Bengaluru: ರಾಜಧಾನಿಯಲ್ಲಿ ಮತ್ತೆ ಉದ್ಭವಿಸಲಿದೆಯಾ ಕಸದ ಸಮಸ್ಯೆ! ಇಲ್ಲಿ ತ್ಯಾಜ್ಯ ವಿಸರ್ಜನೆಗೆ ಭಾರೀ ವಿರೋಧ
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕಸವನ್ನ ತಂದು ಬಿಡದಿ ಪಟ್ಟಣದಲ್ಲಿ ಡಂಪ್ ಮಾಡಲಾಗ್ತಿದೆ. ಬೆಂಗಳೂರಿನಲ್ಲಿ ಜಾಗವಿಲ್ಲದ ಕಾರಣ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಬೆಂಗಳೂರಿನ ಕಸ ಸೇರುತ್ತಿದೆ.
ರಾಮಗನರ: ಬಿಡದಿ (Bidadi) ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ (Swachh Bharat Abhiyan) ಎಂಬುದು ಮರಿಚಿಕೆಯಾಗಿದೆ. ಪುರಸಭೆ ಅಧಿಕಾರಿಗಳ (Officers) ದಿವ್ಯ ನಿರ್ಲಕ್ಷ್ಯ ಮತ್ತು ತಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡಿರುವ ಕೆಲವು ನಿವಾಸಿಗಳಿಂದಾಗಿ ಬಿಡದಿ ಪಟ್ಟಣದ ಬಹುತೇಕ ಬಡಾವಣೆಗಳು ಗಬ್ಬೆದ್ದು ಹೋಗಿದೆ. ಬಹುತೇಕ ಎಲ್ಲ ಬಡಾವಣೆಗಳಲ್ಲೂ ಟನ್ಗಟ್ಟಲೆ ತ್ಯಾಜ್ಯ (Waste) ವಿಲೇವಾರಿಯಾಗದೆ ರಸ್ತೆ (Road) ಬದಿಯಲ್ಲಿ ಶೇಖರಣೆ ಯಾಗುತ್ತಿದೆ. ತ್ಯಾಜ್ಯ ಕೊಳೆತು ನಾರುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಆದರೆ ಪುರಸಭೆಯ ಅಧಿಕಾರಿಗಳು ತ್ಯಾಜ್ಯವನ್ನು ವಿಲೇವಾರಿ ಮಾಡದೆ ಇದು ತಮ್ಮ ಹೊಣೆ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ
ಇದು ರಸ್ತೆಯೋ, ತಿಪ್ಪೆ ಗುಂಡಿಯೋ!?
ಇನ್ನೊಂದೆಡೆ ರಸ್ತೆ ಬದಿಯನ್ನು ತಿಪ್ಪೆ ಯನ್ನಾಗಿಸಿಕೊಂಡಿರುವ ನಾಗರಿಕರು ಗೃಹ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಇನ್ನು ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕಸವನ್ನ ತಂದು ಬಿಡದಿ ಪಟ್ಟಣದಲ್ಲಿ ಡಂಪ್ ಮಾಡಲಾಗ್ತಿದೆ. ಬೆಂಗಳೂರಿನಲ್ಲಿ ಜಾಗವಿಲ್ಲದ ಕಾರಣ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಬೆಂಗಳೂರಿನ ಕಸ ಸೇರುತ್ತಿದೆ. ಈ ವಿಚಾರವಾಗಿ ಹಲವು ಬಾರಿ ದೂರು ಬಂದಿದ್ದರೂ ಸಹ ಯಾವುದೇ ಪ್ರಯೋಜನ ಇಲ್ಲ.
ವಾರವಾದರೂ ವಿಲೇವಾರಿಯಾಗದ ತ್ಯಾಜ್ಯ
ಬಿಡದಿಯ ಪ್ರತಿಷ್ಠಿತ ಬಡಾವಣೆಗಳ ಪೈಕಿ ಒಂದು ಯೋಗೇಶ್ವರ್ ಲೇಔಟ್ನ ಮುಖ್ಯ ರಸ್ತೆಯಲ್ಲಿ ವಾರ ಕಳೆದರೂ ತ್ಯಾಜ್ಯ ರಾಶಿ ವಿಲೇವಾರಿ ಆಗಿಲ್ಲ. ಇಲ್ಲಿನ ಕೆಲವು ನಿವಾಸಿಗಳು ಸಹ ತಮ್ಮ ಹೊಣೆ ಮರೆತು ಇಲ್ಲಿ ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದ್ದಾರೆ. ತ್ಯಾಜ್ಯ ಈಗ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ್ದು, ಪಾದಚಾರಿಗಳು ತ್ಯಾಜ್ಯವನ್ನು ತುಳಿದೇ ಹೋಗಬೇಕಾಗಿದೆ.
ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸ ಭೆ ವಾಹನಗಳಿಗೆ ಕೊಡಬೇಕಾದದ್ದು ನಾಗರಿಕರ ಕರ್ತವ್ಯ. ಪುರಸಭೆಯ ವಾಹನ ಬರದಿದ್ದರೆ ಅಧಿಕಾರಿಗಳಿಗೆ ತಿಳಿಸಿ ವಾಹನ ಕರೆಸಿಕೊಂಡು ತ್ಯಾಜ್ಯ ಕೊಡ ಬೇಕು. ಆದರೆ ಇಲ್ಲಿರುವ ಪ್ರಜ್ಞಾವಂತ ನಾಗರಿಕರು ಸಹ ತಮ್ಮ ಹೊಣೆ ಮರೆತು ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿಯುತ್ತಿದ್ದಾರೆ.
ಕುಂಟು ನೆಪ ಹೇಳುತ್ತಿರುವ ಪುರಸಭೆ ಅಧಿಕಾರಿಗಳು
ಬಳಸಲು ಅಯೋಗ್ಯವಾದ ಹಾಸಿಗೆಗಳನ್ನು ತಂದು ರಸ್ತೆಯಲ್ಲಿ ಬಿಸಾಡಿ ಹೋಗಿರುವು ದನ್ನು ಇಲ್ಲಿ ಕಾಣಬಹುದು. ಬಿಡದಿ ಪುರಸಭೆಯ ಅಧಿಕಾರಿಗಳು ಕಸ ವಿಲೇವಾರಿಗೆ ಸ್ಥಳ ಇಲ್ಲ ಎಂಬ ನೆಪ ಹೇಳದೆ, ತಕ್ಷಣ ರಸ್ತೆ ಬದಿಗಳಲ್ಲಿ ಶೇಖರಣೆ ಆಗಿರುವ ತ್ಯಾಜ್ಯವನ್ನು ತೆರವುಗೊಳಿಸ ಬೇಕು. ನಾಗರಿಕರು ಪುರಸಭೆಯ ವಾಹನಗಳಿಗೆ ತ್ಯಾಜ್ಯ ಕೊಟ್ಟು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು ಎಂಬುದು ಬಿಡದಿಯ ಬಹುತೇಕ ನಾಗರೀಕರ ಅಭಿಪ್ರಾಯ ಆಗಿದೆ.
ಇಲ್ಲಿ ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ
ಯೋಗೇಶ್ವರ್ ಬಡಾವಣೆಯಲ್ಲಿ ಕಳೆದ ಒಂದು ವಾರದಿಂದ ಶೇಖರಣೆ ಆಗಿರುವ ತ್ಯಾಜ್ಯ ತೆರವಾಗಿಲ್ಲ. ತ್ಯಾಜ್ಯ ಕೊಳೆತು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು ತಕ್ಷಣ ಈ ಸಮಸ್ಯೆಯತ್ತ ಗಮನಹರಿಸಿ ತ್ಯಾಜ್ಯ ತೆರವುಗೊಳಿಸಬೇಕಿದೆ.
ರಾಜಧಾನಿ ಬೆಂಗಳೂರಿನಿಂದ ಬರುತ್ತಿದೆ ಕಸದ ರಾಶಿ
ಇನ್ನು ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕಸವನ್ನ ತಂದು ಬಿಡದಿ ಪಟ್ಟಣದಲ್ಲಿ ಡಂಪ್ ಮಾಡಲಾಗ್ತಿದೆ. ಬೆಂಗಳೂರಿನಲ್ಲಿ ಜಾಗವಿಲ್ಲದ ಕಾರಣ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಬೆಂಗಳೂರಿನ ಕಸ ಸೇರುತ್ತಿದೆ. ಇದರಿಂದಲೂ ಸಹ ಇಲ್ಲಿನ ಪ್ರದೇಶ ಕೊಳೆತು ನಾರುವಂತಾಗಿದೆ.
ಈ ವಿಚಾರವಾಗಿ ಹಲವು ಬಾರಿ ದೂರು ಬಂದಿದ್ದರೂ ಸಹ ಯಾವುದೇ ಪ್ರಯೋಜನ ಇಲ್ಲ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ವರ್ಗ ಸಹ ಯಾವುದೇ ಕ್ರಮವಹಿಸದ ಹಿನ್ನೆಲೆ ಬಿಡದಿ ಪಟ್ಟಣ ಸಂಪೂರ್ಣ ಹಾಳಾಗಿದೆ. ಹಾಗಾಗಿ ಸಮಸ್ಯೆ ಬಗೆಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.