HOME » NEWS » State » BENGALURU URBAN POLICE COMMISSION KAMAL PANT ORDERS ON GATHERING ON EIDULFITR DUE TO COVID SESR

Eid-ul-fitr: ಮನೆಯಲ್ಲಿಯೇ ಹಬ್ಬ ಆಚರಿಸಿ; ಸಾಮೂಹಿಕ ಪ್ರಾರ್ಥನೆ ಬೇಡ; ಕಮಲ್​ ಪಂತ್​ ಮನವಿ

ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಹಿನ್ನಲೆ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವಂತೆ ಕೋರಲಾಗಿದೆ.

news18-kannada
Updated:May 13, 2021, 9:41 PM IST
Eid-ul-fitr: ಮನೆಯಲ್ಲಿಯೇ ಹಬ್ಬ ಆಚರಿಸಿ; ಸಾಮೂಹಿಕ ಪ್ರಾರ್ಥನೆ ಬೇಡ; ಕಮಲ್​ ಪಂತ್​ ಮನವಿ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು (ಮೇ. 21) ಕೊರೋನಾ ಸೋಂಕು ಎಲ್ಲಾ ಹಬ್ಬ ಹರಿದಿನಗಳ ಸಮಾರಂಭದ ಮೇಲೆ ಕರಿಛಾಯೆ ಮೂಡಿಸಿದೆ. ಸೋಂಕಿನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿರುವ ಹಿನ್ನಲೆ ಈಗಾಗಲೇ ಹಲವು ಹಬ್ಬಗಳ ಸಂಭ್ರಮಕ್ಕೆ ತಡೆ ನೀಡಲಾಗಿದೆ. ಈಗ ಈದ್​ ಉಲ್​ ಫಿತರ್ ಹಬ್ಬಕ್ಕೂ ಕೂಡ ಸೋಂಕು ಅಡ್ಡಿಯಾಗಿದೆ. ಮುಸ್ಲಿಂರ ಪವಿತ್ರ ರಂಜಾನ್​ ತಿಂಗಳ ಉಪವಾಸದ ಕೊನೆಯ ದಿನದ ಹಬ್ಬ ಈದ್​ ಉಲ್​ ಫಿತರ್​ ಆಚರಣೆಗೆ ಈಗಾಗಲೇ ಸಿದ್ದತೆ ನಡೆಸಿದೆ. ಈ ಹಬ್ಬದಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗುವ ಮೂಲಕ ಪರಸ್ಪರ ಶುಭಾಶಯ ಕೋರುತ್ತಾರೆ.

ಆದರೆ ಈ ಬಾರಿ ಕೋವಿಡ್​ ಆತಂಕ ಎದುರಾಗಿದ್ದು, ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಹಿನ್ನಲೆ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವಂತೆ ಕೋರಲಾಗಿದೆ. ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದ್ದು, ಮನೆಯಲ್ಲಿಯೇ ನಮಾಜ್​ಗಳನ್ನು ಮಾಡಲು ಸೂಚನೆ ನೀಡಲಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​​, ಲಾಕ್​ ಡೌನ್ ನಿಯಮ ಜಾರಿಯಲ್ಲಿರುವುದರಿಂದ ಯಾರು ಮನೆಯಿಂದ ಹೊರ ಬರುವಂತಿಲ್ಲ. ಗುಂಪು ಸೇರುವಂತಿಲ್ಲ ಎಂದು ತಿಳಿಸಿದ್ದಾರೆ.




ಮನೆಯಲ್ಲಿಯೇ ಎಲ್ಲರೂ ಹಬ್ಬ ಆಚರಿಸಬೇಕು. ಈಗಾಗಲೇ ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಮುಸ್ಲಿಂ ಸಮುದಾಯಸ್ಥರು ಕೂಡ ಒಮ್ಮತದ ಸಮ್ಮತಿ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಇದನ್ನು ಓದಿ: ನಮ್ಮ ಇಮ್ಯೂನಿಟಿಯನ್ನೂ ಸೋಲಿಸುವ ತಾಕತ್ತು ಸೋಂಕಿಗೆ ಇದೆ; ಸಚಿವ ಬೊಮ್ಮಯಿ ಕಳವಳ

ಬೆಂಗಳೂರಿನಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದು,  ಗುಂಪು ಸೇರುವಂತಿಲ್ಲ. ಈ ಹಿನ್ನಲೆ ಎಲ್ಲರು ಅಗತ್ಯ ಮುನ್ನೆಚ್ಚರಿಕೆವಹಿಸಬೇಕು. ಈ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಭಟ್ಕಳದಲ್ಲಿ ಗುರುವಾರವೇ ಈದ್​ ಉಲ್​ ಫಿತರ್​ ಆಗಿಸಲಾಗಿದೆ. ಉಳಿದೆಲ್ಲೆಡೆ ಚಂದ್ರ ದರ್ಶನವಾಗದ ಹಿನ್ನಲೆ ಶುಕ್ರವಾರ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಈದ್​ ಉಲ್​ ಫಿತರ್​ ಹಬ್ಬದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಎಲ್​ಒಸಿ ಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಕೋವಿಡ್​ ನಿಯಮ ಪಾಲನೆಯನ್ನು ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ,
Published by: Seema R
First published: May 13, 2021, 9:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories