ಕೊರೋನಾ ಕಷ್ಟ ಕಾಲದಲ್ಲಿ ಸ್ವಯಂ ಸೇವಕರಾಗಿ ಸರ್ಕಾರದ ಜೊತೆ ಕೈ ಜೋಡಿಸಿ- ಸಚಿವ ಸುಧಾಕರ್

ಸ್ವಯಂಸೇವಕರಾಗಿ ನೆರವಾಗುವವರಿಗೆ ಅಗತ್ಯ ಇದ್ದರೆ ಭತ್ಯೆಯನ್ನೂ ಕೂಡಲಾಗುವುದು. ವಿಶೇಷ ಸರ್ಟಿಫಿಕೇಟ್ ಕೂಡ ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ಡಾ. ಕೆ ಸುಧಾಕರ್.

ಡಾ. ಕೆ ಸುಧಾಕರ್.

 • Share this:
  ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದೆ. ಆಕ್ಸಿಜನ್​ ಕೊರತೆ, ರೆಮ್​ಡಿಸಿವರ್​​ ಲಭ್ಯವಾಗದ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್​, ರೆಮ್​​ಡಿಸಿವರ್-ಆಕ್ಸಿಜನ್ ಸರಬರಾಜು ಬಗ್ಗೆ ಪಾನಾ ಜೊತೆ ಮಾತನಾಡಲಾಗಿದೆ. ಕೇಂದ್ರದಿಂದ 1ಲಕ್ಷ 22 ಸಾವಿರ ಅಲಾಟ್ ಆಗಿದೆ. ಇನ್ನು ಕೊರೋನಾ ಭೀತಿಯಲ್ಲಿ ಎಲ್ಲರೂ ರೆಮ್​​ಡಿಸಿವರ್ ತೆಗೆದುಕೊಳ್ಳುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಆಕ್ಸಿಜನ್ ಬೇಕು ಅಂದರೆ ಇನ್ಮುಂದೆ ಆನ್ ಲೈನ್ ನಲ್ಲಿ ಸಿಗುತ್ತೆ. ಜೊತೆಗೆ ರೆಮ್​​ಡಿಸಿವರ್​ಗಾಗಿಯೂ ಆನ್ ಲೈನ್ ನಲ್ಲಿ ಸಲ್ಲಿಸಬಹುದು. ಇವತ್ತು ರಾತ್ರಿಯಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

  ಇಷ್ಟನ್ನೂ ಮೀರಿ ಕಾಳಸಂತೆಯಲ್ಲಿ ರೆಮ್​​ಡಿಸಿವರ್, ಆಕ್ಸಿಜನ್​ ಸಿಲಿಂಡರ್​ ಮಾರಾಟ ಕಂಡು ಬಂದರೆ ಕಠಿಣ ಶಿಕ್ಷೆ ಆಗುತ್ತೆ ಎಂದು ಸಚಿವರು ಎಚ್ಚರಿಸಿದರು. ಬೆಳಗ್ಗೆಯಿಂದ ಅನೇಕ ಸಭೆಗಳನ್ನ ಮಾಡಿದ್ದೇವೆ. ಅದರಲ್ಲಿ ಅರೋಗ್ಯ ಆಪ್ತಮಿತ್ರ ಅ್ಯಪ್ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಕಳೆದ ವರ್ಷ ಆ್ಯಪನ್ನು ಆರಂಭ ಮಾಡಿದ್ದೆವು. ಆದರೆ ಸೋಂಕಿನ ಪ್ರಮಾಣ ಕಡಿಮೆಯಾದಾಗ ಅದನ್ನು ವಾಪಸ್​ ಪಡೆದಿದ್ದೆವು. ಈಗ ಪುನಃ ಅರಂಭ ಮಾಡಿದ್ದು ಇದರ ಮೂಲಕ ಸೋಂಕಿತರಿಗೆ ಪೋನ್ ಹೋಗುತ್ತೆ.

  ಪಾಸಿಟಿವ್ ಬಂದ ಮೇಲೆ 3ರಿಂದ 4 ಗಂಟೆ ಒಳಗೆ ಸೋಂಕಿತರಿಗೆ ಆಪ್ತಮಿತ್ರದಿಂದ ಫೋನ್​ ಹೋಗುತ್ತೆ. ವೈದ್ಯಕೀಯ ಹಿನ್ನೆಲೆಯುಳ್ಳ, ಪದವೀಧರರು ಕರೆ ಮಾಡಿ ಸೋಂಕಿತರನ್ನು ರೋಗ ಲಕ್ಷಣಗಳು , ವಯಸ್ಸು,  ವಿಳಾಸ,  ಇತರೆ ಕಾಯಿಲೆಗಳಿಗೆ ಅನುಸಾರವಾಗಿ ವಿಂಗಡಣೆ ಮಾಡುತ್ತಾರೆ. ನಾಟ್ ಟ್ರೇಸಬಲ್ ಕೇಸ್ ಗಳನ್ನ ಪೊಲೀಸರಿಗೆ ನೀಡುತ್ತೇವೆ. ಕಳೆದ ಬಾರಿಯೂ ಪೊಲೀಸರಿಗೆ ನೀಡಲಾಗಿತ್ತು. ಇದರಿಂದ ಶೇ.80ರಷ್ಟು ಸೋಂಕಿತರನ್ನು ಟ್ರೇಸ್ ಮಾಡಬಹುದು. ಬೆಂಗಳೂರಿನಲ್ಲಿ 8 ಜೋನ್​ಗಳಿದ್ದು, ಆಯಾ ವಲಯಗಳಿಗೆ ನಂಬರ್ ನೀಡುತ್ತಾರೆ ಎಂದು ತಿಳಿಸಿದರು.

  ಇದನ್ನೂ ಓದಿ: DK Shivakumar: ಲಸಿಕೆಗಾಗಿ ಹಳ್ಳಿ ಜನ ಹೇಗೆ ಆನ್​​ಲೈನ್​ ಮೂಲಕ ನೋಂದಣಿ ಮಾಡಿಕೊಳ್ತಾರೆ? - ಡಿಕೆಶಿ ಟೀಕೆ

  ಸೋಂಕಿತರಿಗೆ ಹೋಂ ಐಸೋಲೇಷನ್ ಬಹಳ ಮುಖ್ಯ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲು ಒಬ್ಬ ಕೆಎಎಸ್ ಅಧಿಕಾರಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಾರೆ. ನಾಳೆಯಿಂದ ವೆಬ್ ಪೋರ್ಟಲ್ ಪ್ರಾರಂಭ ಮಾಡುತ್ತಿದ್ದೇವೆ. ಡೆಂಟಿಸ್ಟ್ ಗಳು, ನಿವೃತ್ತ ವೈದ್ಯರು, ಪದವೀಧರರು ಕೂಡ ಸಹಾಯ ಮಾಡುತ್ತೇವೆ ಎಂದು ಕೇಳಿಕೊಂಡಿದ್ದಾರೆ. ರಾಜ್ಯದ ಜನತೆಗೆ ನಾಳೆಯಿಂದ ಪ್ರಕಟಣೆ ಹೊರಡಿಸುತ್ತೇವೆ. ನಿವೃತ್ತ ವೈದ್ಯರು, ವಾಲೆಂಟಿಯರ್ಸ್ ಆಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನೀವು ಇರುವ ಸ್ಥಳದಿಂದಲೇ ಕೋವಿಡ್ ಪೇಷಂಟ್ ಗಳಿಗೆ ನೆರವಾಗಬಹುದು. ನಮ್ಮ ಜನರಿಗೆ ಅಳಿಲು ಸೇವೆ ಮಾಡಬೇಕು. ಕೋವಿಡ್ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುವುದ್ದಕ್ಕೂ ಅವಕಾಶವಿದೆ. ಮನೆಗಳಿಗೆ ತೆರಳಿ ರೋಗಿಗಳನ್ನು ಪರಿಶೀಲಿಸಲೂಬಹುದು.

  ಸ್ವಯಂಸೇವಕರಾಗಿ ನೆರವಾಗುವವರಿಗೆ ಅಗತ್ಯ ಇದ್ದರೆ ಭತ್ಯೆಯನ್ನೂ ಕೂಡಲಾಗುವುದು. ವಿಶೇಷ ಸರ್ಟಿಫಿಕೇಟ್ ಕೂಡ ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್​ ತಿಳಿಸಿದರು. ಯಾರಿಗೆಲ್ಲ ಆಸಕ್ತಿ ಇದೆ ಅಂಥ ಪದವೀಧರರು ನೋಂದಾಯಿಸಿಕೊಳ್ಳಬಹುದು. ಯಾವುದೇ ಪದವಿ ಪಡೆದವರು ಕೂಡ ನೋಂದಾಯಿಸಿಕೊಂಡು ವಿವಿಧ ರೀತಿಯಲ್ಲಿ ನೆರವಾಗಬಹುದು ಎಂದು ತಿಳಿಸಿದರು.
  Published by:Kavya V
  First published: