Bengaluru Parking: ಬೆಂಗಳೂರಿನಲ್ಲಿನ್ನು ವಾಹನ ಪಾರ್ಕಿಂಗ್​ಗೆ ಸೂಪರ್ ವ್ಯವಸ್ಥೆ!

ಕೊರೋನಾ ನಂತರ ಬೆಂಗಳೂರು ಮಹಾನಗರ ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ. ಮಹಾನಗರಿಯಲ್ಲಿ ಜನಸಂಖ್ಯೆ ಜೊತೆ ವಾಹನಗಳ ಸಂಖ್ಯೆಯೂ ಏರುತ್ತಿದೆ. ಕೆಲವರು ಜವಾಬ್ದಾರಿಯಿಲ್ಲದೇ ಪಾರ್ಕಿಂಗ್ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನಲ್ಲಿ 85 ಕಡೆ ಪೇ & ಪಾರ್ಕಿಂಗ್

ಬೆಂಗಳೂರಿನಲ್ಲಿ 85 ಕಡೆ ಪೇ & ಪಾರ್ಕಿಂಗ್

  • Share this:
ಸಿಲಿಕಾನ್ ಸಿಟಿ, ಉದ್ಯಾನ ನಗರಿ ಅಂತಾ ಕರೆಸಿಕೊಳ್ಳೋ ಬೆಂಗಳೂರೆಂದರೆ (Bengaluru) ತಕ್ಷಣ ನೆನಪಾಗೋದು ಇಲ್ಲಿನ ಟ್ರಾಫಿಕ್ ಜಾಮ್ (Traffic Jam) ಸಮಸ್ಯೆ. ಅದರಲ್ಲೂ ಸಿಕ್ಕಸಿಕ್ಕಲ್ಲಿ ವಾಹನಗಳನ್ನು (Vehicle)  ಪಾರ್ಕಿಂಗ್ (Parking)  ಮಾಡ್ತಿರೋದ್ರಿಂದನೂ ಟ್ರಾಫಿಕ್ ಉಂಟಾಗುತ್ತೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಲಾಗ್ತಿದೆ. ಇದರಿಂದ ಹೆವಿ ಟ್ರಾಫಿಕ್ ಹೆಚ್ಚಾಗ್ತಿದೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ (BBMP) ಹೊಸ ಪ್ಲಾನ್ ಮಾಡಿದೆ. ಈ ಹಿಂದೆ ಬ್ರಿಗೇಡ್ ರೋಡ್​​ನಲ್ಲಿ ಬಿಬಿಎಂಪಿ ಪೇ & ಪಾರ್ಕಿಂಗ್ ಮಾಡಿತ್ತು. ಇದೀಗ ಅದೇ ರೀತಿ ಬೆಂಗಳೂರು ನಗರದ 85 ಕಡೆ ಪೇ & ಪಾರ್ಕಿಂಗ್ ಮಾಡಲು ಪಾಲಿಕೆ ಮುಂದಾಗಿದೆ. ಸ್ಥಳಗಳನ್ನು (Location)  ಕೂಡ ಗುರುತಿಸಿದೆ.

ಕೊರೋನಾ ನಂತರ ಬೆಂಗಳೂರು ಮಹಾನಗರ ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ. ಮಹಾನಗರಿಯಲ್ಲಿ ಜನಸಂಖ್ಯೆ ಜೊತೆ ವಾಹನಗಳ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಲ್ಲಿ ವಾಹನ ಓಡೋ ಸ್ಪೀಡ್ ಕೆಲವು ರಸ್ತೆಗಳಲ್ಲಿ ತುಂಬಾ ಸ್ಲೋ ಆಗ್ತಿದೆ. ಕಾರಣ ಸಣ್ಣ ರಸ್ತೆಯಲ್ಲೂ ಎರಡೂ ಕಡೆ ಪಾರ್ಕಿಂಗ್ ಮಾಡ್ತಾರೆ. ಜೊತೆಗೆ ಕೆಲವರು ಜವಾಬ್ದಾರಿಯಿಲ್ಲದೇ ಪಾರ್ಕಿಂಗ್ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನ 85 ಕಡೆ ಪೇ & ಪಾರ್ಕಿಂಗ್

ಬೆಂಗಳೂರಿನಲ್ಲಿ ಪಾರ್ಕಿಂಗ್ ಸಂಕಷ್ಟಕ್ಕೆ ತೆರೆ ಎಳೆಯಲು ಬ್ರಿಗೇಡ್ ರೋಡ್ ಬಳಿ ಪೇ & ಪಾರ್ಕಿಂಗ್ ಮಾಡಿದ್ರು. ಅದರ ಮುಂದುವರಿದ ಭಾಗವೇ ಪೇ & ಪಾರ್ಕ್ ಇನ್ನಷ್ಟು ಹೆಚ್ಚು ಮಾಡಲು ಬಿಬಿಎಂಪಿ ಮುಂದಾಗಿದೆ. ಸದ್ಯ 11 ಪೇ & ಪಾರ್ಕಿಂಗ್ ಇದ್ದು, ಇದರ ಸಂಖ್ಯೆಯನ್ನು 85ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಪೇ & ಪಾರ್ಕಿಂಗ್ ನೀತಿ 2.O ಜಾರಿಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

pay and parking at 85 locations in Bengaluru BBMP MEETING
ಬೆಂಗಳೂರಿನಲ್ಲಿ 85 ಕಡೆ ಪೇ & ಪಾರ್ಕಿಂಗ್


ಇದನ್ನೂ ಓದಿ: ಕೆನಡಾದಲ್ಲಿ ಉದ್ಯೋಗ, ವಾಸ್ತವ್ಯ ಹೂಡಲು ಬಯಸುವವರಿಗೆ ಶುಭಸುದ್ದಿ!

ಕಳೆದೆರಡು ದಿನಗಳ ಹಿಂದೆ ವಿಕಾಸಸೌಧದಲ್ಲಿ ಪೇ & ಪಾರ್ಕಿಂಗ್ ಸಂಬಂಧ ನಗರಾಭಿವೃದ್ದಿ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ, ಟ್ರಾಫಿಕ್ ಪೊಲೀಸ್ ಕಮಿಷನರ್, DULT ಕಮಿಷನರ್ ನೇತೃತ್ವದಲ್ಲಿ ಈ ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಪೇ & ಪಾರ್ಕಿಂಗ್ ಪಾಲಿಸಿ 2.O ಜಾರಿಗೆ ಅಧಿಕಾರಿಗಳ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ದೊರೆತಿದೆ. 2020ರಲ್ಲಿ ಸಿದ್ಧಪಡಿಸಲಾದ ಪೇ & ಪಾರ್ಕಿಂಗ್ ನೀತಿಯನ್ನೇ ಬಹುತೇಕ ಅಂತಿಮಗೊಳಿಸಿದ್ದಾರೆ.

ಪೇ & ಪಾರ್ಕಿಂಗ್ ಜಾರಿಗೆ ಕಾರಣ

* ಹೆಚ್ಚು ಕಮ್ಮಿ ಒಂದು ಕೋಟಿ ವಾಹನಗಳು ಬೆಂಗಳೂರಲ್ಲಿದೆ
*ಪ್ರತಿ ವರ್ಷ 10% ವಾಹನಗಳು ಹೊಸದಾಗಿ ಸೇರ್ಪಡೆಯಾಗುತ್ತಿದೆ.
*ಸರಾಸರಿ ಗಂಟೆಗೆ 15 ಕಿಮೀ ಟ್ರಾಫಿಕ್ ಇದೆ
*ಘನ ವಾಹನಗಳದ್ದು ಗಂಟೆಗೆ ಸರಾಸರಿ 10 ಕಿಮೀ ಟ್ರಾಫಿಕ್ ಇದೆ
*2031ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಾಹನಗಳ ದಟ್ಟಣೆ ಹಾಗೂ ಸುವ್ಯವಸ್ಥಿತ ಪಾರ್ಕಿಂಗ್ ಗುರಿ

ಬೆಂಗಳೂರಿನ 11 ಪ್ರಮುಖ ರಸ್ತೆಗಲ್ಲಿ ಈಗಾಗಲೇ ಪೇ & ಪಾರ್ಕಿಂಗ್ ಇದೆ. ಹೊಸದಾಗಿ 85 ರಸ್ತೆಗಳನ್ನು ಪೇ & ಪಾರ್ಕಿಂಗ್ ಗೆ ಗುರುತು ಮಾಡಲಾಗಿದೆ. ಹೀಗಾಗಿ ಸುವ್ಯವಸ್ಥಿತ ಪಾರ್ಕಿಂಗ್ ಪಾಲಿಸಿ ಜಾರಿ ಮಾಡಲು ಚಿಂತನೆ ನಡೆದಿದೆ. ಬಿಬಿಎಂಪಿ, DULT, ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಯೋಗದಲ್ಲಿ ಹೊಸ ಪಾಲಿಸಿ ಜಾರಿಯಾಗಲಿದೆ.

ಸರ್ಕಾರಕ್ಕೆ ಸಲ್ಲಿಕೆಯಾದ ಶುಲ್ಕದ ಸಂಭಾವ್ಯ ಪಟ್ಟಿ

*ಸಣ್ಣ ಕಾರುಗಳಿಗೆ ವರ್ಷಕ್ಕೆ ₹ 1000
*ಮಧ್ಯಮ ಗಾತ್ರ ಕಾರುಗಳಿಗೆ ವರ್ಷಕ್ಕೆ ₹3000- ₹4000
*MUV, SUV ಕಾರುಗಳಿಗೆ ವರ್ಷಕ್ಕೆ ₹5000
*ಸ್ಥಳಕ್ಕೆ ತಕ್ಕಂತೆ ಪಾರ್ಕಿಂಗ್ ದರ ಬದಲಾವಣೆ
*ಪೇ & ಪಾರ್ಕಿಂಗ್ ಮೀಸಲು ಜಾಗದ ನಿಲುಗಡೆಗೆ ₹25 ರೂಪಾಯಿಯಿಂದ ₹75 ವರೆಗೆ ದರ ನಿಗದಿ
*ಸ್ಥಳ/ ಏರಿಯಾಗೆ ಅನುಗುಣವಾಗಿ ಗಂಟೆಗೆ ಮೇಲಿನ ದರ ನಿಗದಿ

ಇದನ್ನೂ ಓದಿ: ಬಸ್​ನಲ್ಲಿ ಯುವತಿಯರನ್ನು ದಿಟ್ಟಿಸಿ ನೋಡಿದ್ರೆ ಅರೆಸ್ಟ್ ಆಗೋದು ಪಕ್ಕಾ

ಒಟ್ಟಿನಲ್ಲಿ ರಾಜಧಾನಿಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ, ಟ್ರಾಫಿಕ್ ಕಿರಿಕಿರಿ ಆಗೋದನ್ನು ತಪ್ಪಿಸಲು ಪೇ & ಪಾರ್ಕಿಂಗ್ ಸಂಖ್ಯೆಗಳನ್ನು ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ. ಈ ಮೂಲಕ ಟ್ರಾಫಿಕ್ ಕಡಿವಾಣಕ್ಕೆ ತನ್ನ ಪ್ರಯತ್ನ ಮಾಡಿದೆ.
Published by:Thara Kemmara
First published: