Power Cut: ಬೆಂಗಳೂರಿಗರೇ ಗಮನಿಸಿ, ಇಂದು ಮತ್ತು ನಾಳೆ ವಿದ್ಯುತ್ ಸಮಸ್ಯೆ: ಇಲ್ಲಿದೆ ಏರಿಯಾ ಪಟ್ಟಿ

Bengaluru Power Cut: ಬೆಂಗಳೂರಿನ ಜನತೆ ವಿದ್ಯುತ್ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತೆ ಎಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಪ್ರತಿನಿತ್ಯ ಒಂದಿಲ್ಲ ಒಂದು ಏರಿಯಾಗಳಲ್ಲಿ 4 ರಿಂದ 5 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bengaluru Power Cut: ಬೆಂಗಳೂರಿನ ಜನತೆ ವಿದ್ಯುತ್ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತೆ ಎಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಪ್ರತಿನಿತ್ಯ ಒಂದಿಲ್ಲ ಒಂದು ಏರಿಯಾಗಳಲ್ಲಿ 4 ರಿಂದ 5 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಪ್ರತಿದಿನದ ವಿದ್ಯುತ್ ಪೂರೈಕೆ(Electricity Supply)ಯಲ್ಲಿ ಉಂಟಾಗುವ ಸಮಸ್ಯೆಗೆ ಬೆಸ್ಕಾಂ (BESCOM) ತನ್ನದೇ ಕಾರಣಗಳನ್ನು ನೀಡುತ್ತಿದೆ. ನಗರದಾದ್ಯಂತ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ ಅಂದ್ರೆ ಜನವರಿ 25, 26 ರಂದು ಬೆಂಗಳೂರಿನ ಕೆಲ ಬಡವಾಣೆ(Area)ಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಸಮಸ್ಯೆ ಎದುರಿಸಲಿರುವ ಬಡಾವಣೆಗಳ ಪಟ್ಟಿಯನ್ನು ಬೆಸ್ಕಾಂ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಏರಿಯಾ ಹೆಸರು ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ಇಂದು ವಿದ್ಯುತ್ ಕಡಿತಗೊಳ್ಳಲಿರುವ ಏರಿಯಾಗಳು

ಶಾಂತಿನಗರ, ಬಿಕಾಸಿಪುರ, ಇಸ್ರೋ ಲೇಔಟ್, ಸಿದ್ದಾಪುರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಸಿದ್ದಣ್ಣ ಲೇಔಟ್, ಕಿಮ್ಸ್ ಕಾಲೇಜು ರಸ್ತೆ, ಹನುಮಗಿರಿ ಲೇಔಟ್, ವಿನಾಯಕ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಗಾಂಧಿನಗರ ರಸ್ತೆ, ಕಾಳೇನ ಅಗ್ರಹಾರ, ಜೆಪಿ ನಗರ1 ರಿಂದ 5 ಹಂತಗಳು.

ದಕ್ಷಿಣ ವಲಯದ ಚಿಕ್ಕಲಸಂದ್ರ, ಮಾರತ್ತಹಳ್ಳಿ, ಕಾವೇರಿ ಲೇಔಟ್, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ, ಎಚ್‌ಎಸ್‌ಆರ್ ಲೇಔಟ್‌ನ 8 ಮತ್ತು 9ನೇ ಹಂತ ಮತ್ತು ಬೆಳ್ಳಂದೂರು ಮೇಲ್ಸೇತುವೆ ಸರ್ಜಾಪುರ ರಸ್ತೆಯವರೆಗೆ.

ಇದನ್ನೂ ಓದಿ: Bagalkote: ಏ ನಾಗರಾಜ್, ಇದನ್ನ ಇಮ್ಮಿಡಿಯೇಟ್ ಮಾಡಿಕೊಡು: ಸಚಿವ MTBಗೆ ಸಿದ್ದರಾಮಯ್ಯ ಕರೆ 

ಪೂರ್ವ ವಲಯದ ಸುದ್ದಗುಂಟೆ ಪಾಳ್ಯ, ಕೆ.ಜಿ.ಪುರ ಮುಖ್ಯರಸ್ತೆ, ಥಣಿಸಂದ್ರ ಮುಖ್ಯರಸ್ತೆ ಮತ್ತು ಗಾಯತ್ರಿ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯದಲ್ಲಿ ನ್ಯೂ ಬಿಇಎಲ್ ರಸ್ತೆ, ಮತ್ತಿಕೆರೆ ಮುಖ್ಯರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಕೆಎಚ್‌ಬಿ ಕಾಲೋನಿ, ಜಕ್ಕೂರು ಮುಖ್ಯರಸ್ತೆ, ಆರ್‌ಟಿ ನಗರ ಮತ್ತು ನೃಪತುಂಗ ರಸ್ತೆ, ನಾರಾಯಣಪುರ ಮತ್ತು ಶೋಭಾ ಕ್ರಿಸಾಂಥೆಮಮ್ ಅಪಾರ್ಟ್‌ ಮೆಂಟ್‌ ನಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.

ಪಶ್ಚಿಮ ವಲಯದಲ್ಲಿ ಚಾಮುಂಡಿ ನಗರ, ಗಾಂಧಿಬಜಾರ್‌, ಬಿಎಚ್‌ಇಎಲ್‌ ಲೇಔಟ್‌, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಬಿಡಿಎ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೊಂದರೆಯಾಗಲಿದೆ.

ಜನವರಿ 26 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಇಸ್ರೋ ಲೇಔಟ್, 24 ನೇ ಮುಖ್ಯ ಜೆಪಿ ನಗರ, ಲಕ್ಷ್ಮಿ ರಸ್ತೆ ಕುಮಾರಸ್ವಾಮಿ ಲೇಔಟ್ ಮತ್ತು ದೊಡ್ಡಕಮ್ಮನಹಳ್ಳಿ ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

ಇದನ್ನೂ ಓದಿ:  ಬಸವಣ್ಣನವರ ಅನುಭವ ಮಂಟಪವನ್ನೇ ಮರುಸೃಷ್ಟಿಸುವ ಯತ್ನ ನಡೆಸಿ; CM Bommai

ಉತ್ತರ ವಲಯದಲ್ಲಿ ಸುಂದರ್ ನಗರ, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ಬಾಗಲೂರು ಮುಖ್ಯರಸ್ತೆ, ಮಾರುತಿ ನಗರ, ದ್ವಾರಕಾ ನಗರ ಮತ್ತು ವಿವೇಕ್ ಮಾರ್ವೆಲ್ಸ್ ಅಪಾರ್ಟ್‌ ಮೆಂಟ್ ಸೇರಿದಂತೆ ಆಯಾ ನಿಲ್ದಾಣಗಳಲ್ಲಿ ನಿರ್ವಹಣಾ ಕಾಮಗಾರಿಯಿಂದ ತೊಂದರೆಯಾಗಲಿದೆ. ಇಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳುವ ನಿರೀಕ್ಷೆಯಿದೆ.

ಸಂಕಷ್ಟದಲ್ಲಿ Work From Home ಉದ್ಯೋಗಿಗಳು

ಬೆಂಗಳೂರಿನಲ್ಲಿ ಕೊರೊನಾ ಸ್ಪೋಟ ಹಿನ್ನೆಲೆ ರಾಜ್ಯ  ಸರ್ಕಾರ ಖಾಸಗಿ ಕಂಪನಿಗಳಿಗೆ ತನ್ನ ಉದ್ಯೋಗಿಗಳಿಗ ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅದೇ ರೀತಿ ಎಷ್ಟೋ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕುವಂತಾಗಿದ. ಬೆಸ್ಕಾಂನ ನಂಬದ ಜನರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Mahmadrafik K
First published: