ಮಕ್ಕಳಲ್ಲಿ ಎರಡು ದಿನಕ್ಕಿಂತ ಹೆಚ್ಚು ಕೋವಿಡ್​ ಲಕ್ಷಣ ಕಂಡುಬಂದರೆ ತಕ್ಷಣ ಟೆಸ್ಟ್​ ಮಾಡಿಸಿ: BBMP ಮನವಿ

BBMP Safety Guidelines for Children from COVID-19: ನಗರದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಬಾರದಂತೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಟೆಸ್ಟಿಂಗ್ ಯಾವ ರೀತಿ ಮಾಡಬೇಕು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು

ಸಭೆ ನಡೆಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ

ಸಭೆ ನಡೆಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ

  • Share this:
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ಗುರುತಿಸಿ, 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಗುಣಲಕ್ಷಣಗಳು ಕಂಡುಬರುವ ಮಕ್ಕಳಿಗೆ ಕೋವಿಡ್ ಪರೀಕ್ಷೆ (COVID-19 Test for Children) ಮಾಡಲು ಕ್ರಮವಹಿಸಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ COVID-19 ಸೋಂಕು ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸಮಿತಿ ಜೊತೆ ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ನಗರದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಬಾರದಂತೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಟೆಸ್ಟಿಂಗ್ ಯಾವ ರೀತಿ ಮಾಡಬೇಕು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಅದರಂತೆ ನಗರದ ಎಲ್ಲಾ ಶಾಲೆಗಳಲ್ಲೂ ನೋಡಲ್ ಅಧಿಕಾರಿಯನ್ನು ಗುರುತಿಸಿ ಆ ಶಾಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಜೊತೆ ಶಾಲೆಯ ನೋಡಲ್ ಅಧಿಕಾರಿಯನ್ನು ಟೈ-ಅಪ್ ಮಾಡಬೇಕು. ಶಾಲೆಗೆ ಬರುವ ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ದಿನಗಳ ಕಾಲ ಸೋಂಕು ಲಕ್ಷಣ ಕಂಡುಬಂದರೆ ಅಂತಹ ಮಕ್ಕಳನ್ನು ಶಾಲೆಗೆ ಬಾರದಂತೆ ತಿಳಿಸಬೇಕು. ಆ ಬಳಿಕ ಸೋಂಕು ಲಕ್ಷಣವಿರುವ ಮಕ್ಕಳ ಮಾಹಿತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರೆ ಅಂತಹ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ಮಾಡಬೇಕು ಎಂದರು.

ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಲಕ್ಷಣ ಕಂಡುಬರುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಬಹುತೇಕ ಮಕ್ಕಳಿಗೆ ನೆಗೆಟಿವ್ ಬರುತ್ತಿದೆ. ಈ ಸಂಬಂಧ 2 ದಿನಕ್ಕಿಂತ ಹೆಚ್ಚು ಸೋಂಕು ಲಕ್ಷಣಗಳಿರುವ ಹಾಗೂ ಇತರೆ ಖಾಯಿಲೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು ತಿಳಿಸಿದರು.

ಶಾಲೆಗೆ ಹೋಗುವ ಮಕ್ಕಳ ಜೊತೆ ಸಂಪರ್ಕ ಹೊಂದಿರುವವರಿಗೆ ಲಸಿಕೆ ನೀಡಬೇಕು. ಇದರಿಂದ ಎಲ್ಲರೂ ಸುರಕ್ಷಿತವಾಗಿರಬಹುದಾಗಿರುತ್ತದೆ. ನಗರದಲ್ಲಿ ಮಕ್ಕಳಲ್ಲಿ ಹೆಚ್ಚು ಕೋವಿಡ್ ಸೊಂಕು ಕಂಡುಬರುತ್ತಿಲ್ಲ.  ಈ ಸಂಬಂಧ 0 ರಿಂದ 12 ವರ್ಷದ ಮಕ್ಕಳಿಗೆ ಶೇ. 7.21 ಹಾಗೂ 13 ರಿಂದ 18 ವರ್ಷದ ಮಕ್ಕಳಿಗೆ ಶೇ. 8.21 ಸೋಂಕು ಕಂಡುಬರುತ್ತಿದೆ. ಮಕ್ಕಳಿಗೆ ಈ ಕಾಲದಲ್ಲಿ ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ರೀತಿಯ ಲಕ್ಷಣಗಳು ಕಂಡುಬಂದು ಒಂದು ವಾರದೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.

ತಾಂತ್ರಿಕ ತಜ್ಞರ ಸಮಿತಿ ಜೊತೆ ಸಭೆ:ತಾಂತ್ರಿಕ ತಜ್ಞರ ಸಮಿತಿ ಜೊತೆ ನಡೆದ ಸಭೆಯಲ್ಲಿ ಸೀರೋ ಸಮೀಕ್ಷೆ ಹಾಗೂ ಜಿನೋಮ್ ಸೀಕ್ವೆನ್ಸ್ ಸಂಬಂಧಿಸಿದಂತೆ ಚರ್ಚಿಸಲಾಯಿತು. ಈ ಸಂಬಂಧ ಸೆರೋ ಸಮೀಕ್ಷೆ ಮಾಡಿರುವ ಸಂಬಂಧ ಇನ್ನೂ ವಿವರವಾದ ಮಾಹಿತಿ ನೀಡಲು ಸಮಿತಿಯಲ್ಲಿರುವ ತಜ್ಞರು ತಿಳಿಸಿದ್ದು, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಇದನ್ನೂ ಓದಿ: Covid-19: ಕೋವಿಡ್ ಕುರಿತಾದ ಫೇಕ್​ ನ್ಯೂಸ್​ ಹಂಚಿಕೆಯಲ್ಲಿ ಭಾರತದ್ದೇ ಮೇಲುಗೈ; ಅಧ್ಯಯನ

ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚು ಡೆಲ್ಟಾ ತಳಿಗಳನ್ನು ತೋರಿಸಿಲ್ಲ.  ನಗರದಲ್ಲಿ ಬೇರೆ ಯಾವುದೇ ರೂಪಾಂತರಗಳು ಕಂಡುಬಂದಲ್ಲಿ ಪರೀಕ್ಷಿಸಲು ತಜ್ಞರ ಸಮಿತಿ ಸಲಹೆ ನೀಡಿದೆ.  ಸಮಿತಿಯು ಜೀನೋಮ್ ಸೀಕ್ವೆನ್ಸಿಂಗ್ ಮುಂದುವರಿಸಲು ಸೂಚಿಸಿದೆ ಮತ್ತು ಅದರ ಪ್ರಕಾರ, ಬಿಬಿಎಂಪಿ ಮಾದರಿಗಳನ್ನು ಸಂಗ್ರಹಿಸುತ್ತದೆ ಮತ್ತು ನಗರದಲ್ಲಿ ಬೇರೆ ಯಾವುದೇ ರೂಪಾಂತರಗಳು ಕಂಡುಬಂದಿವೆಯೇ ಎಂದು ಪರೀಕ್ಷಿಸಲಾಗುತ್ತದೆ.  ಎರಡು ಬಾರಿ ಲಸಿಕೆ ಪಡೆದವರಿಗೆ ಕೋವಿಡ್ ಸೋಂಕು ಕಂಡುಬಂದವರಿಂದ ಹೆಚ್ಚು ಸ್ಯಾಂಪಲ್ಸ್ ಪಡೆದು ಜಿನೋಮ್ ಸೀಕ್ವೆನ್ಸ್ ಮಾಡಲಾಗುತ್ತದೆ.

ಇದನ್ನೂ ಓದಿ: EXPLAINED: Dengue ಕೊರೋನಾ ನಂತರ ಜನರನ್ನು ಕಾಡಲಿದೆಯೇ ಡಿ 2 ಡೆಂಗ್ಯೂ ? ಇಲ್ಲಿದೆ ವಿವರ

ಜೀನೋಮ್ ಸೀಕ್ವೆನ್ಸಿಂಗ್ ಅನ್ನು ಅಗತ್ಯವಿರುವ ಎಲ್ಲ ರೀತಿಯಲ್ಲಿ ನಡೆಸಲಾಗುತ್ತದೆ ಮತ್ತು ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.ಸಭೆಯಲ್ಲಿ ವಿಶೇಷ ಆಯುಕ್ತರು ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲ ಬುಗ್ಗಿ, ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸದಸ್ಯರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Published by:Sharath Sharma Kalagaru
First published: