Bengaluru: ಪೊಲೀಸಪ್ಪನ Bikeನ್ನೇ ಎಗರಿಸಿದ ಐನಾತಿ ಕಳ್ಳ: ನಮ್ಮ ಮೆಟ್ರೋ ಎಂಡಿ ಹೆಸರಿನಲ್ಲಿ ವಂಚನೆ; ಹುಡುಗಿ ವಿಚಾರಕ್ಕೆ ಕೊಲೆ

ಉಮೇಶ್ ಅವರು ಬ್ಯಾಂಕ್ ನೊಳಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಳ್ಳತನ (Bike Theft) ಮಾಡಲಾಗಿದೆ. ಉಮೇಶ್ KSRP 4ನೇ ಬೆಟಾಲಿಯನ್ ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿ(Bengaluru)ನಲ್ಲಿ ಐನಾತಿ ಕಳ್ಳನೋರ್ವ (Thieve) ಪೊಲೀಸ್ ಹೆಡ್ ಕಾನ್ಸ್ ಟೇಬಲ್ (Police Headconstable) ಉಮೇಶ್ ಎಂಬವರ ಬೈಕ್(Bike)ನ್ನೇ ಕದ್ದು ಎಸ್ಕೇಪ್ ಆಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿವೆ. ಫೆಬ್ರವರಿ 9 ರಂದು ಉಮೇಶ್ ಅವರು ಕೋರಮಂಗಲದ (Koramangala) ಮಹಾರಾಜ ಸಿಗ್ನಲ್ ಬಳಿ ಬೈಕ್ ನಿಲ್ಲಿಸಿದ್ದರು. ಉಮೇಶ್ ಅವರು ಬ್ಯಾಂಕ್ ನೊಳಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಳ್ಳತನ (Bike Theft) ಮಾಡಲಾಗಿದೆ. ಉಮೇಶ್ KSRP 4ನೇ ಬೆಟಾಲಿಯನ್ ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ. ಈ ಸಂಬಂಧ ಉಮೇಶ್ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಮ್ಮ ಮೆಟ್ರೋ ಎಂಡಿ ಹೆಸರಿನಲ್ಲಿ ವಂಚನೆ

ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜುಂ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ವಂಚನೆ ಬಗ್ಗೆ BMRCL ಪ್ರಧಾನ ವ್ಯವಸ್ಥಾಪಕ NR ವ್ಯಾಸರಾಜ್ ದೂರು ನೀಡಿದ್ದಾರೆ. ವ್ಯಾಸರಾಜ್ ಬಳಿ ಖದೀಮರು ಮೂರು ಲಕ್ಷ ರೂಪಾಯಿ ವಂಚಿಸಿದ್ದಾರೆ.

ಇದನ್ನೂ ಓದಿ:  Ukraine Crisis: ಬಾಂಬ್ ಬೀಳೋದು ಕಾಣ್ತಿತ್ತು, ಕತ್ತಲಲ್ಲು ಲೈಟ್ ಹಾಕದೆ ಕಾರ್ ಡ್ರೈವ್ ಮಾಡ್ಬೇಕಿತ್ತು, ಉಕ್ರೇನ್ ಸ್ಥಿತಿಯನ್ನು ಬಿಚ್ಚಿಟ್ಟ ಸುನೇಹಾ

ಮಾರ್ಚ್ 3ರಂದು ಅಜುಂ ಪರ್ವೇಜ್ ಹೆಸರಿನಲ್ಲಿ ವ್ಯಾಸರಾಜ್ ಅವರಿಗೆ ಮೇಲ್ ಬಂದಿದೆ. ಅಮೇಜಾನ್ ವೋಚರ್ ಹೆಸರಿನಲ್ಲಿ ಮೇಲ್ ಕಳುಹಿಸಲಾಗಿತ್ತು. ಮೇಲ್ ನಂಬಿದ ವ್ಯಾಸರಾಜ್ ಅವರು, ಅಲ್ಲಿ ಕೇಳಿದಂತೆ ತಮ್ಮ ವಾಟ್ಸಪ್ ನಂಬರ್, ಹೆಸರು ಕಳುಹಿಸಿದ್ದಾರೆ.

ನಂತರ ಅಜುಂ ಫರ್ವೇಜ್ ಹೆಸರಿನಲ್ಲಿ ವಾಟ್ಸಪ್ ಮಾಡಿದ ಖದೀಮರು ಲಿಂಕ್ ಕಳುಹಿಸಿದ್ದಾರೆ. ಇದೊಂದು ಅಮೇಜಾನ್ ವೋಚರ್ ಎಂದು ಹೇಳಿದ್ದರಿಂದ ವ್ಯಾಸರಾಜ್ ಲಿಂಕ್ ಓಪನ್ ಮಾಡಿದ್ದಾರೆ. ಲಿಂಕ್ ಓಪನ್ ಮಾಡುತ್ತಿದ್ದಂತೆ ಹಂತ ಹಂತವಾಗಿ ಮೂರು ಲಕ್ಷ ರೂಪಾಯಿ ಹಣವನ್ನ ಎಗರಿಸಿದ್ದಾರೆ.

ಅಜುಂ ಪರ್ವೇಜ್ ತಾವು ಯಾವುದೇ ಮೇಲ್ ಕಳಿಸಿಲ್ಲ ಎಂದು ಹೇಳಿದಾಗ ಮೋಸಕ್ಕೆ ಒಳಗಾಗಿರೋದು ಬೆಳಕಿಗೆ ಬಂದಿದೆ. ಕೂಡಲೇ ವ್ಯಾಸರಾಜ್, ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿ ವ್ಯಕ್ತಿಯ ಕೊಲೆ

ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಕೊಲೆ ನಡೆದಿದೆ. ಕೆ ಜಿ ಹಳ್ಳಿ ನಿವಾಸಿ ಮಹಮ್ಮದ್ ಉಸ್ಮಾನ್ ಕೊಲೆಯಾದ ವ್ಯಕ್ತಿ. ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಮೋಹಿನ್ ಮತ್ತು  ಉಸ್ಮಾನ್ ನಡುವೆ ರಾತ್ರಿ ಗಲಾಟೆ ಆಗಿತ್ತು.

ಗಲಾಟೆ ವಿಕೋಪಕ್ಕೆ ತಿರುಗಿಕೊಳ್ಳುತ್ತಿದ್ದಂತೆ ಮೋಹಿನ್ ತನ್ನ ಪಟಾಲಂನನ್ನು ಕರೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಉಸ್ಮಾನ್ ನನ್ನು ಕೊಲೆ ಮಾಡಲಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಗಿನ ಜಾವ ಕೊಲೆ ಅರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ದರು. ವಶಕ್ಕೆ ಪಡೆಯುವ ವೇಳೆ  ಪೊಲೀಸರ ಮೇಲೆ ಆಟ್ಯಾಕ್ ಮಾಡಲು ಮುಂದಾಗಿದ್ದಾರೆ. PSI ಗಳಾದ ರೂಮಾನ್ ಮತ್ತು ಆನಂದ್ ಮೇಲೆ ಹಲ್ಲೆಗೆ ಆರೋಪಿಗಳು ಸೂಚಿಸಿದ್ದರು.

ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗಳ ಕಾಲಿಗೆ ಗುಂಡೇಟು

ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು PSI ರೂಮಾನ್ ಸೂಚಿಸಿದ್ದಾರೆ. ಕೊನೆಗೆ ಸೈಯದ್ ಮೋಹಿನ್ ಮತ್ತು ಅದ್ನಾನ್ ಖಾನ್  ಕಾಲಿಗೆ ಗುಂಡೇಟು ಹೊಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಬ್ಬರ ಮಾಹಿತಿ ಆಧಾರದ ಮೇಲೆ ಇನ್ನುಳಿದ ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:  Mysuru: ಬಿಟ್ ಹೋಗಬೇಡ, ನನ್ನನ್ನ ಬಿಟ್ ಹೋಗಬೇಡ: ಕಣ್ಮುಂದೆ ಪತ್ನಿಯನ್ನ ಕರ್ಕೊಂಡು ಹೋದ್ರು: ಬಿಕ್ಕಿ ಬಿಕ್ಕಿ ಅತ್ತ ಪತಿ

ರಾತ್ರಿ ನಡೆದ ಕೊಲೆ ಪ್ರಕರಣವನ್ನು ಬೆಳಗಿನ ಜಾವದೊಳಗೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಬಂಧಿತ ಅರೋಪಿಗಳು. ಗುಂಡು ತಗಲಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Published by:Mahmadrafik K
First published: