಸಿಟಿ, ಬಿ.ಡಿ.ಕಾಲೊನಿ, ಗಾಂಧಿನಗರ, ಉಲ್ಲಾಳನಗರ, ಭುವನೇಶ್ವರಿನಗರ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್‌, ಆರ್‌.ಆರ್‌.ಲೇಔಟ್‌, ಉಪಾಧ್ಯಾಯ ಲೇಔಟ್‌, ಕುವೆಂಪು ಮುಖ್ಯರಸ್ತೆ, ಜಿ.ಕೆ.ಗಲ್ಲಿ ರಸ್ತೆ, ಗಂಗಾನಗರ, ಯಮುನಾಗರ ಶಾಲೆ, ಬಿ.ಇ.ಎಲ್‌. 1 ಮತ್ತು 2ನೇ ಹಂತ, ಗಾಂಧಿ ಪಾರ್ಕ್‌–1, ಸರ್‌.ಎಂ.ವಿ. 3 ಮತ್ತು 5ನೇ ಬ್ಲಾಕ್‌, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆ ಇರಲಿದೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ರಾಜ್ಯದ 4 ಸಾರಿಗೆ ನಿಗಮಗಳ ವಿಲೀನಕ್ಕೆ ಒತ್ತಾಯ

ಬಾಲಾಜಿ ನಗರ, ಬಿಸ್ಮಿಲ್ಲಾ ನಗರ, ಸಿದ್ದಗುಂಟೆಪಾಳ್ಯ ಮತ್ತು ಕುವೆಂಪು ರಸ್ತೆ, ಕಮ್ಮನಹಳ್ಳಿ ರಸ್ತೆ, ಆರ್ ಎಸ್ ಪಾಳ್ಯ ಸೇರಿದಂತೆ ಸಾಯಿ ಶಕ್ತಿ ಬಡಾವಣೆ, ಬೆಟ್ಟದಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಇಳಿವಯಸ್ಸಲ್ಲೂ ಈಜುಗಾರನ ಕಠಿಣ ಸಾಧನೆ-ಗೋಲ್ಡನ್​​ ಬುಕ್ ಆಫ್ ರೆಕಾರ್ಡ್ ‌ನಲ್ಲಿ ಗಂಗಾಧರ್ ಹೆಸರು ಶಾಶ್ವತ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
Published by:Sandhya M
First published: