CoronaVirus: ಎಷ್ಟು ಹೇಳಿದ್ರೂ ಅಷ್ಟೇ… ಕೊರೊನಾ ರೂಲ್ಸ್ ಮನೆಯಲ್ಲೇ ಬಿಟ್ಟು ಮಾರ್ಕೆಟ್​​ಗೆ ಬರ್ತಿದ್ದಾರೆ ಜನ…ಹೂವಿನ ಮಾರ್ಕೆಟ್ ಫುಲ್ ರಶ್ !

ಬೆಳಗ್ಗೆ 5 ಗಂಟೆಯಿಂದಲೇ ಎಸ್ ಪಿ ರಸ್ತೆಯ ಎರಡು ಬದಿಯಲ್ಲಿ ಹೂವಿನ ಅಂಗಡಿ ತೆರೆದು ವ್ಯಾಪಾರ ನಡೆಸಲಾಗುತ್ತಿದ್ದು ಎಂದಿನಂತೆ ಜನಜಂಗುಳಿ ಇದೆ. ಕೊರೊನಾ ನಿಯಮಗಳು ತಮಗಲ್ಲ ಎನ್ನುವಂತೆ ಹೂವು ಖರೀದಿಸಲು ಜನ ಜಾತ್ರೆಯಂತೆ ಸೇರಿದ್ದಾರೆ. ಕೆ ಆರ್ ಮಾರ್ಕೆಟ್ ಬಸ್ ನಿಲ್ದಾಣದಿಂದ ಎಸ್ ಜೆ ಪಾರ್ಕ್ ವರೆಗೆ ಜನಸಂದಣಿ ಇದೆ.

ಎಸ್​​ಪಿ ರಸ್ತೆಯಲ್ಲಿ ಹೂವಿನ ಮಾರ್ಕೆಟ್

ಎಸ್​​ಪಿ ರಸ್ತೆಯಲ್ಲಿ ಹೂವಿನ ಮಾರ್ಕೆಟ್

  • Share this:
ಬೆಂಗಳೂರು (ಮೇ 06): ಕೊರೊನಾ ಆರ್ಭಟ ಕರ್ನಾಟಕದಲ್ಲಿ ಮಿತಿಮೀರಿದೆ. ಅರ್ಧ ಲಕ್ಷದಷ್ಟು ಜನರಿಗೆ ನಿನ್ನೆ ಒಂದೇ ದಿನ ಸೋಂಕು ತಗುಲಿದ್ದು ಎಲ್ಲೆಡೆ ಆತಂಕದ ವಾತಾವರಣವಿದೆ. ಆದರೂ ಯಾಕೋ ಬೆಂಗಳೂರಿನ ಜನ ಬುದ್ಧಿ ಕಲಿತಂತೆ ಕಾಣುವುದಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡಾ ಹೂವಿನ ಮಾರುಕಟ್ಟೆಯಲ್ಲಿ ವಿಪರೀತ ಜನಜಂಗುಳಿ ಇದೆ.

ಕೆ ಆರ್ ಮಾರುಕಟ್ಟೆಯನ್ನು ಬಿಬಿಎಂಪಿ ಆದೇಶದ ಮೇರೆಗೆ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ತರಕಾರಿ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಹೂವಿನ ಮಾರುಕಟ್ಟೆಯನ್ನು ಅಲ್ಲೇ ಬಳಿಯಲ್ಲಿರುವ eಸ್​ಪಿ ರಸ್ತೆಗೆ ಶಿಫ್ಟ್ ಮಾಡಲಾಗಿದೆ. ಎಸ್​ಪಿ ರಸ್ತೆಯಲ್ಲಿ ಇಂದು ಬೆಳಗ್ಗಿನಿಂದಲೇ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

ಇಂದು ಬೆಳಗ್ಗೆ 5 ಗಂಟೆಯಿಂದಲೇ ಎಸ್ ಪಿ ರಸ್ತೆಯ ಎರಡು ಬದಿಯಲ್ಲಿ ಹೂವಿನ ಅಂಗಡಿ ತೆರೆದು ವ್ಯಾಪಾರ ನಡೆಸಲಾಗುತ್ತಿದ್ದು ಎಂದಿನಂತೆ ಜನಜಂಗುಳಿ ಇದೆ. ಕೊರೊನಾ ನಿಯಮಗಳು ತಮಗಲ್ಲ ಎನ್ನುವಂತೆ ಹೂವು ಖರೀದಿಸಲು ಜನ ಜಾತ್ರೆಯಂತೆ ಸೇರಿದ್ದಾರೆ. ಕೆ ಆರ್ ಮಾರ್ಕೆಟ್ ಬಸ್ ನಿಲ್ದಾಣದಿಂದ ಎಸ್ ಜೆ ಪಾರ್ಕ್ ವರೆಗೆ ಜನಸಂದಣಿ ಇದೆ.

ಮಾಸ್ಕ್ ಇದ್ದರೆ ಸಾಮಾಜಿಕ ಅಂತರವಿಲ್ಲ, ಸಾಮಾಜಿಕ ಅಂತರವಿದ್ದರೆ ಮಾಸ್ಕ್ ಇಲ್ಲ ಎನ್ನುವಂಥಾ ಪರಿಸ್ಥಿತಿ ಇಲ್ಲಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಿಂಡು ಹಿಂಡಾಗಿ ಓಡಾಡಿಕೊಂಡು ಗುಂಪಾಗಿ ನಿಂತು ಜನ ವ್ಯಾಪಾರ ಮಾಡುತ್ತಿದ್ದಾರೆ. ಈ‌ ನಡುವೆ ಮಾರ್ಕೆಟ್ ನಲ್ಲಿ ಪೊಲೀಸರು ಮತ್ತು ಮಾರ್ಷಲ್ ಗಳ ರೌಂಡ್ಸ್ ಕೂಡಾ ನಡೆಯುತ್ತಿದೆ. ಆದ್ರೆ ಅವರ ಯಾವ ಎಚ್ಚರಿಕೆಗಳಿಗೂ ಜನ ಕಿವಿಗೊಡುತ್ತಿಲ್ಲ. ಎಷ್ಟೇ ಎಚ್ಚರಿಕೆ ಕೊಟ್ಟರು ಮೂಗು ಬಿಟ್ಟು ಮಾಸ್ಕ್ ಹಾಕಿ ವ್ಯಾಪಾರ ಮಾಡೋರೆ ಜಾಸ್ತಿಯಾಗಿದ್ದಾರೆ. ಒಂದು ರೀತಿಯಲ್ಲಿ ವ್ಯಾಪಾರದ ಸ್ಥಳಗಳು ಕೊರೊನಾ ಹರಡುವ ಕೇಂದ್ರಸ್ಥಳಗಳಾಗಿ ಬದಲಾಗಿವೆ.
Published by:Soumya KN
First published: