Coronavirus: ಕೊನೆಗೂ ಮಾರ್ಕೆಟ್​ನಲ್ಲಿ ಕಡಿಮೆಯಾದ ಜನಜಂಗುಳಿ, ವೈರಸ್ ಹರಡೋದನ್ನ ಇನ್ನಾದ್ರೂ ತಡೆಯಬಹುದಾ?

ಕೆ ಆರ್ ಮಾರ್ಕೆಟ್ ಸಂಪೂರ್ಣ ವಿಂಗಡಣೆ ಮಾಡಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅದೆಷ್ಟೇ ಬುದ್ಧಿವಾದ ಹೇಳಿದ್ರೂ ಕೇಳದ ಜನ ತಮ್ಮ ಪಾಡಿಗೆ ತಾವು ಗುಂಪು ಸೇರುತ್ತಲೇ ಇದ್ರು. ಲಾಠಿ ಚಾರ್ಜ್​ಗೂ ಹೆದರದೆ ಮನೆಯಿಂದ ಹೊರಬಂದು ಮಾರ್ಕೆಟ್​ನಲ್ಲಿ ಗುಂಪುಗೂಡುತ್ತಿದ್ರು.

ಕೆ ಆರ್ ಮಾರ್ಕೆಟ್ ಖಾಲಿ

ಕೆ ಆರ್ ಮಾರ್ಕೆಟ್ ಖಾಲಿ

  • Share this:
ಬೆಂಗಳೂರು(ಮೇ 15): ಇಷ್ಟು ದಿನಗಳ ನಂತರ ಕೊನೆಗೂ ಬೆಂಗಳೂರು ಪೋಲೀಸರು ಮತ್ತು ಬಿಬಿಎಂಪಿ ಈ ಒಂದು ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಕೆ ಆರ್ ಮಾರ್ಕೆಟ್ ನಲ್ಲಿ ಜನಜಂಗುಳಿ ಕಡಿಮೆ ಮಾಡುವಲ್ಲಿ ಗೆದ್ದಿದ್ದಾರೆ. ಕೆ ಆರ್ ಮಾರ್ಕೆಟ್ ಸಂಪೂರ್ಣ ವಿಂಗಡಣೆ ಮಾಡಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅದೆಷ್ಟೇ ಬುದ್ಧಿವಾದ ಹೇಳಿದ್ರೂ ಕೇಳದ ಜನ ತಮ್ಮ ಪಾಡಿಗೆ ತಾವು ಗುಂಪು ಸೇರುತ್ತಲೇ ಇದ್ರು. ಲಾಠಿ ಚಾರ್ಜ್​ಗೂ ಹೆದರದೆ ಮನೆಯಿಂದ ಹೊರಬಂದು ಮಾರ್ಕೆಟ್​ನಲ್ಲಿ ಗುಂಪುಗೂಡುತ್ತಿದ್ರು.

ಕೆಲ ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮತ್ತು ನಗರ ಪೋಲೀಸ್ ಆಯುಕ್ತ ಕಮಲ್ ಪಂತ್ ಜಂಟಿಯಾಗಿ ಸಭೆ ನಡೆಸಿ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ರು. ಅದರ ಪರಿಣಾಮವಾಗಿ ಮಾರುಕಟ್ಟೆಯನ್ನು ವಿವಿಧ ವಿಭಾಗಗಳಾಗಿ ವಿಂಗಡನೆ ಮಾಡಲಾಯಿತು. ತರಕಾರಿ ಸೊಪ್ಪು ಹೂವು ವ್ಯಾಪಾರ ವಿಂಗಡಣೆ ಮಾಡಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಯ್ತು. ಪ್ರಮುಖ ತರಕಾರಿ ಮತ್ತು ಹಣ್ಣಿನ ವ್ಯಾಪಾರವನ್ನು ಎಲೆಕ್ಟ್ರಾನಿಕ್ ಸಿಟಿಗೆ ವರ್ಗಾಯಿಸಲಾಯ್ತು.

ಪ್ರತಿ ರಸ್ತೆಯಲ್ಲಿ ಐದರಿಂದ ಹತ್ತು ತರಕಾರಿ ಮತ್ತು ಸೊಪ್ಪು ಅಂಗಡಿ ತೆರೆಯಲು ಮಾತ್ರ ಅವಕಾಶ ಕಲ್ಪಿಸಲಾಯಿತು. ಇದರ ಪರಿಣಾಮ ಮೈಸೂರು ರಸ್ತೆ ಹಾಗೂ ಚಾಮರಾಜಪೇಟೆಯಲ್ಲಿ ರಸ್ತೆ ಬದಿ ಅಂಗಡಿಗಳು ತೆರೆದವು. ಒಂದೇ ಕಡೆ ಅಂಗಡಿ ತೆರೆಯದಂತೆ ಸೂಚನೆ ನೀಡಿ ಪೋಲೀಸರು ಕಾವಲು ನಿಂತರು. ಅಂಗಡಿಗಳನ್ನ ರಸ್ತೆ ರಸ್ತೆಗೆ ವಿಂಗಡಣೆ ಮಾಡಿದ್ದರಿಂದ ಕೆ ಆರ್ ಮಾರ್ಕೆಟ್ ಸುತ್ತಮುತ್ತ ಜನಜಂಗುಳಿ ಕಡಿಮೆಯಾಯ್ತು.

ಸದ್ಯ ಕೆ ಆರ್ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೂವಿನ ಮಾರುಕಟ್ಟೆಯನ್ನೂ ಎಸ್​ಜೆಪಿ ರಸ್ತೆಗೆ ಶಿಫ್ಟ್ ಮಾಡಲಾಗಿದ್ದು ಅದು ಬೆಳಗ್ಗೆ 9 ಗಂಟೆಯವರಗೆ ಮಾತ್ರ ಅವಕಾಶವಿದೆ. ಈ ಎಲ್ಲಾ ಬದಲಾವಣೆಗಳಿಂದಾಗಿ ಮಾರುಕಟ್ಟೆಯಲ್ಲಿ ಜನ ಸುಖಾಸುಮ್ಮನೆ ಗುಂಪುಗೂಡೋದು ತಪ್ಪಿದಂತಾಗಿದೆ.
Published by:Soumya KN
First published: