Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಸಾಧ್ಯತೆ

Bengaluru Power Cut : ಎಚ್ ಬಿ ಆರ್ 4 ನೇ ಬ್ಲಾಕ್​ ಸೇರಿದಂತೆ 5 ನೇ ಬ್ಲಾಕ್, ಪ್ರಶಾಂತ್ ನಗರ, ಟಿ ದಾಸರಹಳ್ಳಿ, ಹೆಣ್ಣೂರು ಕ್ರಾಸ್, ಕಲ್ಯಾಣ್ ನಗರ, ಚಿಕ್ಕಬಾಣಾವರ, ಗುಟ್ಟೆಯ ಸುತ್ತ ಮುತ್ತಲಿನ ಏರಿಯಾಗಳಲ್ಲಿಪವರ್ ಕಟ್ ಆಗಲಿದೆ  ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಿಂದ(Rainfall) ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ (Power Cut)ಮಾಡುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಒಂದೆಲ್ಲ ಒಂದು ಏರಿಯಾದಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಿದೆ. ಇಂದೂ ಕೂಡ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

 ಯಾವ್ಯವ ಪ್ರದೇಶಗಳಲ್ಲಿ ಪವರ್ ಕಟ್ ?

ವಿಜಯ್ ಬ್ಯಾಂಕ್ ಲೇಔಟ್ ,ಅರೆಕೆರೆ ಮೇನ್ ರೋಡ್, ಸಾರ್ವಭೌಮ ನಗರ, ಹಳೆಯ ಮಂಗಮ್ಮನ ಪಾಳ್ಯ ರಸ್ತೆ, ಯೆಲ್ಲಕುಂಟೆಯ ಭಾಗ, ಐಟಿಐ ಲೇಔಟ್, ಕುಮಾರಸ್ವಾಮಿ ಲೇಔಟ್, ಇ ಬಸ್ ನಿಲ್ದಾಣ ಹಾಗೂ 66, 67 ನೇ ಅಡ್ಡ ರಸ್ತೆ, ಇಸ್ರೋ ಲೇಔಟ್, ಪೈಪ್ ಲೈನ್, 1 ನೇ ಹಂತದ ಭಾಗ, 14 ನೇ ಮುಖ್ಯ ರಸ್ತೆ, ಆದರ್ಶ ನಗರ, ಕಾವಲ್ ಬೈರಸಂದ್ರ, ಆರ್ ಕೆ ಹೆಗ್ಡೆ ನಗರ, ಜಕ್ಕೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸೂಚನೆ ನೀಡಿದೆ.

ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ರೋಜಿ ಪುರ, ಚಿಕ್ ಪೇಟೆ, ಕುಂಬಾರಪೇಟೆ, ಮಾರುತಿ ನಗರ, ರಾಜೀವ್ ಗಾಂಧಿ ಬಡಾವಣೆ ನಗರ, ಫರ್ನ್ಸ್ ರೆಸಿಡೆನ್ಸಿ, ಕೃಷ್ಣ ಜಯಂತಿ ಕಾಲೇಜಿನ ಹಾಗೂ  ಬ್ರದರ್ಸ್ ಕಾಲೋನಿ, ಗುಟ್ಟೆ ಬಸವೇಶ್ವರ ನಗರ, ಬಸವನಪುರ, ಬೆಗೂರ್, ತಲಘಟ್ಟಪುರ, ಸಿದ್ದಾಪುರ, ಲಾಲ್‌ಬಾಗ್, ಜಯನಗರ 1 ನೇ ಬ್ಲಾಕ್, ಎಚ್ ಬಿ ಆರ್ 4 ನೇ ಬ್ಲಾಕ್​ ಸೇರಿದಂತೆ 5 ನೇ ಬ್ಲಾಕ್, ಪ್ರಶಾಂತ್ ನಗರ, ಟಿ ದಾಸರಹಳ್ಳಿ, ಹೆಣ್ಣೂರು ಕ್ರಾಸ್, ಕಲ್ಯಾಣ್ ನಗರ, ಚಿಕ್ಕಬಾಣಾವರ, ಗುಟ್ಟೆಯ ಸುತ್ತ ಮುತ್ತಲಿನ ಏರಿಯಾಗಳಲ್ಲಿಪವರ್ ಕಟ್ ಆಗಲಿದೆ  ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಸ್ಕಾಂ ನಡೆಗೆ ಜನರ ಆಕ್ರೋಶ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಇದನ್ನೂ ಓದಿ: ತಾರಸಿ ಮೇಲೊಂದು ಸುಂದರ ತಾವರೆ ತೋಟ ನಿರ್ಮಿಸಿದ ಮಂಗಳೂರಿನ ಸಹಾಯಕ ಪ್ರಾಧ್ಯಾಪಕಿ!

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Sandhya M
First published: