Bengaluru City universityಗೆ ಎರಡನೇ Rank ಬಂದ Postman: ಬೆಳಗ್ಗೆ ಡ್ಯೂಟಿ, ಸಂಜೆ ಕಾಲೇಜಿಗೆ ಹಾಜರ್

ಸಂಜಯ್ ಬೆಳಗ್ಗೆ 8 ರಿಂದ ಮಧ್ಯಾಹ್ನ 3ರವರೆಗೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 5.30ರಿಂದ 9.15ರವರೆಗೆ ಕಾಲೇಜಿಗೆ ಹಾಜರಾಗುತ್ತಿದ್ದರು.

ಸಂಜಯ್ ಕೆಪಿ

ಸಂಜಯ್ ಕೆಪಿ

  • Share this:
ಪ್ರತಿದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು (College Students) ಜಸ್ಟ್ ಪಾಸ್ (Just Pass) ಆದ್ರೆ ಸಾಕು ಅಂತ ಪರೀಕ್ಷೆ (Exams) ಬರೆಯುತ್ತಾರೆ. ಚೆನ್ನಾಗಿ ಅಭ್ಯಾಸ (Study) ಮಾಡಬೇಕೆಂಬ ಛಲ ಇದ್ದವರು ಎಷ್ಟೇ ಸಮಸ್ಯೆಗಳಿದ್ರೂ ಅವುಗಳನ್ನು ಎದುರಿಸಿ ಉತ್ತಮ ಅಂಕಗಳನ್ನು (Good Marks) ಪಡೆದು ಮಾದರಿ ಆಗುತ್ತಾರೆ. ಕೆಲಸದ ಒತ್ತಡಗಳ ನಡುವೆಯೂ ಸಂಜೆ ಕಾಲೇಜಿಗೆ (Evening College) ಹಾಜರಾದ ಪೋಸ್ಟ್ ಮ್ಯಾನ್ (Postman) ಬೆಂಗಳೂರು ಸಿಟಿ ವಿಶ್ವವಿದ್ಯಾಲ(Bengaluru City University)ಯದಲ್ಲಿ ಎರಡನೇ Rank ಪಡೆದು ಸಾಧನೆ ಮಾಡಿದ್ದಾರೆ. 25 ವರ್ಷದ ಸಂಜಯ್ ಕೆಪಿ (Sanjay KP) ಬೆಂಗಳೂರು ಪಶ್ಚಿಮ ವಿಭಾಗದ ಸುಂಕದಕಟ್ಟೆಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.

ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಪದವಿ ಪರೀಕ್ಷೆಯ ಫಲಿತಾಂಶ ಮಾರ್ಚ್ 17ರಂದು ಪ್ರಕಟವಾಗಿದ್ದು, ಟಾಪರ್ ಲಿಸ್ಟ್ ನೋಡಿ ಇನ್ನುಳಿದ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ಐಟಿಐ ಕೋರ್ಸ್ ಮುಗಿಸಿದ ಸಂಜಯ್ 2015ರಲ್ಲಿ ಆಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.

ಪಿಯುಸಿಯಲ್ಲಿ ಶೇ.87 ಅಂಕ

ಉದ್ಯೋಗ ಸಿಕ್ಕರೂ ಸಂಜಯ್ ಅವರು ಓದೋದನ್ನ ನಿಲ್ಲಿಸಿಲಿಲ್ಲ. ಕೆಲಸ ಮಾಡುತ್ತಲೇ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದ ಸಂಜಯ್ ಶೇ.87 ಅಂಕ ಪಡೆದುಕೊಂಡಿದ್ದರು. ಅಂದು ಸಹ ಪತ್ರಿಕೆಗಳು ಸಂಜಯ್ ಅವರ ಕುರಿತ ಲೇಖನಗಳನ್ನು ಪ್ರಕಟಿಸಿದ್ದವು. ಇಂದು ಮತ್ತೊಮ್ಮೆ ಸಾಧನೆ ಮಾಡಿರುವ ಸಂಜಯ್ ಸುದ್ದಿಗಳು ಪ್ರಕಟವಾಗುತ್ತಿವೆ.

2018ರಲ್ಲಿ ಪಿಯುಸಿ ಮುಗಿಸಿದ ಬಳಿಕ ಸಂಜಯ್ ಸಂಜೆ ಕಾಲೇಜಿಗೆ ದಾಖಲಾತಿ ಪಡೆದುಕೊಂಡಿದ್ದರು. ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನ ವಿಷಯಳನ್ನು ವ್ಯಾಸಂಗ ಮಾಡಿ ಶೇ.91.7ರಷ್ಟು ಅಂಕಗಳನ್ನು ಪಡೆದು ಬೆಂಗಳೂರು ಸಿಟಿ ಯುನಿವರ್ಸಿಟಿಗೆ ಎರಡನೇ ಟಾಪರ್ ಆಗಿದ್ದಾರೆ.

ಇದನ್ನೂ ಓದಿ:  Farmers Students Scholarship: ರೈತರ ಮಕ್ಕಳೇ, ಈ ಸ್ಕಾಲರ್​ಶಿಪ್ ಬಿಡಬೇಡಿ! ಅರ್ಜಿ ಹಾಕೋದು ಹೇಗೆ ತಿಳಿಯಿರಿ

ಬೆಳಗ್ಗೆ ಡ್ಯೂಟಿ, ಸಂಜೆ ಕಾಲೇಜಿಗೆ ಹಾಜರು

ಸಂಜಯ್ ಬೆಳಗ್ಗೆ 8 ರಿಂದ ಮಧ್ಯಾಹ್ನ 3ರವರೆಗೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 5.30ರಿಂದ 9.15ರವರೆಗೆ ಕಾಲೇಜಿಗೆ ಹಾಜರಾಗುತ್ತಿದ್ದರು. ರಾತ್ರಿಯೇ ಆಯಾ ದಿನದ ಅಭ್ಯಾಸ ಮಾಡುತ್ತಿದ್ದರು. ಸಂಜಯ್ ಓದಲು ಸಮಯ ರಾತ್ರಿಯೇ ಸಿಗುತ್ತಿತ್ತು.

ಕೆಲ ದಿನ ನಾನು ಕೇವಲ ಮೂರರಿಂದ ನಾಲ್ಕು ಗಂಟೆ ಮಾತ್ರ ಮಲಗುತ್ತಿದೆ. ನಾನು ಕೇವಲ ಪದವಿ ಪ್ರಮಾಣ ಪತ್ರಕ್ಕಾಗಿ ಅಭ್ಯಾಸ ಮಾಡಲಿಲ್ಲ. ಈಗಾಗಲೇ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲ ವರ್ಷಗಳ ಅನುಭವದ ನಂತರ ಇಲಾಖೆಯ ಸೇವಾ ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆ ನನ್ನ ಮುಂದಿತ್ತು. ಆದ್ರೆ ರಾಜಕೀಯ ಶಾಸ್ತ್ರಗಳಂತ ವಿಷಯಗಳನ್ನು ಓದುವ ಇಚ್ಛೆಯಿಂದ ಪದವಿ ಸೇರಿದೆ. ವಿಶೇಷವಾಗಿ ನಮ್ಮ ಸಂವಿಧಾನವನ್ನು ಆರ್ಥ ಮಾಡಿಕೊಳ್ಳಲು ತುಂಬಾ ಸಹಾಯವಾಯ್ತು ಎಂದು ಸಂಜಯ್ ಕೆಪಿ ಹೇಳುತ್ತಾರೆ.

ಸಂಜಯ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿಯ ಕಾಕರಹಳ್ಳಿಯ ನಿವಾಸಿಯಾಗಿದ್ದಾರೆ. ಇನ್ನು ಅಂಚೆ ಕಚೇರಿಯಲ್ಲಿ ತಮ್ಮ ಹಿರಿಯ ಸಹೋದ್ಯೋಗಿಗಳು ಓದಲು ತುಂಬಾ ಪ್ರೋತ್ಸಾಹ ನೀಡಿದರು ಎಂದು ಸಂಜಯ್ ಹೇಳುತ್ತಾರೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ

ಮುಂದೆ ಇಲಾಖೆ ಪರೀಕ್ಷೆ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಗುರಿಯನ್ನು ಸಂಜಯ್ ಹೊಂದಿದ್ದಾರೆ. ನನಗೆ ಓದೋದು ಮತ್ತು ಟೀಚಿಂಗ್ ಮಾಡೋದು ಇಷ್ಟ. ಹಾಗಾಗಿ ಇನ್ನಷ್ಟು ಅಭ್ಯಾಸ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ಇನ್ನು ದೇವರು ನನಗೆ ಅತ್ಯುತ್ತಮ ಉಪನ್ಯಾಸಕರನ್ನು ಕರುಣಿಸಿದ ಕಾರಣ ಇಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಯ್ತು ಎಂಬುವುದು ಸಂಜಯ್ ಮಾತು.

ನಾನು ಕೆಲಸಕ್ಕೆ ಸೇರಿದ ನಂತರ ನನ್ನ ಸಹೋದರಿ ಆಕೆ ತನ್ನ ಶಿಕ್ಷಣ ಮುಂದುವರಿಸಿ ಇಂದು ಇಂಜಿನೀಯರ್ ಆಗಿದ್ದಾಳೆ. ಈಗ ನಾನು ಮನೆಯಲ್ಲಿ ಎರಡನೇ ಪದವೀಧರನಾಗಿದ್ದೇನೆ. ಇನ್ನು  ಎರಡನೇ ಟಾಪರ್ ಆಗಿರೋದಕ್ಕೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಸಂಜಯ್ ಬಗ್ಗೆ ಪ್ರಾಂಶುಪಾಲರ ಮೆಚ್ಚುಗೆ ಮಾತು

ಸಂಜಯ್ ಸಾಧನೆ ಕುರಿತು ವಿವಿ ಪುರಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಧರ್ ಹೆಚ್‌ ಪಿ ಮಾತನಾಡಿದ್ದಾರೆ. ಬೆಂಗಳೂರು ಸಿಟಿ ಯೂನಿವರ್ಸಿಟಿಯಿಂದ ಪದವಿ ಪಡೆದವರ ಮೊದಲ ಬ್ಯಾಚ್ ಇದಾಗಿದ್ದು, ನಮ್ಮ ಕಾಲೇಜು ವಿದ್ಯಾರ್ಥಿ ರ್ಯಾಂಕ್ ಪಡೆದಿರುವುದು ಇದೇ ಮೊದಲು ಎಂದು ಹೇಳಿದರು.

ಇದನ್ನೂ ಓದಿ:  Bengaluru: ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ಏರ್​ಪೋರ್ಟ್​​​ನಲ್ಲಿ 9.23 ಕೋಟಿ ಮೌಲ್ಯದ ಮಾದಕ ವಸ್ತು ವಶ

ಸಂಜಯ್ ಅವರು ತಮ್ಮದೇ ಆದ ಟಿಪ್ಪಣಿಗಳನ್ನು ಸಿದ್ಧಪಡಿಸುತ್ತಿದ್ದರು ಮತ್ತು ಅವುಗಳನ್ನು ಉಪನ್ಯಾಸಕರ ಮೂಲಕ ಸರಿಪಡಿಸಿಕೊಳ್ಳುತ್ತಿದ್ದರು. ಜೊತೆಗೆ ಸಿಬ್ಬಂದಿಯಿಂದ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅಭ್ಯಾಸ ಮಾಡುತ್ತಿದ್ದರು. ಅವರು ಮಾಡಿಕೊಳ್ಳುತ್ತಿದ್ದ ನೋಟ್ಸ್ ಗಳು ತುಂಬಾನೇ ಸ್ಪಷ್ಟವಾಗಿರುತ್ತಿದ್ದವು.

ನಾನು ಸಂಜಯ್ ಅವರ ಸುಂದರವಾದ ಕೈಬರಹದ ಅಭಿಮಾನಿ. ದೂರದ ಹಳ್ಳಿಯಿಂದ ಬಂದು, ಸ್ವ ಪ್ರೇರಣೆಯಿಂದ ಶಿಕ್ಷಣ ಪಡೆದ ವ್ಯಕ್ತಿಯಾಗಿದ್ದಾರೆ ಎಂದು ಶ್ರೀಧರ್ ಹೆಚ್ ಪಿ ಅವರು ಹೇಳುತ್ತಾರೆ.
Published by:Mahmadrafik K
First published: