Bengaluru Acid Attack: ಆಸಿಡ್ ನಾಗನ ಫೋಟೋ ರಿಲೀಸ್ ಮಾಡಿದ ಪೊಲೀಸರು

ಪೊಲೀಸ್ ಮೂಲಗಳ ಪ್ರಕಾರ, ಬಾಬು ಏಳು ವರ್ಷಗಳಿಂದ ಮಹಿಳೆಯ ಚಿಕ್ಕಪ್ಪನ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದನು. ಕಳೆದ ಏಳು ವರ್ಷಗಳಿಂದ ಯುವತಿಯ ಹಿಂದೆ ಸುತ್ತುತ್ತಿದ್ದನು. ಆದ್ರೆ ಯುವತಿ ಈತನ ಪ್ರಸ್ತಾಪವನ್ನು ನಿರಾಕರಿಸಿದ್ದಳು.

ಆ್ಯಸಿಡ್ ನಾಗ

ಆ್ಯಸಿಡ್ ನಾಗ

  • Share this:
ಬೆಂಗಳೂರಿನಲ್ಲಿ ನಡೆದ ಆಸಿಡ್ ದಾಳಿಯ (Bengaluru Acid Case)  ಆರೋಪಿ ನಾಗೇಶ್ ಬಾಬು ಫೋಟೋಗಳನ್ನು (Accused Photos) ಪೊಲೀಸರು ಬಿಡುಗಡೆ ಮಾಡಿದ್ದು, ಆತನ ಬಂಧನಕ್ಕಾಗಿ ಸಾರ್ವಜನಿಕರ ಸಹಾಯ ಕೇಳಿದ್ದಾರೆ. ಆರೋಪಿಯ ವಿವಿಧ ವೇಷದಲ್ಲಿರುವ ಫೋಟೋವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಏಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಬಾಬು ಆಸಿಡ್ (Acid Attack) ದಾಳಿ ನಡೆಸಿದ್ದನು. ಆದ್ರೆ ಘಟನೆ ನಡೆದು ವಾರ ಕಳೆದರೂ ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ಆರೋಪಿಯ ಸುಳಿವು ಸಿಕ್ಕರೆ ಮಾಹಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇನ್ನೂ ಆಸಿಡ್ ದಾಳಿಗೆ ಒಳಗಾದ ಯುವತಿಗೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ನಾಗೇಶ್ ಬಾಬು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಗಾರ್ಮೆಂಟ್ಸ್ ನಡೆಸುತ್ತಿದ್ದನು. ಆರೋಪಿಯ ಬಂಧನಕ್ಕಾಗಿ 100ಕ್ಕೂ ಪೊಲೀಸರ ಏಳು ತಂಡಗಳನ್ನು ರಚನೆ ಮಾಡಲಾಗಿದೆ. ಘಟನೆ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿರುವ ಆರೋಪಿ ನಾಪತ್ತೆಯಾಗಿದ್ದಾನೆ. ಕೊನೆಯ ಬಾರಿ ಆರೋಪಿ ಟವರ್ ಲೊಕೇಶನ್ ಮೆಜಿಸ್ಟಿಕ್ ಬಳಿ ಪತ್ತೆಯಾಗಿದ್ದು, ಇಲ್ಲಿಂದಲೇ ಆಸಿಡ್ ನಾಗ ನಾಪತ್ತೆಯಾಗಿದ್ದಾನೆ.

ಆರೋಪಿ ಎಲ್ಲಿದ್ದಾನೆ?

ಬೈಕ್ ನಲ್ಲಿ ಮೆಜಿಸ್ಟಿಕ್ ಗೆ ಬಂದ ಆರೋಪಿ ನಾಗೇಶ್, ಸದ್ಯ ಎಲ್ಲಿದ್ದಾನೆ ಎಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲ. ಆರೋಪಿಯ ಫೋಟೋಗಳು ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Acid Attack: ಬೆಂಗಳೂರಿನ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ

ಆರೋಪಿಯ ಸೋದರ ಮತ್ತು ಸೋದರಿಯ ವಿಚಾರಣೆ

ಆರೋಪಿಯ ಸೋದರ ಮತ್ತು ಸೋದರಿಯನ್ನು ವಶಕ್ಕೆ ವಿಚಾರಣೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಳಿಕ ಆರೋಪಿ ಎಲ್ಲಿಯೂ ಡೆಬಿಟ್ ಕಾರ್ಡ್ ಬಳಸಿಲ್ಲ. ಆಸಿಡ್ ದಾಳಿಗೂ ಮುನ್ನ ತನ್ನ ಗಾರ್ಮೆಂಟ್ಸ್ ನಲ್ಲಿರುವ ಯಂತ್ರೋಪಕರಣಗಳನ್ನ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ತನ್ನ ವೇಷ ಬದಲಾಯಿಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬಾಬು ಏಳು ವರ್ಷಗಳಿಂದ ಮಹಿಳೆಯ ಚಿಕ್ಕಪ್ಪನ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದನು. ಕಳೆದ ಏಳು ವರ್ಷಗಳಿಂದ ಯುವತಿಯ ಹಿಂದೆ ಸುತ್ತುತ್ತಿದ್ದನು. ಆದ್ರೆ ಯುವತಿ ಈತನ ಪ್ರಸ್ತಾಪವನ್ನು ನಿರಾಕರಿಸಿದ್ದಳು.

ಯುವತಿ ಸಹೋದ್ಯೋಗಿಗಳ ಮುಂದೆ ಗಲಾಟೆ

ನಾಗೇಶ್ ತನ್ನ ಹಿಂದೆ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮನ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಆರೋಪಿಯ ಸೋದರನನ್ನು ಕರೆಸಿ ವಿಚಾರ ತಿಳಿಸಿ ತಮ್ಮನಿಗೆ ಬುದ್ಧಿ ಹೇಳುವಂತೆ ಹೇಳಿದ್ದರು. ಆದ್ರೂ ನಾಗೇಶ್ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಆಕೆಯ ಸಹೋದ್ಯೋಗಿಗಳ ಮುಂದೆ ಗಲಾಟೆ ಸಹ ಮಾಡಿದ್ದನು.

ಇದನ್ನೂ ಓದಿ:  Love is Blind: ಆ್ಯಸಿಡ್ ದಾಳಿಯಲ್ಲಿ ಶೇ. 80 ರಷ್ಟು ಸುಟ್ಟು ಹೋಗಿದ್ದ ಸಂತ್ರಸ್ತೆಗೆ ಬಾಳು ಕೊಟ್ಟ ಸಾಹು

ಸರ್ಕಾರದಿಂದ ಚಿಕಿತ್ಸಾ ವೆಚ್ಚ

ಯುವತಿ ದೇಹ ಶೇ.35ರಷ್ಟು ಬರ್ನ್ ಆಗಿದ್ದು, ಪರಿಸ್ಥಿತಿ ಸ್ವಲ್ಪ ಕ್ಲಿಷ್ಟವಾಗಿದೆ. ಆದರೂ ವೈದ್ಯರು ಭರವಸೆ ನೀಡಿದ್ದಾರೆ . ಆಕೆ‌ ಸಂಪೂರ್ಣ ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು. ಯುವತಿಯ ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಆಕೆಗೆ ಸರ್ಕಾರಿ ಉದ್ಯೋಗ ಕೊಡುವಂತಹದ್ದು ಆಗಬೇಕು. ಆ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಬರ್ನ್ಸ್ ವಿಚಾರವಾಗಿ ನಾವು ಒಂದೆರಡು ದಿನದಲ್ಲಿ ರಿಕವರಿ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಬಹಳ ಎಚ್ಚರಿಕೆಯಿಂದ ನಾವು ಚಿಕಿತ್ಸೆ ನೀಡಬೇಕು. ಒಂದು ವಾರದಲ್ಲಿ ಚೇತರಿಕೆ ಬಗ್ಗೆ ತಿಳಿದು ಬರುತ್ತವೆ. ಪೂರ್ಣ ಪ್ರಮಾಣದ ಚೇತರಿಕೆ ಕಾಣಲು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಸರ್ಕಾರದಿಂದ 5 ಲಕ್ಷ ರೂಗಳ ಪರಿಹಾರ ನೀಡಲಾಗುತ್ತದೆ. ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
Published by:Mahmadrafik K
First published: