PU ಪರೀಕ್ಷೆಗೆ ಕಟ್ಟಿದ ಶುಲ್ಕ ವಾಪಸ್​ ಕೊಡಿ ಎಂದು ಪೋಷಕರ ಒತ್ತಾಯ; ಶಿಕ್ಷಣ ಇಲಾಖೆಗೆ ಮತ್ತೊಂದು ತಲೆಬಿಸಿ

6,86,680 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಪ್ರತಿ ಸಾಮಾನ್ಯ ವಿದ್ಯಾರ್ಥಿಯಿಂದ ತಲಾ 190 ರೂ. ಪರೀಕ್ಷಾ ಶುಲ್ಕ ಹಾಗೂ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ 50 ರೂಪಾಯಿ ಪಡೆಯಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು(ಜೂ.08): ಸೆಕೆಂಡ್​ ಪಿಯುಸಿ ಫಲಿತಾಂಶ ವಿಚಾರ ಸದ್ಯ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.‌ ಪರೀಕ್ಷೆ ಬರೆಯದೆ ಫಲಿತಾಂಶ ನೀಡುವ ಬಗ್ಗೆ ಚರ್ಚೆ ಹೆಚ್ಚಾಗ್ತಿದೆ. 200ಕ್ಕೂ ಹೆಚ್ಚು ಕಾಲೇಜಿನ ಅಭಿಪ್ರಾಯ ಪಡೆದು ರುಪ್ಸಾ ಖಾಸಗಿ ಒಕ್ಕೂಟ ಸಲಹೆ ನೀಡಿದೆ. ಇದರ ಜೊತೆಗೆ ಪರೀಕ್ಷೆಗೆ ಕಟ್ಟಿದ ಶುಲ್ಕ‌ ವಾಪಾಸ್ ಕೊಡುವಂತೆ ಪೋಷಕರು ಒತ್ತಾಯಿಸುತ್ತಿರುವುದು ಶಿಕ್ಷಣ ಇಲಾಖೆಗೆ ತಲೆಬಿಸಿ ತಂದಿದೆ.

ಕೊರೋನಾ ಆರ್ಭಟ ಹಿನ್ನಲೆ, ರಾಜ್ಯ ಸರ್ಕಾರ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದೆ. ಆದ್ರೆ, ಈಗ ಹಲವಾರು ಸಮಸ್ಯೆಗಳು ಎದುರಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯನ್ನ ಕ್ಯಾನ್ಸಲ್ ಮಾಡಲಾಯ್ತು. ಈಗ ವಿದ್ಯಾರ್ಥಿಗಳನ್ನ ಹೇಗೆ ತೇರ್ಗಡೆ ಏನೆಲ್ಲಾ ಕ್ರೈಟೀರಿಯ ಬಳಕೆ ಮಾಡ್ಬೇಕು ಅಂತ ಪಿಯು ಬೋರ್ಡ್ ನಾನಾ ಕಸರತ್ತು ಮಾಡ್ತಿದೆ. ರುಪ್ಸಾ ಕರ್ನಾಟಕ ಸಂಘಟನೆ, ರಾಜ್ಯದ 200ಕ್ಕೂ ಅಧಿಕ ಕಾಲೇಜುಗಳೊಂದಿಗೆ ಚರ್ಚೆ ನಡೆಸಿದೆ. ಇದಕ್ಕೆ ಕೆಲವು ಸಲಹೆಗಳನ್ನ ನೀಡಿದ್ದು, ಹಲವು ಸವಾಲುಗಳ ಪ್ರಸ್ತಾಪವನ್ನ ಮಾಡಿದೆ. ಅವು ಯಾವುವು ಅನ್ನೋದನ್ನ ನೊಡೋದಾದ್ರೆ,

ಇದನ್ನೂ ಓದಿ:Explained: ಕೋವಿಡ್ ಸಂದರ್ಭದಲ್ಲಿ, ಗರ್ಭಿಣಿಯರು ಮತ್ತು ತಾಯಂದಿರಿಗೆ ಇದು ಗೊತ್ತಿರಲೇಬೇಕು !

ರುಪ್ಸಾ ಸಂಘಟನೆ ನೀಡಿದ ಆ 3 ಸಲಹೆಗಳೇನು..?  • SSLC ಪ್ರತಿ ವಿಷಯದ ಶೇ.30ರಷ್ಟು ಅಂಕ

  • ಮೊದಲ ಪಿಯುಸಿ ವಿಷಯವಾರು ಶೇ‌.50ರಷ್ಟು ಅಂಕ

  • 2ನೇ ಪಿಯುಸಿಯಲ್ಲಿ ಪ್ರಾಯೋಗಿಕ ತರಗತಿ, ಮಧ್ಯವಾರ್ಷಿಕ ಹಾಗೂ ಜರುಗಿದ ಇತರೆ ಪರೀಕ್ಷೆಯಿಂದ‌ ಶೇ.20ರಷ್ಟು ಅಂಕ


ಪರೀಕ್ಷೆ ರದ್ದತಿಯಿಂದ ಎದುರಾಗೋ ಸವಾಲುಗಳೇನು..?

ವಿದ್ಯಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಈ ಮೊದಲು ಅಂಕ ಆಧಾರ, ಇದೀಗ  ಗ್ರೇಡ್ ಆಧಾರದಲ್ಲಿ ಫಲಿತಾಂಶ ನೀಡಲಾಗುತ್ತದೆ. ನೌಕರಿ ಪಡೆಯಲು ಹಳಬರೊಂದಿಗೆ ಸಂಘರ್ಷದ ಸ್ಪರ್ಧೆ ಏರ್ಪಡುತ್ತದೆ. CET, COMED-K ಪರೀಕ್ಷೆಗೆ ಪಿಯುಸಿ ಅಂಕ ಪರಿಗಣಿಸುವುದು ತಾರತಮ್ಯ ಮಾಡಿದಂತೆ.  ಕೇಂದ್ರಿಯ ವಿದ್ಯಾರ್ಥಿಗಳ 10ನೇ ತರಗತಿ ಅಂಕ‌ ಹೆಚ್ಚು. ರಾಜ್ಯ ಪಠ್ಯ ಓದುವ ಮಕ್ಕಳ ಅಂಕ ಕಡಿಮೆ ಎಂಬಂತೆ ಆಗುತ್ತದೆ. ಪಿಯುಸಿ ಫಲಿತಾಂಶ ಪ್ರಕ್ರಿಯೆಯಿಂದ ರಾಜ್ಯ ಮಕ್ಕಳಿಗೆ ಅನ್ಯಾಯವಾಗುತ್ತದೆ.  ಪಿಯುಸಿ ವಿಷಯಗಳು SSLC ವಿಷಯಗಳು ಒಂದೇ ರೀತಿ ಇರದೇ ಇರುವುದು. ಪಿಯುಸಿಯಲ್ಲಿ ನಿರಂತರ ಮೌಲ್ಯಮಾಪನ ಇರದೇ ಇರುವುದು. ಈ ಕಾರಣಕ್ಕಾಗಿ ಪರೀಕ್ಷೆಗೆಂದು ಕಟ್ಟಿದ ಶುಲ್ಕ ವಾಪಸ್ ನೀಡುವಂತೆ ಪಿಯು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮನವಿ ಮಾಡಲಾಗಿದೆ.

Karnataka Politics: ಯಡಿಯೂರಪ್ಪಗೆ ನಾಯಕತ್ವ ಬದಲಾವಣೆ ಬಗ್ಗೆ ನಿಲುವು ತಿಳಿಸುವಂತೆ ಸೂಚಿಸಿದೆಯಾ ಹೈಕಮಾಂಡ್?

6,86,680 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಪ್ರತಿ ಸಾಮಾನ್ಯ ವಿದ್ಯಾರ್ಥಿಯಿಂದ ತಲಾ 190 ರೂ. ಪರೀಕ್ಷಾ ಶುಲ್ಕ ಹಾಗೂ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ 50 ರೂಪಾಯಿ ಪಡೆಯಲಾಗಿದೆ. ವಿದ್ಯಾರ್ಥಿನಿಯರಿಗೆ ಶುಲ್ಕದಿಂದ ವಿನಾಯಿತಿ ನೀಡಿದ್ದು, 6 ಲಕ್ಷ 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬರೊಬ್ಬರಿ 11 ಕೋಟಿ ಪರೀಕ್ಷಾ ಶುಲ್ಕ ಸಂಗ್ರಹವಾಗಿದೆ. ಈ ಶುಲ್ಕವನ್ನು ವಾಪಸ್ ನಿಡುವಂತೆ ಪೋಷಕರ ಸಮನ್ವಯ ಸಮಿತಿ ಒತ್ತಾಯಿಸುತ್ತಿದೆ.

ಒಟ್ಟಿನಲ್ಲಿ ಕೊರೋನಾದಿಂದ ಪಿಯು ಪರೀಕ್ಷೆಯನ್ನೇ ರದ್ದು ಮಾಡಿರುವ ಶಿಕ್ಷಣ ಇಲಾಖೆಗೆ ಫಲಿತಾಂಶ ನೀಡೋದು ಕಷ್ಟ ತಂದಿದೆ. ದ್ವಿತೀಯ ಪಿಯುಸಿ ಶುಲ್ಕ ವಾಪಸ್ ವಿಚಾರ ಹಾಗೂ ಫಲಿತಾಂಶದ ವಿಚಾರ ಸರ್ಕಾರಕ್ಕೆ ಚಾಲೆಂಜ್ ಆಗಿದ್ದು, ಇದನ್ನ ಯಾವ ರೀತಿ ಬಗೆಹರಿಸುತ್ತೆ ಅಂತ ಕಾದು ನೊಡಬೇಕು.
Published by:Latha CG
First published: