Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್​

Bescom: ಅಂದ್ರಹಳ್ಳಿ, ಭವಾನಿ ನಗರ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ ಮತ್ತು ವೀರಸಂದ್ರ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿಯ ಕಾಟ ಅಧಿಕವಾಗಿದೆ. ಮನೆಯಿಂದ(Home) ಆಚೆ ಬರಲು ಭಯ ಪಡುವ ವಾತಾವಾರಣ ನಿರ್ಮಾಣವಾಗಿದೆ. ಇತ್ತ ಕಚೇರಿಗಳಿಗೆ(Office) ಹೋಗಿ ಕೆಲಸ ಮಾಡುವವರು ಕೊರೋನಾ ಹಾಗೂ ಓಮಿಕ್ರಾನ್(Omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್(Work From Home) ಕೆಲಸವೇ ಬೆಸ್ಟ್ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗೋದಕ್ಕಿಂತ ಆನ್ ಲೈನ್ ಕ್ಲಾಸ್(Online Class) ಉತ್ತಮ ಎಂದು ಕೊಂಡು ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಕೇಳಲು ಸಿದ್ದರಾಗಿದ್ದಾರೆ.. ಕೊರೋನಾ ಇರೋದ್ರಿಂದ್ದ ಹೇಗಿದ್ರು ಮನೆಯಿಂದ ಹೊರಗೆ ಹೋಗೋದಕ್ಕೆ ಆಗೋದಿಲ್ಲ ಹೀಗಾಗಿ ಬೆಳಗ್ಗೆ 10 ಗಂಟೆಯೊಳಗೆ ಮನೆ ಕೆಲಸ ಮುಗಿಸಿ ಸೀರಿಯಲ್(Serial) ನೋಡ್ಬೆಕು ಅಂತ ಅಂದುಕೊಂಡು ನಾನಾ ಪ್ಲಾನ್ ಮಾಡಿರೋ ಜನಗಳಿಗೆ ಎಂದಿನಂತೆ ಬೆಸ್ಕಾಂ(BESCOM) ಶಾಕ್ ನೀಡಲು ಮುಂದಾಗಿದೆ.  ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಈ ಕುರಿತು ಮಾಹಿತಿ ನೀಡಿದ್ದು, ನಿರ್ವಹಣೆ ಮತ್ತು ಇತರ ಕಾರಣಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದಿದೆ. ಯಾವ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ ಇಲ್ಲಿದೆ

  ಜನವರಿ 14ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  1) ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ  ವಸಂತ ವಲ್ಲಬ ನಗರ, ಶಾರದ ನಗರ, ಜರಗನಹಳ್ಳಿ, ಎಲ್‌ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಜಯನಗರ 8 ನೇ ಬ್ಲಾಕ್, ಶಾಸ್ತ್ರಿನಗರ ಮುಖ್ಯ ರಸ್ತೆ, ಪದ್ಮನಾಭನಗರ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ ಸೇರಿವೆ. ಹಂತ, ಡಾಲರ್ಸ್ ಲೇಔಟ್, ವಿನಾಯಕನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೊಗೂರಲ್ಲಿ ವಿದ್ಯುತ್‌ ಕಡಿತವಾಗಲಿದೆ

  ಇದನ್ನೂ ಓದಿ: ಅಪಾರ್ಟ್​​ಮೆಂಟ್ಸ್​​, ಹಾಸ್ಟೆಲ್ಸ್​​, ಪಿಜಿಗಳಿಗೆ BBMPಯಿಂದ ಹೊಸ ಮಾರ್ಗಸೂಚಿ.. ಸಂಪೂರ್ಣ ಮಾಹಿತಿ ಇಲ್ಲಿದೆ

  2) ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 4ರವರೆಗೆ  ನಾಗವಾರ ಪಾಳ್ಯ ಮುಖ್ಯರಸ್ತೆ, ಕಸ್ತೂರಿ ನಗರ, ಎ ನಾರಾಯಣಪುರ ಮತ್ತು ನಲ್ಲೂರಹಳ್ಳಿ  ಪ್ರದೇಶಗಳಲ್ಲಿ  ವಿದ್ಯುತ್ ಕಡಿತವಾಗಲಿದೆ.

  3)ಉತ್ತರ ವಲಯ: ರಾಮಚಂದ್ರಾಪುರ ಗ್ರಾಮ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ನಿರಂತರ ಲೇಔಟ್, ಸಾತನೂರು ಗ್ರಾಮ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಜಕ್ಕೂರು ಮುಖ್ಯರಸ್ತೆ, ಆನಂದನಗರ, ಎಸ್‌ಬಿಎಂ ಕಾಲೋನಿ, ಜೆಸಿ ನಗರ ಮತ್ತು ಕೈಗಾರಿಕಾ ಪ್ರದೇಶ ಪೀಣ್ಯ 1ನೇ ಹಂತ ಸೇರಿವೆ  ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  4) ಪಶ್ಚಿಮ ವಲಯ:  ಸಮರ್‌ಪುರ ಮುಖ್ಯರಸ್ತೆ, ತ್ಯಾಗರಾಜನಗರ, ವೀವರ್ಸ್ ಕಾಲೋನಿ, ಧೋಬಿಘಾಟ್, ಶ್ರೀನಗರ, ಅಂದ್ರಹಳ್ಳಿ, ಭವಾನಿ ನಗರ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ ಮತ್ತು ವೀರಸಂದ್ರ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಇನ್ಮೇಲೆ ರಾತ್ರಿ ಹೊತ್ತು ದ್ವಿಚಕ್ರ ವಾಹನ ಸಂಚಾರ ಬಂದ್!

  ಒಟ್ಟಾರೆ ಸಂಕ್ರಾಂತಿ ಹಬ್ಬ ಬೇರೆ ನಾಳೆ ಇದ್ದು ಹಬ್ಬಕ್ಕೆ ವಿವಿಧ ಬಗೆಯ ಸಿದ್ಧತೆಗಳನ್ನ, ವಿವಿಧ ತಿಂಡಿಗಳನ್ನ ಮನೆಯಲ್ಲಿಯೇ ಇದ್ದು ಮಾಡಿಕೊಳ್ಳಬೇಕೆಂಬಹೆಣ್ಣು ಮಕ್ಕಳಿಗೂ ಬೆಂಗಳೂರಲ್ಲಿ ಇಂದು ವ್ಯತ್ಯಯ ಉಂಟಾಗುತ್ತಿರುವುದು ಬೇಸರ ತರಿಸಿದೆ. ಅಲ್ಲದೆ ಪದೇ ಪದೇ ಹೀಗೆ ಕಾಮಗಾರಿ ಹೆಸರಲ್ಲಿ ಪ್ರತಿನಿತ್ಯ ವಿದ್ಯುತ್ ವ್ಯತ್ಯಯ ಮಾಡುತ್ತಿರುವುದು ಗ್ರಾಹಕರಲ್ಲಿ ಬೆಸ್ಕಾಂ ವಿರುದ್ಧ ಆಕ್ರೋಶ ಹೆಚ್ಚಳವಾಗುವಂತೆ ಮಾಡಿದೆ
  Published by:ranjumbkgowda1 ranjumbkgowda1
  First published: