Stomach flu: ಪೋಷಕರೇ ಎಚ್ಚರ.. ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ವಿಚಿತ್ರ ಹೊಟ್ಟೆ ಜ್ವರ!

Stomach flu ಅಥವಾ ಹೊಟ್ಟೆ ಜ್ವರ ಎಂದರೇನು? Bengaluru ಮಕ್ಕಳಲ್ಲಿ ಹೊಟ್ಟೆ ಜ್ವರ ಹೆಚ್ಚಾಗಿರುವುದು ಏಕೆ? stomach flu symptoms ಏನು? ಹೊಟ್ಟೆ ಜ್ವರ ಸಮಯದಲ್ಲಿ ಏನನ್ನು ತಿನ್ನಬೇಕು (what to eat)?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೊರೊನಾ (Corona) ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಮಕ್ಕಳು ಶಾಲೆಯ ಕಡೆಗೆ ಮುಖ ಮಾಡಿರಲಿಲ್ಲ. ಇದೀಗ ಶಾಲೆ ಪುನಾರಂಭಗೊಂಡು (schools reopening) ಒಂದು ತಿಂಗಳಾಗಿದ್ದು, ಮಕ್ಕಳು ಶಾಲೆಯತ್ತ ಧಾವಿಸುತ್ತಿದ್ದಾರೆ. ಆದರೆ ಈ ನಡುವೆ ಬೆಂಗಳೂರಿನ ಮಕ್ಕಳಲ್ಲಿ ವಿಚಿತ್ರವಾದ ಹೊಟ್ಟೆ ಜ್ವರ (Stomach flu) ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುವ ಈ ಹೊಟ್ಟೆ ಜ್ವರವನ್ನು ವೈರಲ್ ಗ್ಯಾಸ್ಟ್ರೋ ಎಂಟರೈಟಿಸ್ (viral gastroenteritis) ಎಂದು ಕರೆಯಲಾಗುತ್ತದೆ. ದಿನಕ್ಕೆ 10 ರಿಂದ 12 ಮಕ್ಕಳಲ್ಲಿ ಈ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ಸ್ಟೊಮಕ್ ಫ್ಲೂ ಕಾಣಿಸಿಕೊಂಡಿರುವ ಬಗ್ಗೆ ಖಚಿತತೆ ನೀಡಿದ್ದಾರೆ.

  ಹೊಟ್ಟೆಜ್ವರ ಲಕ್ಷಣಗಳು 

  ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಬಹುದು. ಸಾಮಾನ್ಯವಾಗಿ ಹೊಟ್ಟೆಯ ಸೆಳೆತ, ಅತಿಸಾರ ಮತ್ತು ವಾಂತಿ, ಉರಿಯೂತ, ಅಸ್ವಸ್ಥತೆ, ನಿರ್ಜಲೀಕರಣ ಇದು ಸ್ಟೊಮಕ್ ಫ್ಲೂನ ಪ್ರಮುಖ ಲಕ್ಷಣವಾಗಿದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿದ್ದು, ನಿಕಟ ಸಮುದಾಯಗಳಲ್ಲಿ ಏಕಾಏಕಿ ಸಂಭವಿಕೆ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್‌ನ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ್ತಿ ಡಾ. ಪರಿಮಳಾ ವಿ ತಿರುಮಲೇಶ್ "ಹೊಟ್ಟೆ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಅನೇಕ ಮಕ್ಕಳು ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದಾರೆ, ಕೆಲವರಿಗೆ ಭೇದಿ ಉಂಟಾಗುತ್ತಿದೆ. ಸಂಬಂಧಿತ ಶೀತ ಅಥವಾ ಕೆಮ್ಮು ಸಹ ಕಾಣಿಸಿಕೊಳ್ಳುತ್ತಿದೆ'' ಎಂದು ಹೇಳಿದರು.

  ಯಾವ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ? 

  ಪ್ರತಿನಿತ್ಯ 1 - 12 ವರ್ಷದೊಳಗಿನ 12 ಮಕ್ಕಳಲ್ಲಿ ಸ್ಟೊಮಕ್ ಫ್ಲೂ ವರದಿಯಾಗುತ್ತಿದೆ. ಇದರಲ್ಲಿ ಕೆಲವರು ಒಂದು ವರ್ಷಕ್ಕಿಂತ ಕಿರಿಯವರಾಗಿದ್ದರೆ, ಇನ್ನು ಕೆಲವೇ ಕೆಲವು 8 ವರ್ಷ ಮೇಲ್ಪಟ್ಟ ಮಕ್ಕಳು ಇದ್ದಾರೆ ಎಂದು ಹೇಳಿದರು. ಹೊಟ್ಟೆಯ ದೋಷಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಕಾರಣದಿಂದ ಮತ್ತು ಮುಂಗಾರಿನ ಸಮಯದಲ್ಲಿ ಸಾಮಾನ್ಯವಾಗಿದ್ದರೂ, ಪ್ರವಾಹಕ್ಕೆ ಕಾರಣವಾದ ಮಳೆ, ಒಳಚರಂಡಿ ನೀರು ಶುದ್ಧ ನೀರಿನೊಂದಿಗೆ ಮಿಶ್ರಣಗೊಳ್ಳುವುದು ಕೂಡ ಈ ಫ್ಲೂಗೆ ಕಾರಣವಿರಬಹುದು ಎಂದು ವೈದ್ಯರು ಶಂಕಿಸುತ್ತಾರೆ.

  ವೈದ್ಯರು ಹೇಳೋದೇನು? 

  ಇದು ಅಪಾರ್ಟ್‍ಮೆಂಟ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನೇಕ ಮಕ್ಕಳು ಸೋಂಕಿನಿಂದ ಬಳಲುತ್ತಿದ್ದಾರೆ. ಮಳೆಗಾಲದಲ್ಲಿ ಇಂತಹ ರೋಗಗಳು ಸಾಮಾನ್ಯವಾಗಿದ್ದು, ಪ್ರತಿದಿನ ಸರಾಸರಿ 3-5 ಪ್ರಕರಣಗಳು ದಾಖಲಾಗುತ್ತವೆ,’’ ಎಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಸಲಹೆಗಾರ ಡಾ. ಶ್ರೀಕಾಂತ್ ಕೆ.ಪಿ. ಹೇಳುತ್ತಾರೆ. ಹೆಚ್ಚಿನ ಮಕ್ಕಳು ಮೂರರಿಂದ ಐದು ದಿನದೊಳಗೆ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇನ್ನು ಹಲವರಲ್ಲಿ ಆಸ್ಪತ್ರೆಗೆ ದಾಖಲಾಗುವಷ್ಟು ತೀವ್ರವಾಗಿರುತ್ತದೆ. ಕೆಲವು ಮಕ್ಕಳ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದುಂಟು. ಮತ್ತಷ್ಟು ಮಕ್ಕಳು ಕರುಳಿನ ದೀರ್ಘಕಾಲಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿವರಿಸಿದರು.

  ಇದನ್ನೂ ಓದಿ: Omicron: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ್ದೇನು?

  ಯುನೈಟೆಡ್ ಸ್ಟೇಟ್‍ನಲ್ಲಿ ಹೊಟ್ಟೆ ಜ್ವರಕ್ಕೆ ಕಾರಣವಾದ ವೈರಸ್ ಎಂದರೆ ನೋರೋವೈರಸ್ ಅಥವಾ ರೋಟಾವೈರಸ್ ಎಂದು ಹೇಳಲಾಗುತ್ತಿದೆ. ಈ ಹೊಟ್ಟೆ ಜ್ವರಕ್ಕೆ ಮನೆಯಲ್ಲಿಯೇ ಔಷಧಿಗಳನ್ನು ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

  ಇನ್ನು ಇಂದು ಕೊರೊನಾದ (Corona) ಹೊಸ ರೂಪಾಂತರಿ ತಳಿ ಓಮಿಕ್ರಾನ್​​ (Omicron) ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್​ (Karnataka Health Minister Dr K Sudhakar) ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹೆ ಸಮಿತಿಯ (Covid Technical Advisory Committee) ಸಭೆ ನಡೆಯಿತು. ನಂತರ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳ ಬಳಿಕ ಸಚಿವರು ತಿಳಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಸಲಹೆ, ಸೂಚನೆ ನೀಡಿದ್ದಾರೆ. ವಿದೇಶದಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಒಂದು ವಾರ ಮನೆಯಲ್ಲಿ ಕ್ವಾರಂಟೈನ್ ಮಾಡಬೇಕಿದೆ. ಪ್ರತಿದಿನ ಸುಮಾರು ಎರಡುವರೆ ಸಾವಿರ ಪ್ರಯಾಣಿಕರು ವಿದೇಶದಿಂದ ಆಗಮಿಸ್ತಾರೆ. ಕೊರೊನಾ ಗುಣಲಕ್ಷಣಗಳಿದ್ದರೆ ಐದನೇ ದಿನ ಮತ್ತೊಂದು ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು. ಏಳನೇ ದಿನ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಹೊರಗಡೆ ಹೋಗಬಹುದು. ಟೆಲಿ ಮಿಡಿಸಿನ್, ಆಪ್ ಮೂಲಕ ಕ್ವಾರಂಟೈನ್ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
  Published by:Kavya V
  First published: