Bengaluru Power Cut: ನಿಲ್ಲದ ಪವರ್ ಕಟ್ ಸಮಸ್ಯೆ -ಇಂದೂ ಸಹ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ..

Bengaluru Power Cut: ಎಎಂಎಸ್ ಲೇಔಟ್, ವಿದ್ಯಾರಣ್ಯಪುರ ,ಬೆಳ್ಳಿಕೆರೆ, ತಿರುಮಲ ಶೆಟ್ಟಿಹಳ್ಳಿ ಕ್ರಾಸ್, ಹೊಸಕೋಟೆ ಮತ್ತು ಶಾರದಾ ನಗರ, ವಸಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಳೆದ ಹಲವು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್(Power Cut) ಮಾಡಲಾಗುತ್ತಿದೆ. ಇಂದು ಸಹ ನಗರದ ವಿವಿದೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ(BESCOM) ಮನವಿ ಮಾಡಿದೆ. ಇಂದು ಕೆಲ ಏರಿಯಾಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ಪವರ್ ಆದರೆ ಇನ್ನೂ ಕೆಲ ಏರಿಯಾಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಸೂಚನೆ ನೀಡಿದೆ. ಇನ್ನು ಯಾವ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ ಎಂಬ ಲಿಸ್ಟ್ ಸಹ ಬೆಸ್ಕಾಂ ನೀಡಿದೆ.

ಎಲ್ಲೆಲ್ಲಿ ಬೆಳಗ್ಗೆ 8 ರಿಂದ 6 ವರೆಗೆ ಪವರ್ ಕಟ್ ?

ಕೆಪಿಟಿಸಿಎಲ್ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು ಉಪವಿಭಾಗದ 66/11ಕೆವಿ ಹಾಗೂ ಉಪಕೇಂದ್ರದ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು  ಉಪವಿಭಾಗದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಧು ಮನವಿ ಮಾಡಿದ್ದಾರೆ.

ತಾವರೆಕೆರೆ, ಜಟ್ಟಿಪಾಳ್ಯ, ಚನ್ನೇನಹಳ್ಳಿ, ಯರ್ರಪ್ಪ ಇಂಡಸ್ಟ್ರಿಯಲ್ ಏರಿಯಾ, ಚನ್ನೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ಗಿಡದಪಾಳ್ಯ, ಹೊನ್ನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವರ್ತೂರು, ಮೇಟಿಪಾಳ್ಯ ಹಾಗೂ  ಗಂಗೇನಹಳ್ಳಿ, ಲಕ್ಕುಪ್ಪೆ, ಪುಟ್ಟಯ್ಯನಪಾಳ್ಯ, ಜಲಮಂಡಳಿ ಟ.ಜಿ.ಹಳ್ಳಿ, ಕುರುಬರಹಳ್ಳಿ, ಚನ್ನದಾಸಿಪಾಳ್ಯ, ಯಲಚಗುಪ್ಪೆ, ಚಿಕ್ಕಣ್ಣಪಾಳ್ಯ, ಮಾದಾಪಟ್ಟಣ ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ.

ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್​ ದೊಣ್ಣೆ ನಾಯಕರ ಕೇಳಿ ನಾನು ಕ್ಯಾಂಡಿಡೇಟ್ ಹಾಕಬೇಕಾ? ಎಚ್​​ಡಿಕೆ ವಾಗ್ದಾಳಿ

ಈ ಏರಿಯಾಗಳಲ್ಲಿ ಬೆಳಗ್ಗೆ 10 ರಿಂದ 5ವರೆಗೆ ಕರೆಂಟ್ ಇರಲ್ಲ.

ಬಾಲಾಜಿ ನಗರ, ಬಿಸ್ಮಿಲ್ಲಾ ನಗರ, ಸಿದ್ದಗುಂಟೆಪಾಳ್ಯ ಮತ್ತು ಕುವೆಂಪು ರಸ್ತೆ, ಕಮ್ಮನಹಳ್ಳಿ ರಸ್ತೆ, ಆರ್ ಎಸ್ ಪಾಳ್ಯ ಸೇರಿದಂತೆ ಸಾಯಿ ಶಕ್ತಿ ಬಡಾವಣೆ, ಬೆಟ್ಟದಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಎಎಂಎಸ್ ಲೇಔಟ್, ವಿದ್ಯಾರಣ್ಯಪುರ ,ಬೆಳ್ಳಿಕೆರೆ, ತಿರುಮಲ ಶೆಟ್ಟಿಹಳ್ಳಿ ಕ್ರಾಸ್, ಹೊಸಕೋಟೆ ಮತ್ತು ಶಾರದಾ ನಗರ, ವಸಂತಪುರ ಮತ್ತು ಇನ್ಫೆಂಟ್ರಿ ರಸ್ತೆ, ಶಿವಾಜಿ ನಗರ ಹಾಗೂ  ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಪವರ್ ಕಟ್ ಇರಲಿದೆ.  ನಾಗದೇವನಹಳ್ಳಿ, ಆರ್ ಆರ್ ಲೇಔಟ್, ಕನಕಪುರ ಮುಖ್ಯ ರಸ್ತೆ, ಕಗ್ಗಲೀಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಮದು ಬೆಸ್ಕಾಂ ಹೇಳಿದೆ.

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಜೆಡಿಎಸ್ ಅಲ್ಪಸಂಖ್ಯಾತರನ್ನು ನಿಲ್ಲಿಸಿ Political Strategy ಮಾಡಿದೆ; ಡಿ.ಕೆ. ಶಿವಕುಮಾರ್

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
Published by:Sandhya M
First published: